*ರಾಜ್ಯಮಟ್ಟದ ಸಾಂಸ್ಕೃತಿಕ-ನಿರ್ವಹಣಾ ಕೌಶಲ್ಯ ಉತ್ಸವ* *ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಗೆ ಚಾಂಪಿಯನ್ ಟ್ರೋಪಿ*

Social Program Education

Posted on 17-11-2025 |

Share: Facebook | X | Whatsapp | Instagram


*ರಾಜ್ಯಮಟ್ಟದ ಸಾಂಸ್ಕೃತಿಕ-ನಿರ್ವಹಣಾ ಕೌಶಲ್ಯ ಉತ್ಸವ* *ಜ್ಞಾನದೀಪ  ಸೀನಿಯರ್ ಸೆಕೆಂಡರಿ ಶಾಲೆಗೆ ಚಾಂಪಿಯನ್ ಟ್ರೋಪಿ*

*ರಾಜ್ಯಮಟ್ಟದ ಸಾಂಸ್ಕೃತಿಕ-ನಿರ್ವಹಣಾ ಕೌಶಲ್ಯ ಉತ್ಸವ* *ಜ್ಞಾನದೀಪ  ಸೀನಿಯರ್ ಸೆಕೆಂಡರಿ ಶಾಲೆಗೆ ಚಾಂಪಿಯನ್ ಟ್ರೋಪಿ*


ಶಿವಮೊಗ್ಗ: ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಮಹಾವಿದ್ಯಾಲಯವು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಹಾಗೂ ನಿರ್ವಹಣಾ ಕೌಶಲ್ಯ ಉತ್ಸವದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ 36 ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಗಳಲ್ಲಿ ಶಿವಮೊಗ್ಗದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯು ವಿವಿಧ ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಉತ್ಸವದ ಚಾಂಪಿಯನ್ ಟ್ರೋಫಿಯನ್ನು ಗೆದ್ದುಕೊಂಡಿದೆ.  ಪೇಸ್ ಪದವಿಪೂರ್ವ ಕಾಲೇಜು ದ್ವಿತೀಯ ಚಾಂಪಿಯನ್ ಟ್ರೋಫಿ ಗೆದ್ದಿದ್ದು, ಚಿಕ್ಕಮಗಳೂರಿನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ತೃತೀಯ ಚಾಂಪಿಯನ್ ಟ್ರೋಫಿ ಪಡೆದಿದ್ದಾರೆ.

*ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು:*

ಅತ್ಯುತ್ತಮ ಸಿ.ಇ.ಓ ಪ್ರಶಸ್ತಿ : ಭುವನ್ ಆರ್ ಸಿದ್ಧರಾಮ್ , ಅಕ್ಷರ ಪದವಿಪೂರ್ವ ಕಾಲೇಜು.

*ಮೊಬೈಲ್ ಛಾಯಾಚಿತ್ರಗ್ರಹಣ*: ಪ್ರಥಮ: ಅನ್ವರ್ ಖಾನ್, ಮಂದಾರ ಜ್ಞಾನದಾಯಿನಿ, ದ್ವಿತೀಯ: ಪುನೀತ್ ಎಂ, ಸರ್ಕಾರಿ ಪದವಿಪೂರ್ವ ಕಾಲೇಜು, ನ್ಯಾಮತಿ. ತೃತೀಯ: ಎಂ.ವೈ ಶಾಹಿಬ್, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಚಿಕ್ಕಮಗಳೂರು.

*ಗೀತೆಗಾಯನ* : ಪ್ರಥಮ: ಸುಮೇಧ ಎನ್.ಎಸ್, ಪೇಸ್ ಪದವಿಪೂರ್ವ ಕಾಲೇಜು, ದ್ವಿತೀಯ: ಹೇಮಾ ಆರ್, ಕಸ್ತೂರಬಾ ಮಹಿಳಾ ಪದವಿಪೂರ್ವ ಕಾಲೇಜು, ತೃತೀಯ: ಸ್ವರ..ಡಿ.ವಿ, ಟೀಮ್ ಅಕಾಡೆಮಿ, ಶಿವಮೊಗ್ಗ

ರಸಪ್ರಶ್ನೆ ಸ್ಪರ್ಧೆ(ತಂಡಗಳು): ಪ್ರಥಮ: ಫೇಸ್ ಪದವಿಪೂರ್ವ ಕಾಲೇಜು, ಶಿವಮೊಗ್ಗ,ದ್ವಿತೀಯ: ಕಸ್ತೂರಬಾ ಪದವಿಪೂರ್ವ ಕಾಲೇಜು,ತೃತೀಯ: ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಚಿಕ್ಕಮಗಳೂರು.

*ಮುಖಚಿತ್ರ ರಚನೆ* (ತಂಡಗಳು): ಪ್ರಥಮ: ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಚೂಲ್, ಶಿವಮೊಗ್ಗ ,ದ್ವಿತೀಯ: ಶ್ರೀ ಅರಬಿಂದೋ ಪದವಿಪೂರ್ವ ಕಾಲೇಜು, ಶಿವಮೊಗ್ಗ, ತೃತೀಯ: ಫೇಸ್ ಪದವಿಪೂರ್ವ ಕಾಲೇಜು, ಶಿವಮೊಗ್ಗ,

*ಯೋಚಿಸಿ ಚಿತ್ರ ಬರೆಯುವ ಸ್ಪರ್ಧೆ*(ತಂಡಗಳು): ಪ್ರಥಮ : ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಚೂಲ್, ಶಿವಮೊಗ್ಗ, ದ್ವಿತೀಯ: ಶ್ರೀ ಅರಬಿಂದೋ ಪದವಿಪೂರ್ವ ಕಾಲೇಜು, ತೃತೀಯ: ಫೇಸ್ ಪದವಿಪೂರ್ವ ಕಾಲೇಜು, ಶಿವಮೊಗ್ಗ,

*ಹೊಂದಾಣಿಕೆ ಆಟಗಳು*(ತಂಡಗಳು): ಪ್ರಥಮ: ಕಾನ್ಫಿಡೆಂಟ್ ಪದವಿಪೂರ್ವ ಕಾಲೇಜು, ಕಡೂರು. ದ್ವಿತೀಯ: ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಚೂಲ್, ಶಿವಮೊಗ್ಗ, ತೃತೀಯ: ರಾಷ್ಟ್ರೀಯ ಪದವಿಪೂರ್ವ ಕಾಲೇಜು, ಕೋಣಂದೂರು.

*ಸಮೂಹನೃತ್ಯ*: ಪ್ರಥಮ: ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಚಿಕ್ಕಮಗಳೂರು. ದ್ವಿತೀಯ : ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಚೂಲ್, ಶಿವಮೊಗ್ಗ,ತೃತೀಯ : ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಶಿವಮೊಗ್ಗ

ಫ್ಯಾಷನ್ ಶೋ: ಪ್ರಥಮ : ಕಸ್ತೂರಬಾ ಮಹಿಳಾ ಪದವಿಪೂರ್ವ ಕಾಲೇಜು, ದ್ವಿತೀಯ: ಸರ್ಕಾರಿ ಪದವಿಪೂರ್ವ ಕಾಲೇಜು, ನ್ಯಾಮತಿ. ತೃತೀಯ: ಕಾನ್ಫಿಡೆಂಟ್ ಪದವಿಪೂರ್ವ ಕಾಲೇಜು, ಕಡೂರು.

Search
Recent News