Posted on 15-01-2025 |
Share: Facebook | X | Whatsapp | Instagram
ಶಿವಮೊಗ್ಗ ಜ.15. ಶಿಕಾರಿಪುರದ ನಗರದ ಮಹದೇವಪ್ಪನವರು ರಾಜ್ಯ ಕೃಷಿಕ ಸಮಾಜಕ್ಕೆ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಇಂದು ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿಗಳ ಚುನಾವಣೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಕೃಷಿಕ ಸಮಾಜಕ್ಕೆ ಅಧ್ಯಕ್ಷರಾಗಿ ಭದ್ರಾವತಿಯ ನಾಗರಾಜ ಹೆಚ್. ಎಸ್. ಉಪಾಧ್ಯಕ್ಷರಾಗಿ ಸೊರಬದ ಉಮೇಶ್ ಎಂ. ಪಾಟೀಲ್. ಪ್ರಧಾನ ಕಾರ್ಯದರ್ಶಿಯಾಗಿ ಸಾಗರದ ವಿ.ಜಿ.ಶ್ರೀಧರ್ ಖಜಾಂಚಿಯಾಗಿ ತೀರ್ಥಹಳ್ಳಿಯ ಸತೀಶ್ ಆಯ್ಕೆಯಾಗಿದ್ದಾರೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಕಿರಣ್ ರವರು ಚುನಾವಣಾ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿದ್ದರು ಒಂದು ತಾಲೂಕಿನಿಂದ ಅಧ್ಯಕ್ಷರಿಗೆ ಮತ್ತು ಜಿಲ್ಲಾಪ್ರತಿನಿದಿಗೆ ಸೇರಿ ಎರಡು ಮತಗಳು ಇರುತ್ತವೆ.
ಜಿಲ್ಲೆಯಲ್ಲಿ ಕೃಷಿಕ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು ಜಿಲ್ಲೆಯ 14 ಜನರು ಮತದಾನದ ಹಕ್ಕನ್ನು ಹೊಂದಿದ್ದು ಅಧ್ಯಕ್ಷರಾದಿಯಾಗಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಲ್ಲಾ ತಾಲೂಕಿನ ಅಧ್ಯಕ್ಷರು, ಜಿಲ್ಲಾ ಪ್ರತಿನಿಧಿಗಳು, ಕಿಶಾನ್ ಘಟಕದ ಕಾರ್ಯದರ್ಶಿಗಳಾದ ಶಂಕರ್ ರಾವ್ ಕೃಷಿಕ ಸಮಾಜದ ಪ್ರಮುಖರಾದ ದೇವರಾಜ್ ಪಾಟೀಲ್, ನಾಗರಾಜ್ ಗೌಡರು, ಚಂದ್ರಶೇಖರ್, ಡಿ.ಡಿ. ಶಿವಕುಮಾರ್ ಅಲ್ಪಸಂಖ್ಯಾತ ಕೃಷಿಕ ಸಮಾಜದ ಅಧ್ಯಕ್ಷರಾದ ಹಭಿಬುಲ್ಲ ಮಹೇಶ್ ಹುಲ್ಮಾರ್ ಮೋಹನ್ ಹಾಗೂ ಡಿ.ಡಿ. ಶಿವಕುಮಾರ್ ವಿಶೇಷ ಪ್ರತಿನಿಧಿಗಳಾಗಿ ಸಭೆಯಲ್ಲಿ ಭಾಗವಹಿಸಿದ್ದರು.