ವಿಶ್ವ ಹಿಂದೂ ಪರಿಷತ್ತು ಹಿಂದೂ ವಿರೋಧಿಯೇ ?

Social Program struggle

Posted on 08-03-2025 |

Share: Facebook | X | Whatsapp | Instagram


ವಿಶ್ವ ಹಿಂದೂ ಪರಿಷತ್ತು ಹಿಂದೂ ವಿರೋಧಿಯೇ ?

ವಿಶ್ವ ಹಿಂದೂ ಪರಿಷತ್ತು ಹಿಂದೂ ವಿರೋಧಿಯೇ ಎಂಬ ಆತಂಕ ಇತ್ತೀಚೆಗೆ ಕಾಡುತ್ತಿದೆ. 

ಏಕೆಂದರೆ ದೂತ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ 2012 ರಲ್ಲಿ ನಡೆದ ಸೌಜನ್ಯ ಎಂಬ ಯುವತಿಯ ಕೊಲೆ ಪ್ರಕರಣ ಇದುವರೆಗೆ ಪತ್ತೆಯಾಗಿಲ್ಲ ಎಂದು ತಿಳಿಸಿ. ಧರ್ಮಸ್ಥಳದ ಭಾಗದಲ್ಲಿ ಇದೇ ರೀತಿ ನಡೆದ ಹಲವಾರು ಪ್ರಕರಣಗಳನ್ನು ಉದಾಹರಣೆ ನೀಡಿ ಪೊಲೀಸರು ಏನು ಮಾಡುತ್ತಿದ್ದಾರೆ ಇಷ್ಟೆಲ್ಲ ಕೊಲೆ ಹೇಳ ಹೆಸರಿಲ್ಲದಂತೆ ಆಗುತ್ತಿದ್ದರು ಅವರು ಮನಸ್ಸು ಮಾಡುತ್ತಿಲ್ಲ ಏಕೆ ಎಂದು ಸಮೀರ್ ಎಂಬ ಯುವಕ ಯುಟ್ಯೂಬ್ ಚಾನೆಲ್ನಲ್ಲಿ ಪ್ರಶ್ನೆ ಮಾಡಿದ್ದಾನೆ. ಇದು ರಾಜ್ಯಾದ್ಯಂತ ಸಂಚಲನಗೊಳಿಸಿ ಮತ್ತೊಮ್ಮೆ ಪೊಲೀಸರನ್ನು ಪ್ರಶ್ನೆ ಮಾಡುವಂತೆ ಆಯಿತು.

ಈ ಯುವಕ 9/10/12ರ ಸೌಜನ್ಯಳ ಕೊಲೆ 21/ 7 /12ರ ಮಾವುತ ನಾರಾಯಣನ ಕೊಲೆ 1977ರಲ್ಲಿ ವೇದವಲ್ಲಿ ಶಿಕ್ಷಕಿಯ ಕೊಲೆ 1986 ರಲ್ಲಿ ಪದ್ಮಲತಾ ಕಿಡ್ನಾಪ್ ಪ್ರಕರಣ 

ಮತ್ತು 56 ದಿನದ  ನಂತರ ಆಕೆಯ ಕೊಲೆ 2000 ದ ಬ್ಯಾಂಕ್ ಮ್ಯಾನೇಜರ್ ಹೆಂಡತಿ ಕೊಲೆ 2012 ರಲ್ಲಿ ಸಾಕ್ಷಿದಾರ ರವಿ ಪೂಜಾರಿ ಕೊಲೆ ಇವೆಲ್ಲವನ್ನು ಬಿತ್ತರಿಸಿ ಈ ಕೊಲೆಗಳನ್ನು ನಿರ್ದಿಷ್ಟವಾದ ನಟೋರಿಯಸ್ ಗುಂಪು ಮಾಡುತ್ತಾ ಬಂದಿದೆ. ಈ ಎಲ್ಲಾ ಕೊಲೆ ಕೇಸುಗಳನ್ನು ಕೂಡ ಪೊಲೀಸರ ಬೇಜವಾಬ್ದಾರಿಯಿಂದಾಗಿ ಇದುವರೆಗೆ ಪತ್ತೆಯಾಗಿಲ್ಲ. ಮಕ್ಕಳ ಕಳೆದುಕೊಂಡ ತಂದೆ ತಾಯಿಯರು ಅಣ್ಣನ ಕಳೆದುಕೊಂಡ ತಂಗಿ, ಹೆಂಡತಿ ಕಳೆದುಕೊಂಡ ಗಂಡ, ಮಗನನ್ನು ಕಳೆದುಕೊಂಡ ತಂದೆ, ದುಃಖಿಸುತ್ತಿದ್ದಾರೆ. 

ಇವರೆಲ್ಲರೂ ಕೂಡ ಧಾರ್ಮಿಕವಂತರು ಮತ್ತು ಹಿಂದೂ ದೇವರನ್ನು ಪೂಜೆ ಮಾಡುವಂತಹ ವ್ಯಕ್ತಿಗಳು. 

ಇಂಥವರು ಕೊಲೆಯಾದಾಗ ಬುದ್ಧಿವಂತ ಮತ್ತು ಯಾವಾಗಲೂ ಎಚ್ಚರವುಳ್ಳ ಜಿಲ್ಲೆ ಎಂದು ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಉಗ್ರ ಹೋರಾಟವನ್ನು ಮಾಡಬೇಕಾಗಿತ್ತು. ಆದರೆ ಪೊಲೀಸರ ವಿರುದ್ಧ ಯಾರೂ ಹೋರಾಟವನ್ನು ಮಾಡಲಿಲ್ಲ ಜನರ ಜ್ಞಾಪಕ ಶಕ್ತಿ ಬಹಳ ಕಡಿಮೆ ಆದ್ದರಿಂದ ಕ್ರಮೇಣ ಮರೆತರು ಮತ್ತು ಅರೆ ಹುಚ್ಚನೊಬ್ಬನನ್ನು ತಂದು ಇವನೇ ಕೊಲೆ ಮಾಡಿದ್ದು ಎಂದು ಕೇಸ್ ಮುಚ್ಚಿ ಕೈ ತೊಳೆದುಕೊಂಡರು. ಆ ಮಾನಸಿಕ ಅಸ್ವಸ್ಥನ ತಾಯಿ ಚಿಂತೆಯಿಂದ ಸತ್ತು ಹೋದರು ಅಪ್ಪ ಅರೆ ಜೀವವಾಗಿದ್ದಾರೆ.

ಈಗ ಸತ್ಯ ಹೊರಬಂದಿದೆ ಸೌಜನ್ಯಳ ಕೊಲೆಪಾತಕ ಅವನಲ್ಲ. ಹಾಗಾದರೆ ಮತ್ಯಾರು ಹುಡುಕಲು ಒತ್ತಾಯಿಸುತ್ತಿದ್ದಾರೆ.

ಆದರೆ ಹೃದಯ ಹೀನ ಮನಸ್ಸಿನ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತ್ಯ ಉಪಾಧ್ಯಕ್ಷ ಯು ಪೂವಪ್ಪ ಹೇಳುತ್ತಾರೆ ಸಮೀರ ತಪ್ಪು ಮಾಡುತ್ತಿದ್ದಾನೆ ಆತ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಮುಂದೆ ಏನು ಮಾಡಬೇಕು ಎನ್ನುವುದು ವಿಶ್ವ ಹಿಂದೂ ಪರಿಷತ್ಗೆ ತಿಳಿದಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. 

ಇವರು ಮನುಷ್ಯರ ಪ್ರಶ್ನೆ ಕಾಡುತ್ತದೆ ಇಷ್ಟೊಂದು ಜನ ಕೊಲೆಯಾದವರು ಹಿಂದೂ ಹೆಣ್ಣುಮಕ್ಕಳು ಅದೂ ಭೀಭತ್ಸ ಅತ್ಯಾಚಾರಕ್ಕೆ ತುತ್ತಾಗಿ ಕೊಲೆಯಾಗಿದ್ದು ಮಕ್ಕಳು ಹುಟ್ಟುವ ಜಾಗದಲ್ಲಿ ಮಣ್ಣು ತುಂಬಿಸಿಕೊಂಡು ಪಾಪಿಷ್ಟರನ್ನು ಶಪಿಸುತ್ತಾ ನೀರು ಆಹಾರವಿಲ್ಲದೆ ಹೆತ್ತವರ ಗೆಳೆಯ ಗೆಳತಿಯರ ಮುಖ ಕಾಣಲು ಹಂಬಲಿಸಿ ಜೀವ ಬಿಟ್ಟವರು. ಹೀಗೆ ಮಾಡಿದ ಪಾಪಿಗಳನ್ನು ಸುಮ್ಮನೆ ಬಿಡಬಾರದು ಎಂದು ಯುಟ್ಯೂಬ್ ಚಾನೆಲ್ ನವರು ಹೇಳಿದರೆ ವಿಶ್ವ ಹಿಂದೂ ಪರಿಷತ್ ನವರು ಇವರಿಗೆ ಪತ್ರಿಕೆ ಮುಖಾಂತರ ಫೋನ್ ಮುಖಾಂತರ ಬೆದರಿಕೆ ಹಾಕಿ ಎಚ್ಚರಿಕೆ ನೀಡುತ್ತಾರೆ ಏಕೆಂದರೆ ಸತ್ತವರು ಯು ಪುವಪ್ಪನ ಮನೆಯವರು ಅಲ್ಲ ನೆಂಟರು ಅಲ್ಲ ಯಾರೋ ಬಿಕನಾಸಿ ಹಿಂದುಗಳು ಅಲ್ವಾ?

ಹೋಗಲಿ ಸಮೀರಾ ಮುಸ್ಲಿಂ ಹುಡುಗ ಹೀಗೆ ಹೇಳಿದ ಎಂದು ಬೈದರು  ಅಂದು ಕೊಂಡರೆ ಅದು ಸುಳ್ಳು . ಯಾಕೆಂದರೆ ಮುಮ್ತಾಜ್ ಎಂಬ ಮುಸ್ಲಿಂ ಹೆಣ್ಣು ಮಗಳು ಇವರ ಕಂಟ್ರೋಲ್ ನಲ್ಲಿ ಇರುವ ಚಾನೆಲ್ ನಲ್ಲಿ ಇದ್ದಾಳೆ. ಅವಳನ್ನು ಹೊಗಳಿ ಹಾಡಿ ಅಟ್ಟಕ್ಕೆ ಏರಿಸುತ್ತಾರೆ ಹಾಗಾದರೆ ಈ ಕೊಲೆಗಾರರು ಪತ್ತೆಯಾದರೆ ಯು ಪೂವಪ್ಪ ಕರ್ನಾಟಕ ಪ್ರಾಂತ್ಯ ವಿಶ್ವ ಹಿಂದೂ ಪರಿಷತ್ತು ಉಪಾಧ್ಯಕ್ಷ ಇವರ ಸಂಘಟನೆಗೆ ಏನು ತೊಂದರೆ ಅವರೇ ಉತ್ತರಿಸಬೇಕು ಹಿಂದುಗಳ ತಾಳ್ಮೆಗೆ ಮಿತಿ ಇದೆ.

ಡಾ. ಕೆಜಿ ವೆಂಕಟೇಶ್ ಕ್ರಾಂತಿಕಿಡಿ

Search