ಮಾರ್ಚ್ 3 ರಿಂದ ನೀರು ಸರಬರಾಜು ನೌಕರರ ಮುಷ್ಕರ ನೀರು ಸರಬರಾಜು ಸ್ಥಗಿತ

Social Program struggle

Posted on 02-03-2025 |

Share: Facebook | X | Whatsapp | Instagram


ಮಾರ್ಚ್ 3 ರಿಂದ ನೀರು ಸರಬರಾಜು ನೌಕರರ ಮುಷ್ಕರ ನೀರು ಸರಬರಾಜು ಸ್ಥಗಿತ

  ಶಿವಮೊಗ್ಗ  ಕರ್ನಾಟಕ ರಾಜ್ಯ ನೀರು ಸರಬರಾಜು ನೌಕರರ ಸಂಘದ ವತಿಯಿಂದ ಅವರ ಬೇಡಿಕೆಯ ಈಡೇರಿಕೆಗಾಗಿ ಅನಿರ್ದಿಷ್ಟವಾದ ಮುಷ್ಕರ ಹೂಡಿರುವುದರಿಂದ ದಿನಾಂಕ 3 ರ ಸೋಮವಾರದಿಂದ ನೀರು ಸರಬರಾಜು ಸ್ಥಗಿತ ಗೊಳ್ಳುತ್ತದೆ.

ಕರ್ನಾಟಕ ರಾಜ್ಯನೀರು ಸರಬರಾಜು ನೌಕರರ ಸಂಘದ ಹೊರಗುತ್ತಿಗೆ ನೌಕರರು 15 -20 ವರ್ಷಗಳಿಂದ ಹೊರಗುತ್ತಿಗೆ ಪದ್ಧತಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಅವರ ಕಾಯಮ್ಮಾತಿ ಬೇಡಿಕೆ ಈಡೇರದೆ ಇರುವುದರಿಂದ 2019-20 ರಲ್ಲಿ ಬೆಂಗಳೂರು ಬಿಬಿಎಂಸಿ ಮೈಸೂರು ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ನೌಕರರು ನ್ಯಾಯಾಲಯದ ಮೊರೆ ಹೋಗಿದ್ದರು. ಘನ ನ್ಯಾಯಾಲಯವು 4 /7/ 23 ರಲ್ಲಿ ಆದೇಶವನ್ನು ಹೊರಡಿಸಿ ಸಮಾನ ಕೆಲಸಕ್ಕೆ ಸಮಾನ ವೇತನದ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಬದಲಾಗಿ ಯಥಾಸ್ಥಿತಿ ಮುಂದುವರಿಸುತ್ತೇವೆ ಎಂಬ ಹಿಂಬರಹವನ್ನು ನೌಕರ ಸಂಘಕ್ಕೆ ನೀಡಿರುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ನೀರು ಸರಬರಾಜು ನೌಕರರ ಸಂಘದವರು ದಿನಾಂಕ 3 -3- 25 ರ ಸೋಮವಾರದಿಂದ ಅನಿರ್ದಿಷ್ಟವಾದ ಮುಷ್ಕರವನ್ನು ಕೈಗೊಂಡಿದ್ದಾರೆ.

Search