ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Culture Literature

Posted on 10-03-2025 |

Share: Facebook | X | Whatsapp | Instagram


ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ರೈತ ಚಳುವಳಿ ನನ್ನ ಬದುಕು ರೂಪಿಸಿದೆ 

ನೆಂಪೆ ದೇವರಾಜ್ 

ತೀರ್ಥಹಳ್ಳಿ ಮಾ.10 ರೈತ ಚಳುವಳಿ ನನ್ನ ಬದುಕು ರೂಪಿಸಿದೆ ಎಂದು ಜನಪರ ಹೋರಾಟಗಾರ ನೆಂಪೆ ದೇವರಾಜ್ ಹೇಳಿದರು.ಅವರು 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೈತ ಚಳುವಳಿ ಬಗ್ಗೆ ಮಾತನಾಡುತ್ತಿದ್ದರು.1830ರಲ್ಲಿ ಬೂದಿಬಸಪ್ಪನಾಯಕರು ಈ ಭಾಗದಲ್ಲಿ ಮೊದಲ ರೈತ ಚಳುವಳಿ ಪ್ರಾರಂಬಿಸಿದರು ನಂತರ 1942ರಲ್ಲಿ ಮೈಸೂರಿನಲ್ಲಿ ನಡೆದದ್ದು ಕೂಡ ರೈತ ಚಳುವಳಿ ಆಗಿತ್ತು.ಅದು ಕಂದಾಯ ವಸೂಲಿ ಗಲಾಟೆ ಆಗಿತ್ತು. 1950 ಕಾಗೋಡು ರೈತ ಚಳುವಳಿ ನಡೆಯಿತು 

ನಂತರ ನರಗುಂದ ನವಲಗುಂದ ರೈತ ಚಳುವಳಿ ಯಲ್ಲಿ 3ಜನ ರೈತರನ್ನು ಕೊಂದು ಗುಂಡೂರಾವ್ ಸರ್ಕಾರ ರೈತರ ಮೇಲೆ ಕೇಸು ಹಾಕಿತು.

ಶಿವಮೊಗ್ಗ ದಲ್ಲಿ ಕಬ್ಬು ಬೆಳೆಗಾರರ ಸಂಘ ಸ್ಥಾಪನೆ ಮಾಡಿದ ಹೆಚ್.ಎಸ್ ರುದ್ರಪ್ಪ ಎನ್.ಡಿ.ಸುಂದರೇಶ್ ಕಡಿದಾಳು ಶಾಮಣ್ಣ ಕರ್ನಾಟಕ ರಾಜ್ಯ ರೈತ ಸಮನ್ವಯ ಸಮಿತಿ ಹುಟ್ಟು ಹಾಕಿ ರೈತರನ್ನು ಸಂಘಟಿಸಿದರು.ನಂತರ ಜರ್ಮನಿ ಯಿಂದ ಬಂದ ಎಂ.ಡಿ.ನಂಜುಂಡಸ್ವಾಮಿ ಸೇರಿ 1982 ಅಕ್ಟೋಬರ್ 2 ರಂದು ಕರ್ನಾಟಕ ರಾಜ್ಯ ರೈತ ಸಂಘ ಶಿವಮೊಗ್ಗ ದಲ್ಲಿ ಉದಯವಾಯಿತು.ರೈತರ ವೇದಿಕೆಯಲ್ಲಿ ರಾಜಕಾರಣಿಗಳಿಗೆ ಪ್ರವೇಶ ಇರಲಿಲ್ಲ ಶಿವಮೊಗ್ಗ ದಲ್ಲಿಯೇ ಜೆ.ಹೆಚ್.ಪಟೇಲ್, ಜಾರ್ಜ್ ಫರ್ನಾಂಡಿಸ್,ಇದ್ದರೂ ಅವರನ್ನು ವೇದಿಕೆಗೆ ಕರೆಯಲಿಲ್ಲ.ಮತ್ತು ರೈತ ಸಂಘ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎಂಬ ನಿರ್ಣಯವನ್ನು ಕೈ ಗೊಳ್ಳಲಾಯಿತು.ಆ ಸಮಯದಲ್ಲಿ ರೈತ ಸಂಘ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇದ್ದರೆ ಸರಳ ಬಹುಮತ ದಿಂದ ಅಧಿಕಾರ ಹಿಡಿಯುತ್ತಿತ್ತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ತೀರ್ಥಹಳ್ಳಿಯ ಮುಡುಬ ಸೇತುವೆ ಉದ್ಘಾಟನೆಗೆ ಹೆಲಿಕಾಪ್ಟರ್ ನಲ್ಲಿ ಗುಂಡೂರಾವ್ ಬರಬೇಕಾಗಿತ್ತು ಅಷ್ಟರಲ್ಲಿ ಕಡಿದಾಳ್ ಶಾಮಣ್ಣ ಒಬ್ಬ ಸೇತುವೆ ಕೆಲಸಗಾರ ಮಲ್ಲಣ್ಣ ಎಂಬಾತನಿಗೆ ಜೋಡು ಕಂಬಳಿ ಹೊದಿಸಿ ಆತನಿಂದ ಸೇತುವೆ ಉದ್ಘಾಟನೆ ಮಾಡಿಸಿದರು.

ಇದಲ್ಲದೆ ಭದ್ರಾವತಿ ತಾಲೂಕಿನ ರೈತ ಹೋರಾಟದ ಬಗ್ಗೆ ತಿಳಿಸಿದರು.


ಭಾರತದ ಸಾಹಿತ್ಯ ಚರಿತ್ರೆಯಲ್ಲಿ ನಿಜವಾದ ಸಾಹಿತ್ಯ ಕೃತಿ ಎಂದರೆ ಸಂವಿಧಾನ 

ಎನ್ ರವಿಕುಮಾರ್

ಸಂವಿಧಾನದ ಬಗ್ಗೆ ಮಾತನಾಡಿದ ಅವರು ಭಾರತದ ಮಹಾತಾಯಿ ಎಂದರೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವುದು ಭಾರತದ ಮಾನವತಾ ವಾದಿಗಳಾದ ಬುದ್ದ ಬಸವ ಹೇಳಿದ ಮಾತುಗಳೇ ಆಗಿವೆ.ಇಡೀ ಜೀವನದಲ್ಲಿ ಅವರು 34,000 ಪುಸ್ತಕ ಬರೆದಿದ್ದಾರೆ ಅವರ 22 ವಾಲ್ಯುಮ್ ಗಳಲ್ಲಿ ಎಲ್ಲಿಯೂ ಮತ್ತೊಂದು ಜನಾಂಗವನ್ನು ಟೀಕಿಸಿಲ್ಲ ಅವರು ಗಾಂಧಿ ಗಿಂತ ಅಥವಾ ಅದಕ್ಕಿಂತ ಹೆಚ್ಚಿನ ಅಹಿಂಸಾ ವಾದಿಗಳಾಗಿದ್ದರು.ಕೇವಲ ಪ್ರಸ್ತಾವನೆ ಓದಿದರೆ ಸಾಕು ಸಂವಿಧಾನ ಅರ್ಥವಾಗುತ್ತದೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.ಅಂಬೇಡ್ಕರ್ ಎರಡು ಮತ್ತು ಮೂರನೇ ಸಮ್ಮೇಳನದಲ್ಲಿ ಭಾರತಕ್ಕೆ ಬೇಕಾಗಿರುವುದು ರಾಜಕೀಯ ಸ್ವಾತಂತ್ರ್ಯ ಅಲ್ಲ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಎಂದರು.ಒಟ್ಟಿನಲ್ಲಿ ಮಹಾ ಮಾನವತಾವಾದಿ ಅಂಬೇಡ್ಕರ್ ಇಲ್ಲದಿದ್ದರೆ ಭಾರತ ಮದ್ಯ ಪ್ರಾಚ್ಯದ ರಾಷ್ಟ್ರಗಳಂತೆ ಇರಬೇಕಾಗುತ್ತಿತ್ತು.ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಸಂವಿಧಾನ ಇರುತ್ತಿರಲಿಲ್ಲ ಎಂದರು.


ಮಂತ್ರ ಮಾಂಗಲ್ಯ ಮದುವೆ ಮನುಕುಲದ ಶ್ರೇಷ್ಠ ಸಂಪ್ರದಾಯ 

ಮಂತ್ರ ಮಾಂಗಲ್ಯ ಮದುವೆ ಮನುಕುಲದ ಶ್ರೇಷ್ಠ ಸಂಪ್ರದಾಯ ಎಂದು ಮೋಹನ್ ಮುನ್ನೂರು ಹೇಳಿದರು.

ಮಂತ್ರ ಮಾಂಗಲ್ಯ ಬ್ರಾಹ್ಮಣ ವಿರೋಧಿ ಸಂಪ್ರದಾಯ ಅಲ್ಲ ಕುವೆಂಪು ಬ್ರಾಹ್ಮಣ ವಿರೋಧಿ ಅಲ್ಲ ಬ್ರಾಹ್ಮಣ್ಯದ ವಿರೋಧಿ ಬ್ರಾಹ್ಮಣ್ಯ ಹೆಣ್ಣಿನ, ವಿಧವೆಯರ ವಿರೋಧಿ.ಅದು ಹುಟ್ಟಿನ ಕಾರಣಕ್ಕೆ ಮನುಷ್ಯರನ್ನು ಬೇರೆ ಬೇರೆ ಮಾಡುತ್ತದೆ. ಕುವೆಂಪುರವರಿಗೆ ಹೆಣ್ಣು ಮತ್ತು ಪ್ರಕೃತಿ ಒಂದೇ ಮಂತ್ರ ಮಾಂಗಲ್ಯ ದಲ್ಲಿ ಹೆಣ್ಣು ಗಂಡಿನ ಅಧೀನದಲ್ಲಿ ಇರಬೇಕೆಂದಿಲ್ಲ ಎಂದಿದ್ದಾರೆ.ಆದರೆ ಅವರು ಮಂತ್ರ ಮಾಂಗಲ್ಯ ಬರೆಯುವಾಗ ಎಲ್ಲಾ ಮಂತ್ರಗಳನ್ನು ಓದಿ ಯಾವುದು ಹೆಣ್ಣು ಗಂಡು ಭೇದ ಮಾಡುವುದಿಲ್ಲವೋ ಅದನ್ನು ಆಯ್ದುಕೊಂಡು ಅರ್ಧನಾರೀಶ್ವರ ಶಿವನ ಸ್ತುತಿ ಹೇಳಿ ಮಂತ್ರ ಮಾಂಗಲ್ಯದಲ್ಲಿ ಹೆಣ್ಣು ಗಂಡು ಸಮಾನ ಎಂದು ಪ್ರತಿ ಪಾದಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ.ಎಸ್.ಸೋಮಶೇಖರ್ ಮಾತನಾಡಿ ದೇವರಾಜ್ ರೈತರಿಗೆ ಇತ್ತೀಚಿನ ಮಾಹಿತಿ ಕೊಡಬೇಕಾಗಿತ್ತು ಮತ್ತು ಕಸ್ತೂರಿ ರಂಗನ್ ವರದಿ ಅನುಕೂಲ ಅನಾನುಕೂಲ ದ  ಬಗ್ಗೆ ತಿಳಿಸಬೇಕಾಗಿತ್ತು. ರವಿಕುಮಾರ್ ಸಂವಿಧಾನ ದ ಬಗ್ಗೆ ಅದೊಂದು ಮನೆ ಇದ್ದಂತೆ ಮನೆಯನ್ನು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ ಉಪಯೋಗಿಸಬಹುದೇ ವಿನಃ ಮನೆಯೇ ಮುರಿಯಬಾರದು ಎಂದು ಹೇಳಿದ್ದು ಉತ್ತಮ ವಿಷಯ.ಗಾಂದಿ ಲಂಡನ್ನಲ್ಲಿ ಬ್ರಿಟಿಷ್ ರಾಣಿಗೆ ನೀವು ಭಾರತದ ಸಾಮ್ರಾಜ್ನೀ ಎನ್ನಲು ನಾಚಿಕೆಯಾಗಬೇಕು ಎಂದರೆ ಅವರ ಧೈರ್ಯ ಮೆಚ್ಚಬೇಕು ಎಂದರು.

ಮಂತ್ರ ಮಾಂಗಲ್ಯ ಎಂದರೆ ಜಾತಿ ವಿಜಾತಿ ಬಡವ ಬಲ್ಲಿದ ಭೇದವಿಲ್ಲದೆ ಯಾರು ಬೇಕಾದರೂ ಮದುವೆ ಮಾಡಿಸುವ ಮುಂದೆ ನೋಂದಣಿ ಮಾಡಿಸುವ ಅಗತ್ಯ ಇರುವ ಮದುವೆ ಎಂದರು.

Search