ಶಿಕಾರಿಪುರದಲ್ಲಿ ವಿಜೃಂಭಣೆಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಶಿಕಾರಿಪುರ ಸ್ಥಳೀಯ

Posted on 08-03-2025 |

Share: Facebook | X | Whatsapp | Instagram


ಶಿಕಾರಿಪುರದಲ್ಲಿ ವಿಜೃಂಭಣೆಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಶಿಕಾರಿಪುರ ಮಾರ್ಚ್ 8

ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷವಾದ ಕಾರ್ಯಕ್ರಮ ನಡೆಯಿತು. 

ಈ ಮಹಿಳಾ ದಿನಾಚರಣೆಯ ಉದ್ಘಾಟನೆಯನ್ನು ಚಿತ್ರನಟಿ ಮಾಳವಿಕ ಅವಿನಾಶ್, ಉದ್ಘಾಟಿಸಿ ಮಾತನಾಡಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮಾನವಾಗಿ ದುಡಿಯುತ್ತಿದ್ದಾರೆ ಈಗ ಮಹಿಳೆಯರು ಪ್ರವೇಶ ಮಾಡದ ಯಾವುದೇ ಉದ್ಯಮಗಳು ಇಲ್ಲ ಎಂದು ಹೇಳಬಹುದು ಎಂದು ವೈಮಾನಿಕ ಸಾಧನೆಯಿಂದ ಹಿಡಿದು ರೈತ ಮಹಿಳೆಯವರೆಗೆ ಪ್ರತಿಯೊಬ್ಬರು ಅತ್ಯಂತ ಯಶಸ್ವಿ ಉದ್ಯಮದಾರರಾಗಿ ಬೇಸಾಯಗಾರರಾಗಿ ಕೆಲಸವನ್ನು ಮಾಡುತ್ತಿದ್ದಾರೆ ಶಿಕಾರಿಪುರ ದಂತಹ ತಾಲೂಕಿನಲ್ಲಿಯೇ ಇಷ್ಟೊಂದು ಜನ ಮಹಿಳಾ ಉದ್ಯಮಿಗಳು ಇರುವುದು ಸಂತೋಷ ತಂದಿದೆ ಎಂದರು.ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ಸಂಸದ ರಾಘವೇಂದ್ರ ಅವರು ಭಾಗವಹಿಸಿ ಹತ್ತಾರು ವರ್ಷಗಳ ಹಿಂದಿನ ಸ್ಥಿತಿಗಿಂತ ಇಂದಿನ ಮಹಿಳೆಯರ ಸ್ಥಿತಿ ಸಾಕಷ್ಟು ಮಾರ್ಪಟ್ಟಿದೆ ಅವರ ಸಾಧನೆ ಎಲ್ಲ ಕ್ಷೇತ್ರಗಳಲ್ಲೂ ಕಂಡು ಬರುತ್ತಿದೆ ಅದರಲ್ಲೂ ಶಿಕ್ಷಕರು ವೈದ್ಯರು ಇಂಜಿನಿಯರ್ಗಳು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಇಷ್ಟೊಂದು ಜನ ಮಹಿಳೆಯರು ಪ್ರಭಾವಿಯಾಗುವುದಕ್ಕೆ ಮುಖ್ಯ ಕಾರಣ ಅವರ ತಾಯಂದಿರು ಎಂದರು.

ಮಹಿಳಾ ವಿಶೇಷ ಸಾಧಕರಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗೌರವ ಪುರಸ್ಕಾರ ಪ್ರಶಸ್ತಿ ಪಡೆದ ಮಹಿಳೆಯರನ್ನು ಸನ್ಮಾನಿಸಲಾಯಿತು ಮತ್ತು ಸ್ವಂತ ಉದ್ಯಮ ನಡೆಸುತ್ತಿರುವ ಎಲ್ಲಾ ಮಹಿಳೆಯನ್ನು ಕರೆಯಿಸಿ, ಅವರವರು ತಯಾರು ಮಾಡಿರುವ ಉತ್ಪನ್ನದ ವಸ್ತುಗಳ ಸ್ಟಾಲ್ ಗಳನ್ನು ಹಾಕಿ ಆ ಉತ್ಪನ್ನಗಳನ್ನು ಪರಿಚಯ ಮಾಡಿಕೊಡುವುದು ಮತ್ತು ಮಾರಾಟ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರಿ ಸಂಘ, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರಿ ಸಂಘ ,ಬಸವೇಶ್ವರ ಸಹಕಾರಿ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕುಶ್ವಿತ ಮಿನರಲ್ಸ್ ಒಕ್ಕೂಟವು ಭಾಗವಹಿಸಿತ್ತು. 

Search