ಶಿವಮೊಗ್ಗ ಸಂತೆ ಪುರಾಣ ೨

Drama Drama

Posted on 08-03-2025 |

Share: Facebook | X | Whatsapp | Instagram


ಶಿವಮೊಗ್ಗ ಸಂತೆ ಪುರಾಣ ೨

ಶಿವಮೊಗ್ಗ ಸಂತೆ ಪುರಾಣ ೨

ದುಡ್ಡೆಲ್ಲ ನೀರಿಗೆ ಹಾಕಿ ಹಾಳು ಮಾಡಿದ್ರು

ನನ್ನ ಬೈಕಿನ ಎಡಗಡೆಯ ದೀಪ ಕಿತ್ತು ಹೋಗಿದ್ದರಿಂದ ಅದನ್ನು ಹಾಕಿಸೋಣವೆಂದು ರಿಪೇರಿಯವರನ್ನು ಹುಡುಕುತ್ತಾ ಹೊರಟಿದ್ದೆ. ಎದುರುಗಡೆ ಶಿವು ಸಿಕ್ಕಿದ ಏನ್ ಶಿವು ಬಹಳ ಅಪರೂಪ ಆಗ್ಬಿಟ್ಟೆ ಹೋದ ವಾರ ಸಂತೆಗೆ ಬಂದವನು ಈಗ ಪುನ ಬಂದಿದ್ದೀಯಾ ಎಂದೆ, ಏನಿಲ್ಲ ಸರ್‌ಯಾಕೋ ಬೇಜಾರಾಯ್ತು ಅಂಗೆ ಮನೇಲಿ ಮಲ್ಕೊಂಡಿದ್ದೆ ಅಂದ ಏನಾಯ್ತಪ್ಪ ಅಂದೆ, ಪ್ರಯಾಗ್ ರಾಜ್ ನಲ್ಲಿ ಮುಳುಗುವಾಗ ಜನರು ಕೇವಲ ನಾಣ್ಯ ನೀರಿಗೆ ಹಾಕಿದ್ದಲ್ಲದೆ ನೋಟಿನ ಕಟ್ಟನ್ನು ನೀರೊಳಗೆ ಮುಳುಗಿಸಿದ್ರಲ್ಲ ಸಾರ್ . ಬೇಜಾರಾಯ್ತು ಈ ಟ್ರಂಪ್ ನೋಡಿ ಸರ್ ನಮ್ ಪ್ರಧಾನಿ ಎದ್ರಿಗೇನೇ ಭಾರತ ಸರಿ ಇಲ್ಲ ಅದು ನಮ್ ದೇಶದ ವಸ್ತುವಿನ ಮೇಲೆ ೨೦೦ರಷ್ಟು ಟ್ಯಾಕ್ಸ್ ಹಾಕುತ್ತೆ. ಈ ದೇಶದ ಚುನಾವಣೆಗೆ ೨.೧ ಕೋಟಿ ಡಾಲರ್ ನಾವು ಕೊಟ್ಟಿದ್ದು ಭಾರತದ ಚುನಾವಣೆಗೆ ಯುಎಸ್‌ಎಡ್ ಕೆಳಗಡೆ ಹಣಕಾಸನ್ನು ಪೂರ್ತಿ ನಾವೇ ಕೊಡ್ತಾ ಇದ್ದೇವೆ ಎಂದು ಮಂಗಳವಾರ ಬುಧವಾರ ಎರಡು ದಿನ ಹೇಳಿದರು, ನಮ್ಮ ಪ್ರಧಾನಿ ಗೆಳೆಯ ಅಂತ ಸುಮ್ನೆ ಕೂತ್ಕೊಂಡಿದ್ರು ಈಗ ಹೊರಗಡೆ ದೇಶಕ್ಕೆ ನಮ್ದು ಭಿಕ್ಷುಕದೇಶ ಅನಿಸಲ್ವಾ ಸಾರ್ ಅಂದ, ದೊಡ್ಡವರ ವಿಷಯ ಜಾಸ್ತಿ ಮಾತಾಡಬಾರದು ನಮಗಿಂತ ಹೆಚ್ಚಿಗೆ ದೇಶದ ಮರ್ಯಾದೆ ಉಳಿಸಬೇಕು ಅಂತ ಪ್ರಧಾನಿ ಮನಸ್ಸಿಗೆ ಬರಬೇಕು. ನೀನು ವಿದೇಶದ ವಿಷಯ ಮಾತಾಡಬೇಡ ನಮ್ಮ ದೇಶದ ಒಳಗಿನ ವಿಷ್ಯ ತಿಳ್ಕೋ. ಪರಿಸರ ಹಾಳಾಗ್ತಿದೆ ಅಂತ ನಾವು ಯೋಚನೆ ಮಾಡ್ತಾ ಇದ್ದೇವೆ ಆದರೆ ಸಂಡೂರಿನ ದಟ್ಟ ಅರಣ್ಯ ಪ್ರದೇಶ ೨೧೭. ೪೫೩ ಎಕರೆ ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ ಎಂಬ ಸಂಸ್ಥೆಗೆ ಹರಾಜಿನಲ್ಲಿ ನೀಡಲಾಗಿದೆ. ಇಷ್ಟೊಂದು ಕಾಡನ್ನು ಗಣಿಗಾರಿಕೆಗೆ ಕೊಡುವಾಗ ಕರ್ನಾಟಕದ ಅರಣ್ಯ ಇಲಾಖೆಯ ಅನುಮತಿಯನ್ನೇ ಪಡೆದಿಲ್ಲ. ಈ ರೀತಿ ೭ ಅದಿರು ಕಂಪನಿಗೆ ಕಾಡನ್ನು ನೀಡಲಾಗಿದೆ. ಅಯ್ಯೋ ಶಿವನೇ ಎಂಥಾ ಸ್ಥಿತಿ ಬಂತು ಅಂದ, ಶಿವಾ ಅಂತ ಹೇಳ್ಬೇಡ ಯಾಕಂದ್ರೆ ನಮ್ ಕರ್ನಾಟಕ ಸರ್ಕಾರ ಹಳೇ ದೇವಸ್ಥಾನ ರಿಪೇರಿ ಆಗ್ಬೇಕು ಪರಂಪರೆ ಉಳಿಬೇಕು ಕರ್ನಾಟಕ ಸ್ಮಾರಕಗಳ ರಕ್ಷಣಾ ಆಗ್ಬೇಕು ಅಂತ ಹೇಳಿ ೮೪೮ ಸ್ಮಾರಕಗಳಿಗೆ ೧೨೩ ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ ಪುರಾತತ್ವ ಇಲಾಖೆಯಿಂದ ಸರ್ಕಾರಕ್ಕೆ ಆದಾಯ ಬಂದಿದ್ದು ಕೇವಲ ೧ ಕೋಟಿ ೬೮ ಲಕ್ಷ. ಮಾತ್ರ. ೧೨೩ ಕೋಟಿ ಬಂಡವಾಳ ಹಾಕಿ೧ ಕೋಟಿ ೬೮ ಲಕ್ಷ ಪಡೆಯೋದಂದ್ರೆ. ನೀನೇ ಯೋಚನೆ ಮಾಡು ಕಲ್ಬುರ್ಗಿ ಹಾವೇರಿ ರಾಯಚೂರು ಬೆಳಗಾವಿ ಜಿಲ್ಲೆಯಲ್ಲಿ ಐತಿಹಾಸಿಕ ತಾಣ ಎಂದು ದುಡ್ಡು ನೀಡಿದ್ದಾರೆ ಆದರೆ ಅಧಿ ಸೂಚನೆಯಲ್ಲಿ ಕಂಡು ಬಂದ ೧೯ ಐತಿಹಾಸಿಕ ತಾಣಗಳು ಎಲ್ಲಿವೆ ಎಂದು ಆ ಇಲಾಖೆಗೆ ಗೊತ್ತಿಲ್ಲ ಇನ್ನೂ ಕೂಡ ಅದು ಪತ್ತೆಯಾಗಿಲ್ಲ ಎಂದೆ,ಶಿವ ಮೂಗಿನ ಮೇಲೆ ಬೆರಳಿಟ್ಟು ಏನ್ ಮಾಡೋದು ಸರ್? ಮೇಲು ಸರಿ ಇಲ್ಲ ಕೆಳಗೂ ಸರಿ ಇಲ್ಲ ಮೊನ್ನೆ ಜೆಮ್ಸ್ ಆಸ್ಪತ್ರೆ ಗುಲ್ಬರ್ಗಕ್ಕೆ ಹೋದ ಹೆಂಗಸಿಗೆ ಆಪರೇಷನ್ ಮಾಡುವಾಗ ಹೊಟ್ಟೆಲಿ ಟವಲ್ ಇಟ್ಟು ಹೊಲಿಗೆ ಹಾಕಿದ್ರಂತೆ, ಹೆಂಗೋ ಬದ್ಕಿದ್ಲು ಪಾಪ ಮತ್ತೆ ಆಪರೇಷನ್ ಮಾಡಿ ಟವೆಲ್ ಹೊರ ತೆಗೆದರು ಅಂದ. ಹಂಗAತ ಪೊಲೀಸ್ನವರಿಗೆ ಕಂಪ್ಲೇAಟ್ ಕೊಡಕ್ಕೆ ಹೋಗಬೇಡ ಹೋಗುವುದಾದರೆ ನೀನೇ ಹೋಗು ಹೆಂಗಸರನ್ನು ಕಳಿಸಿದರೆ ಪೊಲೀಸನವರೇ ಅತ್ಯಾಚಾರ ಮಾಡಿ ಕಳಿಸ್ತಾರಂತೆ ಒಬ್ಬ ಪೊಲೀಸ್ ೧೭ ವರ್ಷದ ಹುಡುಗಿ ಮೇಲೆ ಅತ್ಯಾಚಾರ ಮಾಡಿ ಈಗ ಜೈಲಲ್ಲಿ ಮುದ್ದೆ ತಿಂತಾನೆ ಎಂದೆ. ಬಿಡಿ ಸಾರ್ ಸರ್ಕಾರಿ ಬಸ್ನಲ್ಲೇ ಅತ್ಯಾಚಾರ ಆಗುತ್ತೆ ಅಂದ. ಇದೇ ರೀತಿ ಕ್ರೈಂ ಸ್ಟೋರಿ ನಡಿತಾ ಹೋದ್ರೆ ಜನಗಳಿಗೆ ಮುಂದೆ ಏನು ಅನ್ಸಲ್ಲ. ರಾಜಕಾರಣಿಗಳು ದುಡ್ಡು ತಿಂದ್ರು ಅಂದ್ರೆ ನಮ್ಗೆ ವಿಷಯನೇ ಅಲ್ಲ ಮುಂದೆ ಎಲ್ಲವೂ ಹಂಗೆ ಆಗುತ್ತೆ. ಸರ್ ನಮ್ ದುರ್ಗಿಗುಡಿ ತಿಲಕ್ ನಗರ ಕುವೆಂಪು ರಸ್ತೆ ಮೂರನ್ನು ಸೇರಿಸಿ ಆಸ್ಪತ್ರೆ ನಗರ ಅಂತ ಹೆಸರಿಟ್ಟರೆ ಸರಿಯಾಗುತ್ತೆ ಅನಿಸುತ್ತೆ. ಏಕಂದ್ರೆ ಈ ಏರಿಯಾದ ಪ್ರತಿ ರಸ್ತೆಯಲ್ಲಿ ಒಂದಲ್ಲ ಒಂದು ಆಸ್ಪತ್ರೆ ಇದೆ ಎಂದ, ಹೌದಪ್ಪ ಅದಕ್ಕೆ ನಮ್ಮ ದೇಶದ ಬಜೆಟ್ ನಲ್ಲಿ ಆರೋಗ್ಯಕ್ಕೆ ಶಿಕ್ಷಣಕ್ಕೆ ಏನು ಕೊಡದೆ ಇರದು ಎಂದೆ. ಶಿವು ಬರ್ಲಾ ಸರ್ ಅಂದ ನಾನು ಮೌನವಹಿಸಿದೆ.


Search