ಶಿಕಾರಿಪುರದಲ್ಲಿ ಮತ್ತೆ ಮುಂದುವರೆದ ರೈತರ ಹೋರಾಟ

ಶಿಕಾರಿಪುರ ಸ್ಥಳೀಯ

Posted on 09-03-2025 |

Share: Facebook | X | Whatsapp | Instagram


https://youtu.be/xi9pCvwvgIk
ಶಿಕಾರಿಪುರದಲ್ಲಿ ಮತ್ತೆ ಮುಂದುವರೆದ ರೈತರ ಹೋರಾಟ

ಶಿಕಾರಿಪುರದಲ್ಲಿ ಮತ್ತೆ ಮುಂದುವರೆದ ರೈತರ ಹೋರಾಟ

ಸ್ಥಳಕ್ಕೆ ಕ್ರಾಂತಿ ಕಿಡಿ ವರದಿಗಾರ ಭೇಟಿ 


ಶಿಕಾರಿಪುರ ಮಾ.7 ಶಿಕಾರಿಪುರದಲ್ಲಿ ರೈತರ ಭೂಮಿಯಲ್ಲಿ ಮೆಸ್ಕಾಂ ಕಾಮಗಾರಿ ನಡೆಯುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದ ರೈತರು ಪುನಃ ಇಂದು ಭಾರಿ ಹೋರಾಟಕ್ಕೆ ಪಣತೊಟ್ಟು ಸಿದ್ಧತೆ ನಡೆಸಿದ್ದಾರೆ. 

ಈ ಸೂರಿನಿಂದ ಅಂಜನಾಪುರದವರೆಗೆ ವಿದ್ಯುತ್ ಲೈನ್ ಕಾಮಗಾರಿಯನ್ನು ರೈತರ ಜಮೀನಿನ ಮೇಲೆ ಹಾಯ್ಸುವುದನ್ನು ಧಿಕ್ಕರಿಸಿ ರೈತರು ಈ ಹಿಂದೆ ಹೋರಾಟಕ್ಕೆ ಇಳಿದಿದ್ದರು. 

ಆ ಸಮಯದಲ್ಲಿ ರೈತರ ಜೊತೆ ಅನೇಕ ಬಾರಿ ಸಭೆಯನ್ನು ನಡೆಸಿದ್ದರು ಕೂಡ ಸಭೆಯಲ್ಲಿ ಯಾವುದೇ ತೀರ್ಮಾನ ಅಂತಿಮವಾಗದೆ ಇರುವುದರಿಂದ ಏಕಾಏಕಿ ಕೆಲಸ ಪ್ರಾರಂಭಿಸಿದ್ದಾರೆ ಎಂದು ರೈತರು ಧರಣಿ ಸತ್ಯಾಗ್ರಹ ನಡೆಸಿದ್ದರು ಆ ಸಮಯದಲ್ಲಿ ಇಲ್ಲಿನ ಡಿವೈಎಸ್ಪಿ ಕೇಶವರವರು 12 ಜನ ಕಿವಿಯ ಅಧಿಕಾರಿಗಳು ಮತ್ತು 138 ದಿನ ಪೊಲೀಸರ ಸಹಾಯದಿಂದ ಸ್ಥಳಕ್ಕೆ ಬಂದು ಮೆಸ್ಕಾಂ ಕಾಮಗಾರಿಗೆ ಅವಕಾಶ ಮಾಡಿಕೊಟ್ಟರು. 

ಈ ಸಮಯದಲ್ಲಿ 12 ಜನ ರೈತರ ಮೇಲೆ ಕೇಸ್ ದಾಖಲಾಗಿತ್ತು. 

ಈ ಹಿಂದೆ ರೈತರುಗಳು ಭಗರ್ ಹುಕುಂ ಹೋರಾಟ ಮಾಡಿದಾಗ 180 ಜನರನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಹಾಕಲಾಗಿತ್ತು ಹಾಗಾಗಿ ಹೆದರಿದ ರೈತರು ಧರಣಿ ಸತ್ಯಾಗ್ರಹ ವನ್ನು ಕೈ ಬಿಟ್ಟಿದ್ದರು 

ಈಗ ರೈತ ಸಂಘ ತಾಲೂಕಿನಾದ್ಯಂತ ಬೆಂಬಲ ಕೊಡುವುದಾಗಿ ಹೇಳಿದ್ದರಿಂದ ಇಂದಿನಿಂದ ಮತ್ತೆ ಪುನಃ ಹೋರಾಟ ಮಾಡಿ ತಮ್ಮ ಖಾತೆ ಜಮೀನನ್ನು ಉಳಿಸಿಕೊಳ್ಳುವುದಾಗಿ ರೈತರು ಹೇಳುತ್ತಿದ್ದಾರೆ.

ರೈತರು ತಮಗೆ ಪರಿಹಾರ ಬೇಡ ನಾವು ಮೊದಲೇ ಸಣ್ಣ ರೈತರು ಮಾರ್ಗ ಬದಲಿಸಿ ಅಷ್ಟೇ ಕೇಳಿಕೊಳ್ಳುವುದು ಈಗ ಭೂಮಿಯನ್ನು ಬೇರೆ ಕಡೆ ಕೊಂಡು ಸಾಗುವಳಿ ಮಾಡಲು ಸಾಧ್ಯವೇ ಇಲ್ಲ ಕೆರೆಯ ದಂಡೆಯ ಮೇಲೆ ಡಿಸಿಯನ್ನು ಹಾಕಿ ರೈತರ ಭೂಮಿಯನ್ನು ಉಳಿಸಬಹುದು ಸರ್ಕಾರಿ ಜಾಗವೇ ಬೇಕಾದಷ್ಟು ಇರುವಾಗ ಅದರಲ್ಲೇ ಇದನ್ನು ಹಾಕಿ ಎಂದು ಕೆಪಿಟಿಸಿಎಲ್ ಅಧಿಕಾರಿಗೆ ಹೇಳಿದರು ಈ ಮಧ್ಯೆ ಕೆಲಸ ಮಾಡುವುದಕ್ಕೆ ಬಂದ ಮಂಡ್ಯದ ಕಂಟ್ರಾಕ್ಟರ್ ಸುರೇಶ್ ಎಂಬಾತ ರೈತರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದರಿಂದ ರೈತರು ಸಿಟ್ಟಿಗೆದ್ದು ಉಗ್ರ ಹೋರಾಟವನ್ನು ಮಾಡುವುದಾಗಿ ತಿಳಿಸಿದ್ದಾರೆ ರೈತರಿಗೆ  ಎರಡು ಡಿಸಿಯನ್ನು ಹಾಕಿದರೆ ಐದು ಲಕ್ಷ ಹಣವನ್ನು ಕೊಡುತ್ತೇವೆ ಮೊದಲು ಒಂದು ಡಿಸಿಗೆ 65,000 ಇತ್ತು ಭೂಮಿಯಲ್ಲಿ ಅಡಿಕೆ ಗಿಡ ಇದ್ದರೆ ಅದಕ್ಕು ಹೆಚ್ಚಿನ ಹಣವನ್ನು ನೀಡುತ್ತೇವೆ, ಡಿಸಿ ಹಾಕಿದ ಸೆಂಟರ್ ಪಾಯಿಂಟ್ನಿಂದ 5 ಮೀಟರ್ ದೂರದವರೆಗೆ ಮಾತ್ರ ನಾವು ಜಾಗವನ್ನು ತೆಗೆದುಕೊಳ್ಳುತ್ತೇವೆ ಉಳಿದ ಭೂಮಿಯಲ್ಲಿ ಯಾವುದೇ ಬೆಳೆಯನ್ನು ಬೆಳೆದುಕೊಳ್ಳಬಹುದು ಅಲ್ಲದೇ ಇದರ ಕೆಳಗಡೆ ಕೂಡ ಸಣ್ಣಪುಟ್ಟ ಬೆಳೆಯನ್ನು ಬೆಳೆಯಬಹುದು ಎಂದು ಕೆಪಿಟಿಸಿ ಅಧಿಕಾರಿ ನಮ್ಮ ವರದಿಗಾರರಿಗೆ ತಿಳಿಸಿದ್ದಾರೆ.ತಾಲೂಕಿನ ಕೃಷಿ ಭೂಮಿ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಡಿ.ಎಸ್ .ಈಶ್ವರಪ್ಪ ಈಸೂರು ಸಂತೋಷ ಸುಭಾಷ್ ಚಂದ್ರ ಬೇಗೂರು ಶಿವಪ್ಪ ಮತ್ತಿತರರು ಹೋರಾಟದ ನಾಯಕತ್ವವನ್ನು ವಹಿಸಿದ್ದು ಪತ್ರಿಕೆಗೆ ಹೋರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೂ ರೈತರು ಈ ಬಗ್ಗೆ ಕಾನೂನು ಹೋರಾಟವನ್ನು ಮಾಡಲು ನಿಶ್ಚಯಿಸಿ ನ್ಯಾಯಾಲಯದ ಮೊರೆ ಕೂಡ ಹೋಗಿದ್ದಾರೆ ಎಂದು ತಿಳಿಸಿ ಧರಣಿ ಹೋರಾಟ ಕೈ ಬಿಟ್ಟರು ಕೂಡ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.

Search
Recent News