ದೆಹಲಿಗೆ ಬಾಂಬ್ - ಪ್ರಧಾನಿ ಬರ್ತಡೇ ಪಾರ್ಟಿಗೆ ಯುವ ಕಾಂಗ್ರೆಸ್ಸಿನಿಂದ ಪ್ರತಿಭಟನೆ

Social Program struggle

Posted on 12-11-2025 |

Share: Facebook | X | Whatsapp | Instagram


ದೆಹಲಿಗೆ ಬಾಂಬ್  -  ಪ್ರಧಾನಿ ಬರ್ತಡೇ ಪಾರ್ಟಿಗೆ  ಯುವ ಕಾಂಗ್ರೆಸ್ಸಿನಿಂದ ಪ್ರತಿಭಟನೆ

ದೆಹಲಿಗೆ ಬಾಂಬ್  -                ಪ್ರಧಾನಿ ಬರ್ತಡೇ ಪಾರ್ಟಿಗೆ  ಯುವ ಕಾಂಗ್ರೆಸ್ಸಿನಿಂದ ಪ್ರತಿಭಟನೆ

ಶಿಕಾರಿಪುರ ನ.12 ಇಲ್ಲಿನ ಯುವ ಕಾಂಗ್ರೆಸ್ ಇಂದು ತಾಲೂಕು ಕಚೇರಿ ಮುಂದೆ ದೆಹಲಿಯಲ್ಲಿ ಬಾಂಬ ಹಾಕಿ ವಿರುದ್ಧ ಘೋಷಣೆ ಕೂಗಿ ಸರ್ಕಾರ ವಿರುದ್ಧ ದೊಡ್ಡ ಪ್ರತಿಭಟನೆಯನ್ನು ನಡೆಸಿತು. 

ಯುವ ಕಾಂಗ್ರೆಸ್ಸಿನ ಮುಖಂಡರು ಮಾತನಾಡಿ ಭಾರತದಲ್ಲಿ ಪ್ರತಿಸಾರಿಯು ಚುನಾವಣಾ ಸಮಯದಲ್ಲಿಯೇ ಈ ರೀತಿಯ ಅವಘಡ ನಡೆಯುತ್ತಿದೆ. ಕೇವಲ 3 ತಿಂಗಳ ಹಿಂದೆ  ಇದೇ ದುಷ್ಕರ್ಮಿಗಳು ಕಾಶ್ಮೀರದ ಪೆಹೆಲ್ಗಾಮ್ ನಲ್ಲಿ ಬಂದೂಕಿನಿಂದ ದಾಳಿ ನಡೆಸಿ ಅಮಾಯಕರಾದ ಪ್ರವಾಸಿಗಳನ್ನು ಕೊಂದು ಭಯೋತ್ಪಾದನೆಯನ್ನು ಮತ್ತೆ ಪ್ರಾರಂಭಿಸಿತು. 

     ಈಗ ಭಾರತದ ರಾಜಧಾನಿ ದೆಹಲಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಕೆಂಪುಕೋಟೆಯ ಬಳಿಯೇ ಬಂದು ಬಾಂಬ್ ಬ್ಲಾಸ್ಟ್ ಮಾಡಲಾಯಿತು. ಇಂತಹ ಸಮಯದಲ್ಲಿ ಪ್ರಧಾನ ಮಂತ್ರಿಗಳು ದೆಹಲಿಯಲ್ಲಿಯೇ ಇದ್ದು ಕೂಡಲೇ ವಿದ್ರೋಹಿಗಳನ್ನು ಹಿಡಿಯುವ ಪ್ರಯತ್ನವನ್ನು ಮಾಡಿಸಬೇಕಿತ್ತು ಹಾಗೂ ಭಾರತದ ಗೃಹ ಮಂತ್ರಿ ಸೈನ್ಯಕ್ಕೆ ಎಚ್ಚರಿಕೆಯನ್ನು ನೀಡಿ ದೇಶದ ಒಳಗಿನ ಗೂಢಚಾರವನ್ನು ಹುರಿದುಂಬಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚ ಬೇಕಾಗಿತ್ತು. 

2008ರಲ್ಲಿ ಮನಮೋಹನ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಮುಂಬೈನಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು ಆ ಸಮಯದಲ್ಲಿ ಮನಮೋಹನ್ ಸಿಂಗ್ ದೆಹಲಿಯಿಂದ ಬಾಂಬೆಗೆ ಬಂದು ಜನರಿಗೆ ಮತ್ತು ಪತ್ರಿಕೆಯವರಿಗೆ ಕರೆದು ಮಾತನಾಡಿ ಅಪರಾಧಿಯನ್ನು ಕೂಡಲೇ ಬಂದಿಸುತ್ತೇವೆ ಎಂದು ಹೇಳಿ ಸೈನಿಕರಿಗೆ ಧೈರ್ಯ ತುಂಬಿದ್ದರು. 2011ರಲ್ಲಿ ಸರಣಿ ಸ್ಫೋಟ ನಡೆದಾಗ ಮತ್ತೆ ಪುನಃ ಪ್ರೆಸ್ ಮೀಟ್ ಮಾಡಿ ಈ ವಿಷಯವನ್ನು ತಿಳಿಸಿ ಅದಕ್ಕೆ ಸರಿಯಾದ ಕ್ರಮವನ್ನು ಕೈಗೊಂಡಿದ್ದರು. ಆ ಸಮಯದಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಮೋದಿ ಅವರು ಬಾಂಬೆಗೆ ಬಂದು 

ಆ ದಿನ ಪ್ರಧಾನಿಯನ್ನು ತೆಗಳಿ ತಕ್ಷಣ ರಾಜೀನಾಮೆಯನ್ನು ಕೊಡಿ ಎಂದು ಒತ್ತಾಯಿಸಿದ್ದರು.

ಆದರೆ ಈಗ ಮೋದಿ ಅವರ ಬಳಿಯೇ ಪ್ರಧಾನಮಂತ್ರಿಯ ಅಧಿಕಾರ ಇದೆ ಬಾಂಬ್ ಬ್ಲಾಸ್ಟ್ ಆಗುವಾಗ ದೆಹಲಿಯಲ್ಲಿಯೇ ಇದ್ದರು. ಆದರೆ ಅಪರಾಧಿಗಳನ್ನು ಯಾವ ಕಾರಣಕ್ಕೂ ಹಾಗೆಯೇ ಬಿಡುವುದಿಲ್ಲ ಎಂಬ ಹೇಳಿಕೆಯನ್ನು ಮಾತ್ರ ನೀಡಿ ಅವರು ಭೂತಾನ್ ಪ್ರಧಾನಿಯ ಹುಟ್ಟು ಹಬ್ಬದ ಆಚರಣೆಗೆ ಹೊರಟು ಹೋದರು. 

ದೇಶದ ಜನ ಬಾಂಬ್ ಭೀತಿಯಿಂದ ಭಯದಿಂದ ನೆರಳುವಾಗ ದೇಶದಲ್ಲಿಯೇ ಇದ್ದು ಧೈರ್ಯ ಕೊಡಬೇಕಾದ ಪ್ರಧಾನ ಮಂತ್ರಿ ವಿದೇಶಕ್ಕೆ ಹೋಗಿರುವುದು ಹಾಗೂ ಗೃಹಮಂತ್ರಿ ಅಮಿತ್ ಶಾ ಕೈಕಟ್ಟಿಕೊಂಡು ಸುಮ್ಮನೆ ಕುಳಿತಿರುವುದು ಪ್ರಜಾಪ್ರಭುತ್ವಕ್ಕೆ ಯೋಗ್ಯವಲ್ಲ. ಪಟ್ಟಣ ಸೂರೆ ಆಗುವಾಗ. ಶೆಟ್ಟಿ ಶೃಂಗಾರವನ್ನು ಮಾಡಿಕೊಳ್ಳುತ್ತಾ ಕುಳಿತಿದ್ದನಂತೆ, ಅದೇ ರೀತಿ ಈಗಿನ ಪ್ರಧಾನಿ ನರೇಂದ್ರ ಮೋದಿ ವರ್ತಿಸುತ್ತಿದ್ದಾರೆ,ಆ ಕಾರಣದಿಂದ ಪ್ರಧಾನಮಂತ್ರಿ ಮೋದಿ ಮತ್ತು ಅಮಿತ್ ಶಾ ತಮ್ಮ ಹುದ್ದೆಗೆ ರಾಜೀನಾಮೆಯನ್ನು ಕೊಟ್ಟು ಮನೆಗೆ ಹೋಗಬೇಕು ಎಂದು ಯುವ ಕಾಂಗ್ರೆಸ್ ಒತ್ತಾಯಿಸಿದೆ.

Search
Recent News