Posted on 08-03-2025 |
Share: Facebook | X | Whatsapp | Instagram
ಹೊಸನಗರ. ಮಾ.5 ತಾಲೂಕಿನ 10ನೇ ಸಾಹಿತ್ಯ ಸಮ್ಮೇಳನ ಮಾರ್ಚ್ 23ರಂದು ಹೊಸನಗರದ ಗಾಯತ್ರಿ ಭವನದಲ್ಲಿ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀ ಡಿ.ಎಸ್. ಶ್ರೀಧರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ ಪಾರ್ತಿ ಸುಬ್ಬ ಪ್ರಶಸ್ತಿಗೆ ಭಾಜನರಾಗಿರುವ ಯಕ್ಷಗಾನ ಪ್ರಸಂಗ ಕರ್ತೃ ವಿಮರ್ಶಕ ಕಥೆಗಾರ ಕವಿ ಕಾದಂಬರಿ ಕಾರರೂ ಆದ ಶ್ರೀಧರ್ ಅವರು ತಾಲೂಕಿನ ನಿಟ್ಟೂರಿನ ದರೆ ಮನೆಯವರು ತಂದೆ ಶ್ರೀಪಾದಯ್ಯ ಮತ್ತು ತಾಯಿ ಸರಸ್ವತಿ 1950 ಆಗಸ್ಟ್ 25ರಂದು ಜನಿಸಿದ ಇವರು ತಮ್ಮ ಪ್ರೌಢ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಉಡುಪಿಯಲ್ಲಿ ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸ್ನಾತಕೋತ್ತರ ಪದವಿಗಳಿಸಿ ಕಿನ್ನಿಗೋಳಿಯ ಪದವಿ ಪೂರ್ವ ಕಾಲೇಜಿನಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು.
ಯಕ್ಷಗಾನ ಕಲೆಗೆ ಮಾರುಹೋದ ಇವರು ಯಕ್ಷಗಾನದ ಎಲ್ಲಾ ಆಯಾಮಗಳನ್ನು ಅಭ್ಯಾಸ ಮಾಡಿದ್ದರು ತಾಳಮದ್ದಲೆ ಹಾಗೂ ವೇಷದಾರಿಯಾಗಿ ಯಕ್ಷಗಾನದ ಸೇವೆಯನ್ನು ಸಲ್ಲಿಸಿದ್ದು 50ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಈ ಪ್ರಸಂಗಗಳನ್ನು ಉಡುಪಿ ಯಕ್ಷಗಾನ ಕೇಂದ್ರ ಮತ್ತೆ ಕೆಲ ಸಂಸ್ಥೆಗಳು ಪ್ರಕಟಪಡಿಸಿವೆ. ಇವರ ಯಕ್ಷಗಾನ ಕೃತಿಗಳಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ತಾಳಮದ್ದಲೆಗಾಗಿ ಯಕ್ಷ ಲಹರಿ ಎಂಬ ಸಂಸ್ಥೆಯನ್ನು ಕಟ್ಟಿದ್ದಾರೆ
2016 ರಲ್ಲಿ ಶಿವಮೊಗ್ಗದಲ್ಲಿ ನಡೆದ 11ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು 2025 ರಲ್ಲಿ ಮುಲ್ಕಿ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2021 ರಲ್ಲಿ ಕಟೀಲು ದುರ್ಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ನುಡಿ ಹಬ್ಬದ ಅಧ್ಯಕ್ಷರಾಗಿದ್ದರು. ಇವರು 5000ಕ್ಕೂ ಹೆಚ್ಚು ಯಕ್ಷಗಾನ ಪದ್ಯಗಳನ್ನು ರಚಿಸಿದ್ದಾರೆ.
ಮಂಗಳೂರು ಆಕಾಶವಾಣಿಯು ಇವರ ಪ್ರಸಂಗಗಳ ತಾಳಮದ್ದಳೆಯನ್ನು ಶ್ರೀಧರ ಯಕ್ಷ ಕಾವ್ಯ ಎಂಬ ಹೆಸರಿನಲ್ಲಿ 29 ವಾರ ಸತತವಾಗಿ ಪ್ರಸಾರ ಮಾಡಿತು ಮತ್ತು ಈ ಕೇಂದ್ರದಲ್ಲಿ ಪ್ರಸಾರವಾಗುತ್ತಿರುವ ಯಕ್ಷಾಂತರಂಗ ಕಾರ್ಯಕ್ರಮದ ಶೀರ್ಷಿಕೆ ಗೀತೆ ಶ್ರೀಧರವರೆ ರಚನೆ ಮಾಡಿರುವುದು. ಯಕ್ಷಗಾನ ಪ್ರಸಂಗ ಕೋಶ ಪುಸ್ತಕದ ಸಂಪಾದಕರಾಗಿ ಕಾರ್ಯ ಮಾಡಿದ್ದಾರೆ ಬೆಂಗಳೂರಿನ ಯಕ್ಷ ವಾಹಿನಿ ಸಂಸ್ಥೆಯಲ್ಲಿ ಕೆಲಸ ಮಾಡಿ 250ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗವನ್ನು 123 ಕೃತಿಗಳನ್ನು ಡಿಜಿಟಲಿಕರಣ ಮಾಡಿದ್ದಾರೆ.
ಸುಬ್ರಹ್ಮಣ್ಯ ಧಾರೇಶ್ವರವರ ಬಳಗದಿಂದ ಇವರ ಏಳು ಪ್ರಸಂಗಗಳು ರಂಗ ಪ್ರದರ್ಶನಗೊಂಡಿದೆ. ಕಿನ್ನಿಗೋಳಿ ಯಕ್ಷ ಲಹರಿ ಸಂಸ್ಥೆಯಲ್ಲಿ 24 ವರ್ಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಕಾಸರಗೋಡಿನ ಸಿರಿಬಾಗಿಲು ವೆಂಕಟಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಯಕ್ಷಗಾನ ಕಾವ್ಯಾಂತರಂಗ ಕಾರ್ಯಕ್ರಮದಲ್ಲಿ ಯಕ್ಷಗಾನ ಕವಿ ಕಾವ್ಯಗಳ ಪರಿಚಯವನ್ನು ನಡೆಸಿಕೊಟ್ಟಿದ್ದಾರೆ
ಇವರ ಕೃತಿಯಲ್ಲಿ ಕಬಂದ ಮೋಕ್ಷ ಗರುಡ ಪ್ರತಾಪ ಬಾಲ ಭಾರತ ಸತ್ಯ ಶೈಥಿಲ್ಯ ಮಹಾಪ್ರಸ್ಥಾನ ಪರೀಕ್ಷಿತ ಜನಮೇಜಯ ಶುಕ್ರ ಸಂಜೀವಿನಿ, ಅಗಸ್ತ್ಯ ಜಡಭರತ ಯಕ್ಷ ಪ್ರಶ್ನೆ ಸ್ವರ್ಣ ಕಮಲ ಬಕನ ಬಂಡಿ ದ್ರೌಪದಿ ಸ್ವಯಂವರ,, ರಾಮೇಶ್ವರ ಮಹಾತ್ಮೆ ಆದಿ ಶಂಕರಾಚಾರ್ಯ ಪ್ರಮುಖ ಪ್ರಸಂಗಗಳು.
ಕೆಳದಿ ಶಿವಪ್ಪ ನಾಯಕ ಕೆಳದಿ ಚೆನ್ನಮ್ಮ ಶ್ರೀರಂಗರಾಯಭಾರ ವೀರ ಚಿತ್ರದ್ವಜ ಕೃತಿಯನ್ನು ರಚಿಸಿದ್ದು ಅವು ಈಗ ಲಭ್ಯವಿಲ್ಲ
ಮಾತಿನ ಕಲೆ ತಾಳಮದ್ದಳೆ, ತಾಳಮದ್ದಳೆಯ ಸ್ವಾರಸ್ಯಗಳು ಆಟದಲ್ಲಿ ಅವಾಂತರ ಇವರ ನುಡಿ ಬರಹವಾಗಿದ್ದು ಅಸುರ ಗುರು ಶುಕ್ರಾಚಾರ್ಯ ವೀರ ತಪಸ್ವಿ ಪರಶುರಾಮ ಯುಗಾಂತರ ಜಡಭರತ ಗಾಂಡೀವಿ ಪ್ರಮುಖ ಕಾದಂಬರಿಗಳಾಗಿವೆ
ಶುಕ್ರಾಚಾರ್ಯ ದ್ರೋಣಾಚಾರ್ಯ ಮಹಾಮುನಿ ಶುಖ ಆದರ್ಶ ಶಿಕ್ಷಕ ಕೆ ಬಾಲಕೃಷ್ಣ ಆಚಾರ್ಯ ಇವರ ಜೀವನ ಚಿತ್ರಗಳಾಗಿದೆ
ಪುರಾಣ ಲೋಕದ ವಿಶಿಷ್ಟ ಪಾತ್ರಗಳು ಬಸ್ಸು ಜಟಕಾ ಬಂಡಿ ಎಂಬ ನಗೆಲೇಖನ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಕಾಂ ಕನ್ನಡ ಪಠ್ಯಪುಸ್ತಕದಲ್ಲಿ ಇವರ ಮಹಾಪ್ರಸ್ಥಾನ ಕೃತಿಯ ಪಾಂಡವ ಸ್ವರ್ಗಾರೋಹಣ ಪಠ್ಯವಾಗಿತ್ತು.
ಯಕ್ಷಪ್ರಭಾ ಪತ್ರಿಕೆಯಲ್ಲಿ, ಆಟ ಕೂಟಗಳ ಪೋಷಕ ಪಾತ್ರಗಳು, ಕಣಿ ಪುರ ಪತ್ರಿಕೆಯಲ್ಲಿ ರಂಗಸ್ಥಳದ ಅಭಿಜಾತ ಕವಿಗಳು ,ಸುದಿನ ಸುರಭಿ ಪತ್ರಿಕೆಯಲ್ಲಿ ಪುರಾಣ ಸ್ವಾರಸ್ಯಗಳು, ಧರ್ಮ ಭಾರತಿ ಪತ್ರಿಕೆಯಲ್ಲಿ ವೀರ ತಪಸ್ವಿ, ಯುಗಪುರುಷ ಪತ್ರಿಕೆಯಲ್ಲಿ ಹಾಸ್ಯ ಲೇಖನ ಇದಲ್ಲದೆ ನೂರಾರು ಬಿಡಿ ಬರಹಗಳು ಪ್ರಕಟವಾಗಿದೆ
ಇವರ ಸಾಧನೆ ಮೆಚ್ಚಿ ಪಾರ್ತಿ ಸುಬ್ಬ ಪ್ರಶಸ್ತಿ, ಕಲ್ಲೂರು ಕನಕ ಅಣ್ಣಯ್ಯ ಪ್ರಶಸ್ತಿ ,ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ,ಕೆರೆಮನೆ ಶಂಬು ಹೆಗಡೆ ಪ್ರಶಸ್ತಿ, ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ ಮತ್ತು ಯಕ್ಷ ಶ್ರೀಧರ ಎಂಬ ಅಭಿನಂದನಾ ಗ್ರಂಥ ಪ್ರಕಟವಾಗಿದೆ.
ಇವರ ಪತ್ನಿ ನಟೇಶ್ವರಿ ಮಕ್ಕಳು ಶ್ರೀನಿಧಿ ಮತ್ತು ಶ್ರೀಕಲ ಅಳಿಯ ವಿನಾಯಕ ಸೊಸೆ ಅಂಜಲಿ ಹೆಗಡೆ ಇವರ ತಮ್ಮಂದಿರು ಸೇರಿ ಸಂಪೂರ್ಣ ಕುಟುಂಬವೇ ಯಕ್ಷಗಾನ ಮತ್ತು ಮಾಧ್ಯಮವನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದು ಕಲಾ ಸಂಸ್ಕೃತಿಯ ಕುಟುಂಬವಾಗಿದೆ.