ಮನುಷ್ಯ ಸಂವೇದನೆ ಕಳೆದುಕೊಂಡಿದ್ಧಾನೆ - ಡಾ.ಶ್ರೀಧರ ಮೂರ್ತಿ

Social Program Education

Posted on 01-01-2025 |

Share: Facebook | X | Whatsapp | Instagram


ಮನುಷ್ಯ ಸಂವೇದನೆ ಕಳೆದುಕೊಂಡಿದ್ಧಾನೆ  - ಡಾ.ಶ್ರೀಧರ ಮೂರ್ತಿ

ಶಿವಮೊಗ್ಗ  ಡಿ.29. ಮನುಷ್ಯ ಸಂವೇದನೆ ಕಳೆದುಕೊಂಡಿದ್ದಾನೆ ಆತ ಸದಾ ತಳಮಳದಿಂದ ಕೂಡಿದ್ದು ಆಧುನಿಕ ಹೊಸ ಖಿನ್ನತೆ ಹೊಸ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ ಎಂದು ಬೆಂಗಳೂರಿನ ಮನಶಾಸ್ತ್ರಜ್ಞ ಡಾ.ಶ್ರೀಧರಮೂರ್ತಿ ಹೇಳಿದರು. 

ಅವರು ಬಹುಮುಖಿ ವತಿಯಿಂದ ನಡೆದ 44ನೇ ಕಾರ್ಯಕ್ರಮದಲ್ಲಿ ಏಕಾಗ್ರತೆ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು.

ಇಂದು ಮೊಬೈಲ್ ಗಳು ಮನುಷ್ಯನ ವ್ಯಕ್ತಿತ್ವವನ್ನೇ ಹಾಳು ಮಾಡಿವೆ.ಇಂದು ಸಂಪೂರ್ಣ ಸಮಾಜ ಎಲ್ಲವನ್ನೂ ಬೇಗಬೇಗನೆ ಆಗಬೇಕೆಂದು ಬಯಸುತ್ತದೆ.ಯುವಕರು ಡ್ರಗ್ಸ್ ಗಳಿಗೆ ಬಲಿಯಾಗುತ್ತಿದ್ದಾರೆ.ಮಕ್ಕಳು ಎಲ್ಲವನ್ನು ಕಲಿಯಬೇಕೆಂಬ ಹಂಬಲದಿಂದ ಅವರು ಮಾನಸಿಕ ಸ್ಥಿತಿ ಹಾಳು ಮಾಡುತ್ತಿದ್ದೇವೆ.ಇಂದು ಸಮಾಜಸೇವೆ ಎಂದರೆ ಬಸ್ಟಾಂಡ್ ನಲ್ಲಿ ಮಲಗಿದವನ ಎಬ್ಬಿಸಿ ಕೈಗೊಂದು ಮೊಸುಂಬಿ ಕೊಟ್ಟು ಫೋಟೋ ತೆಗೆಸಿಕೊಂಡರೆ ಮುಗಿಯುತ್ತದೆ.

ಇಂದು ವೈದ್ಯರು ಪ್ರತಿಯೊಂದು ಕಾಯಿಲೆ ಚೆಕ್ ಮಾಡುವುದಕ್ಕು ಆಧುನಿಕ ತಂತ್ರಜ್ಞಾನ ಉಪಯೋಗಿಸುತ್ತಾರೆ.ಮಾನವತೆ ನಾಶವಾಗುತ್ತಿದೆ.ಇಂದು ಡಿಸ್ಕಾಂ ಗೂಗಲೇಷನ್ ಎಂಬ ಕಾಯಿಲೆ ಆವರಿಸಿಕೊಂಡಿದೆ.

ಮಕ್ಕಳಿಗೆ ಆಟಗಳಿಲ್ಲದೆ ಅವರು ದುರ್ಬಲ ರಾಗುತ್ತಿದ್ದಾರೆ.ಮಾಧ್ಯಮಗಳು ವಿಪರೀತ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ.ಮೊಬೈಲ್ ಇಲ್ಲದಿದ್ದರೆ ಬದುಕೇ ಕಳೆದುಕೊಂಡಂತೆ ವರ್ತಿಸುತ್ತಾರೆ.ಸೈಬರ್ ಸಿಖ್ ನೆಸ್ ಹೆಚ್ಚಾಗಿದೆ.ಜನರು ಮೊಬೈಲಿಗೆ ಅಂಟಿಕೊಂಡು ಅಂಟು ರೋಗಕ್ಕೆ ತುತ್ತಾಗುತ್ತಿದ್ದಾರೆ.

ಯುವಕರು ದಿನ ಒಂದಕ್ಕೆ,ಸರಾಸರಿ 150 ಬಾರಿ ಮೊಬೈಲ್ ನೋಡುತ್ತಾರೆ. ಶೇ 87/ ಜನರು ಮೊಬೈಲಿಗೆ ಬಲಿಯಾಗಿದ್ದಾರೆ.ಇಂದು ತಂದೆ ತಾಯಿಗಳು ಮಕ್ಕಳನ್ನು ರೆಸಿಡೆನ್ಸಿಯಲ್ ಸ್ಕೂಲ್ ಗೆ ಕಳಿಸುತ್ತಾರೆ.ಅವರು ದೊಡ್ಡವರಾದ ಮೇಲೆ ತಂದೆ ತಾಯಿ ಯನ್ನು ಓಲ್ಡ್ ಏಜ್ ಹೋಂಗೆ ಕಳಿಸುತ್ತಾರೆ.ಸಮಾಜದಲ್ಲಿ ಮುಗ್ದರು ಎಂದರೆ ಮಾತು ಬಾರದ ಮಕ್ಕಳು, ನಿಜವಾದ ಹುಚ್ಚರು, ಹಾಗೂ ಪೂರ್ಣ ಕುಡುಕರು.ಎಂದರು.

ಉತ್ತಮ ಫೋಟೋ ಗ್ರಾಫರ್ ಆದ ಇವರು ಭಾರತದಾದ್ಯಂತ ತೆಗೆದಿರುವ ಅನೇಕ ಕಪ್ಪು ಬಿಳುಪು ಮತ್ತು ಕಲರ್ ಚಿತ್ರ ತೋರಿಸಿದರು.

ಡಾ.ನಾಗಭೂಷಣ್ ರವರು ಅತಿಥಿಗಳನ್ನು ಪರಿಚಯಿಸಿದರು.

Search