About Us

Image 1

ಆತ್ಮೀಯರೇ ನಮ್ಮ ಕ್ರಾಂತಿ ಕಿಡಿ ಪತ್ರಿಕೆಗೆ ಒಂದು ವರ್ಷ ತುಂಬಿದೆ. ಪತ್ರಿಕೆಯನ್ನು ಪ್ರಾರಂಭಿಸುವ ನಮ್ಮ ಉದ್ದೇಶ ಈಡೇರಿದೆ. ವಸ್ತುನಿಷ್ಠ ವರದಿಯನ್ನು ಜನರಿಗೆ ನೀಡಬೇಕು ಅದರಲ್ಲಿ ನಾಗರಿಕರ ಸಮಸ್ಯೆ ಇತಿಹಾಸ ಸಂಸ್ಕೃತಿ, ವಾಸ್ತುಶಿಲ್ಪಗಳ ಮಹತ್ವ ಎಲ್ಲವನ್ನು ನೀಡಿ ಯುವಕರನ್ನು ಮೊಬೈಲ್ ಗೀಳಿನಿಂದ ತಪ್ಪಿಸಬೇಕು ಎನ್ನುವುದೇ ನಮ್ಮ ಉದ್ದೇಶವಾಗಿತ್ತು. ಕಥೆ ಕವನಗಳನ್ನು ಅವಕಾಶವಿದ್ದಲ್ಲಿ ನಾವು ಪ್ರಕಟಿಸುತ್ತೇವೆ. ನಾನು ಕೆ ಜಿ ವೆಂಕಟೇಶ್ 30 ವರ್ಷಗಳಿಂದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿಯಾಗಿದ್ದೇನೆ ವೃತ್ತಿಯಲ್ಲಿದ್ದಾಗ ಕ್ರಾಂತಿ ದೀಪ ಪತ್ರಿಕೆಗೆ ಸಾಂಸ್ಕೃತಿಕ ವರದಿಗಳನ್ನು ನಾಟಕ ವಿಮರ್ಶೆಗಳನ್ನು ಕಳುಹಿಸುತ್ತಿದ್ದೆ. ಕ್ರಾಂತಿ ದೀಪ ಸಂಪಾದಕರಾದ ಮಂಜುನಾಥ್ ರವರು ನನ್ನ ಗುರುಗಳಾಗಿದ್ದು ಪತ್ರಿಕೆಯ ಎಲ್ಲಾ ಮಜಲುಗಳನ್ನು ಹೇಳಿಕೊಟ್ಟರು. ನಾನು ನಿವೃತ್ತಿಯಾಗುವುದನ್ನೆ ಕಾಯುತ್ತಿದ್ದ ನನ್ನ ವಿದ್ಯಾರ್ಥಿ ಗಣೇಶ್ ಬಿಳಿಗಿ ಕ್ರಾಂತಿಕಿಡಿ ಪತ್ರಿಕೆಯನ್ನು ಪ್ರಾರಂಭಿಸಿ ನನ್ನನ್ನು ಪ್ರಧಾನ ಸಂಪಾದನನ್ನಾಗಿ ಮಾಡಿದರು. ಅವರು ಕೂಡ ವ್ಯವಸ್ಥಾಪಕ ಸಂಪಾದಕರಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಪತ್ರಿಕೆ ಓದುವ ಹುಚ್ಚು ಮೊದಲಿನಿಂದಲೂ ಇತ್ತು ಈಗ ಪತ್ರಿಕೆಯ ಮಾಲೀಕರಾಗಿ ವ್ಯವಸ್ಥಾಪಕ ಸಂಪಾದಕೀಯವನ್ನು ಉತ್ತಮವಾಗಿ ಬರೆಯುತ್ತಿದ್ದಾರೆ. ನಮ್ಮಿಬ್ಬರ ಈ ಪತ್ರಿಕೆಯು ನಿಮ್ಮೆಲ್ಲರ ಪತ್ರಿಕೆಯಾಗಲಿ ಉತ್ತಮ ಓದುಗರಾದ ನೀವು ಪತ್ರಿಕೆ ಸುದ್ದಿ ವಿಷಯಕ್ಕಾಗಿ ನಮ್ಮೊಂದಿಗೆ ಚರ್ಚಿಸಿ. ಎಲ್ಲ ಹಿರಿಯ ಶುಭ ಹಾರೈಕೆ ನಮಗೆ ದಾರಿ ದೀಪ.

Image 3

ಸಂಪಾದಕರು-ಪ್ರಕಾಶಕರು : ಗಣೇಶ್ ಬಿಳಿಗಿ

ಕಳೆದ ೨೫ ವರ್ಷಗಳಿಂದ ಮುದ್ರಣಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಮುದ್ರಣಾಲಯದಲ್ಲಿ ಕಾರ್ಯನಿರ್ವಹಿಸಿ ನನ್ನದೆ ಆದ ಗಣೇಶ್ ಗ್ರಾಫಿಕ್ಸ್& ಪ್ರಿಂರ‍್ಸ್ ಎಂಬ ಸಂಸ್ಥೆ ಪ್ರಾರಂಭಿಸಿ ೧೭ ವರ್ಷಗಳು ಕಳೆದಿವೆ. ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಸುತ್ತಿದ್ದೇನೆ. ಗೆಳೆಯರೊಂದಿಗೆ ಕಾಮಾನ್ ಮ್ಯಾನ್ ಎಂಬ ಸಂಸ್ಥೆ ಕಟ್ಟಿಕೊಂಡು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದೇವೆ. ಸಾಮಾಜಿಕ ಕೆಲಸಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಪತ್ರಿಕೋದ್ಯಮಕ್ಕೆ ಪ್ರವೇಶಿಸುವ ಇಚ್ಚೆ ಬಹುದಿನಗಳ ಕನಸಾಗಿತ್ತು. ಅದನ್ನು ನನಸಾಗಿಸಲು ಹಲವು ವರ್ಷಗಳು ಕಾಯಬೇಕಾಯಿತು. ನನ್ನ ಈ ಕನಸು ನನಸಾಗಿ ನಮ್ಮ ಪತ್ರಿಕೆಗೆ ಒಂದು ವರ್ಷವು ತುಂಬಿದೆ. ಇಂದಿನ ಡಿಜಿಟಲ್ ಮಾಧ್ಯಮದಲ್ಲಿ ನಮ್ಮ ಪಾಕ್ಷಿಕ ಪತ್ರಿಕೆಯಾಗಿರುವುದರಿಂದ ತ್ವರಿತವಾಗಿ ಓದುಗರನ್ನು ತಲುಪಲು ಮತ್ತು ನಿಖರವಾದ ಮಾಹಿತಿಗಳನ್ನು ನೀಡಲು ವೆಬ್ ನ್ಯೂಸ್ ಪೇಜ್ ಆರಂಭಿಸಿದ್ದೇವೆ.

ಕ್ರಾಂತಿಕಿಡಿ ಪತ್ರಿಕೆ ಸಮಾಜದಲ್ಲಿನ ಭ್ರಷ್ಟ ವ್ಯವಸ್ಥೆ ಮತ್ತು ಶೋಷಣೆಯ ವಿರುದ್ಧ ಹೋರಾಟದ ಮುಖ್ಯ ಗುರಿ ಹೊಂದಿದ್ದು, ಜಿಲ್ಲೆಯಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುವ ಉದ್ದೇಶ ಪತ್ರಿಕೆ ಹೊಂದಿದೆ. ತಾವುಗಳು ಪತ್ರಿಕೆಗೆ ಸಹಕಾರ ನೀಡಿದಂತೆ ಈ ವೆಬ್ ನ್ಯೂಸ್ ಪೇಜ್‌ಗೆ ಸಹಕರಿಸುತ್ತಿರೆಂದು ನಮ್ಮ ನಂಬಿಕೆ.

Image 3

ಪ್ರಧಾನ ಸಂಪಾದಕರು : ಡಾ. ಕೆ ಜಿ ವೆಂಕಟೇಶ್

ಕ್ರಾಂತಿಕಿಡಿ ಪತ್ರಿಕೆಯ ಪ್ರಧಾನ ಸಂಪಾದಕನಾದ ನಾನು ಮೂಲತ ಹೊಸನಗರದವನಾಗಿದ್ದು ಅಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜ್ ವಿದ್ಯಾಭ್ಯಾಸವನ್ನು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ, ಎಂ.ಎ. ಪದವಿಯನ್ನು ಮೈಸೂರಿನ ಮಾನಸಗಂಗೋತ್ರಿಯಲ್ಲಿ, ಪಿ ಎಚ್ ಡಿ ಯನ್ನು ಕುವೆಂಪು ವಿವಿಯಲ್ಲಿ ಮುಗಿಸಿದೆ. 9ನೇ ತರಗತಿಯಿಂದ ಬರವಣಿಗೆಯನ್ನು ಪ್ರಾರಂಭಿಸಿದ ನಾನು ಶಿವಮೊಗ್ಗ ಜಿಲ್ಲಾಮಟ್ಟದ ಕಥಾಸ್ಪತ್ರೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದೆ. ನನ್ನ ವಿದ್ಯಾರ್ಥಿಗಳಿಗಾಗಿ ಪ್ರಪಂಚದ ಭಾರತದ ಕರ್ನಾಟಕದ ಇತಿಹಾಸ ಪುಸ್ತಕ ಬರೆದಿದ್ದು. ನೂರಾರು ವಿಚಾರ ಸಂಕೀರಣಗಳಿಗೆ ಭಾಗವಹಿಸಿ ಲೇಖನ ಪ್ರಕಟಿಸಿದ್ದೇನೆ. ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆಯಲ್ಲಿ ಅಂಕಣಕಾರನಾಗಿದ್ದು ಹತ್ತು ವರ್ಷಗಳ ಕಾಲ ಅಂಕಣವನ್ನು ಸುದ್ದಿ ವಿಶ್ಲೇಷಣೆಯನ್ನು ಮಾಡಿದ್ದೇನೆ. ಯೋಗಾಸನ ಚಾರಣ ನಗೆಕೂಟ ನಾಟಕ ಇಷ್ಟವಾದ ಕ್ಷೇತ್ರಗಳಾಗಿದ್ದು 300ಕ್ಕೂ ಹೆಚ್ಚು ನಾಟಕಗಳನ್ನು ನೋಡಿ ವಿಮರ್ಶೆ ಮಾಡಿದ್ದೇನೆ. ಹಾಗೂ ಶಿವಮೊಗ್ಗದ ರಂಗಾಯಣದಲ್ಲಿ ನಾಟಕಗಳಿಗೆ ಸಂಯೋಜಕನಾಗಿ ಕಾರ್ಯ ನಿರ್ವಹಿಸಿದ್ದೇನೆ. 30 ವರ್ಷಕ್ಕೂ ಹೆಚ್ಚು ಕಾಲ ಪ್ರಾಧ್ಯಾಪಕನಾಗಿ ಇತಿಹಾಸ ವಿಷಯದ ಪಾಠ ಮಾಡಿದ್ದು ಯಕ್ಷಗಾನ ಕಬ್ಬಡ್ಡಿ ಕ್ರೀಡೆ ಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದೇನೆ. ಪ್ರವಾಸಿ ಸ್ಥಳಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು 2ಸಾರಿ ಹಿಮಾಲಯ ಚಾರಣ ಮಾಡಿದ್ದು ಎನ್.ಎಸ್.ಎಸ್.ನಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದ ಉತ್ತಮ ಅಧಿಕಾರಿ ಪ್ರಶಸ್ತಿ ಹಾಗೂ ಹಿಮಾಚಲ ಪ್ರದೇಶ ಸರ್ಕಾರದ ಅತ್ಯುತ್ತಮ ಅಧಿಕಾರಿ ಪ್ರಶಸ್ತಿ ಗಳಿಸಿದ್ದೇನೆ. ನನ್ನ ಪತ್ರಿಕೆ ತುಂಬು ಹೃದಯದಿಂದ ಹಾರೈಸಿ ಪತ್ರಿಕೆಯನ್ನು ಕೊಂಡು ಓದಿ ಲೇಖನಗಳಿದ್ದರೆ ಕಳುಹಿಸಿ ,ವರದಿಯಲ್ಲಿ ತಪ್ಪಿದ್ದರೆ ಮುಕ್ತವಾಗಿ ಕಾಮೆಂಟ್ ಮಾಡಿರಿ. ಎಂದೆಂದು ನಿಮ್ಮವನು ಡಾ.ಕೆ.ಜಿ. ವೆಂಕಟೇಶ್

Person 3

ಶಿವಕುಮಾರ್ ಡಿ ಡಿ

ವರದಿಗಾರರು ಶಿಕಾರಿಪುರ

Person 4

ಕೆ ಜಿ ನಾಗೇಶ್

ವರದಿಗಾರರು ಹೊಸನಗರ