Posted on 11-11-2025 |
Share: Facebook | X | Whatsapp | Instagram
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮತ್ತು ಅವರಲ್ಲಿರುವ ನಿರ್ವಹಣಾ ಕೌಶಲ್ಯಗಳಿಗೆ ಮೆರಗು ನೀಡುವ ಉದ್ದೇಶದಿಂದ ನಗರದ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಮಹಾವಿದ್ಯಾಲಯವು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಾಂಸ್ಕೃತಿಕ ಹಾಗೂ ನಿರ್ವಹಣಾ ಕೌಶಲ್ಯ ಉತ್ಸವವನ್ನು (ಮ್ಯಾನೇಜ್ ಮೆಂಟ್ ಫೆಸ್ಟ್) ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ ಮತ್ತು ಮ್ಯಾನೇಜ್ ಮೆಂಟ್ ಕೌಶಲ್ಯಗಳಿಗೆ ಸಂಬಂಧಿಸಿದ ಸ್ಪರ್ಧೆಗಳಿರುತ್ತವೆ.
ಗಾಯನ, ಛಾಯಾಚಿತ್ರಗ್ರಹಣ, ಮುಖಚಿತ್ರ ರಚನೆ, ಸಮೂಹನೃತ್ಯ, ಸಾಂಪ್ರದಾಯಿಕ ಉಡುಗೆ, ಹೊಂದಾಣಿಕೆ ಕ್ರೀಡೆಗಳು, ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಾವಿಜೇತರಿಗೆ ಪಾರಿತೋಷಕದೊಂದಿಗೆ ನಗದು ಬಹುಮಾನವಿರುತ್ತದೆ.
ಮಹಾವಿದ್ಯಾಲಯದ ಆವರಣದಲ್ಲಿ ನಡೆಯುವ ಈ ಉತ್ಸವವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ) ನ ಅಧ್ಯಕ್ಷರಾದ ಶ್ರೀ ಜಿ.ಎಸ್.ನಾರಾಯಣರಾವ್ ಅವರು ಉದ್ಘಾಟಿಸಲಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಚಂದ್ರಪ್ಪ ಎಸ್.ಗುಂಡಪಲ್ಲಿ , ರಾಷ್ಟ್ರೀಯ ಶಿಕ್ಷಣ ಸಮಿತಿ(ರಿ)ಯ ನಿರ್ದೇಶಕರಾದ ಶ್ರೀ ಅಶ್ವತ್ಥನಾರಾಯಣ ಶ್ರೇಷ್ಠಿ, ಹಾಗೂ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಶ್ರೀ ಸ್ಪಂದನ್ ಹೊಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಾಂಶುಪಾಲರಾದ ಡಾ.ಶಿವಪ್ರಸಾದ ಬಿ.ಎಸ್ ಅವರು ಅಧ್ಯಕ್ಷತೆ ವಹಿಸುವರು.