Posted on 11-11-2025 |
Share: Facebook | X | Whatsapp | Instagram
ಶಿಕಾರಿಪುರ ನ. 11 ವೀರ ವನಿತೆ ದಿನಾಚರಣೆಯನ್ನು ಎಲ್ಲಾ ಜಾತಿಯವರು ಆಚರಣೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ ಹೇಳಿದರು ಅವರು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಒನಕೆ ಓಬವ್ವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತಿದ್ದರು.
ಒನಕೆ ಓಬವ್ವ ಧೀರ ವೀರ ಶೂರ ಮಹಿಳೆಯಾಗಿದ್ದು ರಾಜ್ಯದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದವಳು ಇಂಥವರನ್ನು ರಾಜ್ಯದ ಜನತೆ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಚಿತ್ರದುರ್ಗದ ಮದಕರಿ ನಾಯಕರ ವಿರುದ್ಧ ಹೈದರ್ ಅಲಿ ದಾಳಿಗೆ ಬಂದಾಗ ಏಕಾಂಗಿಯಾಗಿ ಆ ಗುಪ್ತ ಮಾರ್ಗವನ್ನು ಕಾದು ಹೋರಾಟ ಮಾಡಿ ನೂರಾರು ಜನರ ತಲೆಯನ್ನು ತಾನು ಕೈಯಲ್ಲಿ ಹಿಡಿದ ಒನಕೆಯಿಂದಲೇ ಒಡೆದು ಹಾಕಿದ ಮಹಿಳೆ ಸಾಮಾನ್ಯರಲ್ಲ ಇಂಥವರನ್ನು ಯಾವಾಗಲೂ ಕೂಡ ನೆನೆದು ಅವರಿಗೆ ಗೌರವವನ್ನು ತೋರಿಸಬೇಕು ಎಂದರು.
ಪುರಸಭಾ ಅಧ್ಯಕ್ಷರಾದ ಸುನಂದ ಮಂಜುನಾಥ ಬಾಳೆಕಾಯಿ, ತಾಲೂಕು ಛಲವಾದಿ ಸಮಾಜದ ಅಧ್ಯಕ್ಷರಾದ ಮಾಲತೇಶ್ ಸರ್ಕಾರ್,ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಸಮಿತಿಯ ಅಧ್ಯಕ್ಷರಾದ ಕೆ.ಆರ್.ರಾಜಕುಮಾರ ತಾಲೂಕಿನ ತಹಶೀಲ್ದಾರ್ ಮಂಜುಳಾ ಶಂಕರ್ ಭಜಂತ್ರಿ, ಶಿಕಾರಿಪುರ ತಾಲೂಕ್ ಪಂಚಾಯತ್ ಕಾರ್ಯ ನಿರ್ವಹಣಾ ಧಿಕಾರಿಗಳಾದ ಎನ್. ಜಿ. ನಾಗರಾಜ್ ಹಾಗೂ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಕೋಲಾರದ ಮಾಜಿ ಶಾಸಕ ಹಾಗೂ ಸಾಹಿತಿ ಡಿ.ಎಸ್. ವೀರಯ್ಯನವರು ವಿಶೇಷ ಉಪನ್ಯಾಸವನ್ನು ನೀಡಿದರು.