Posted on 07-03-2025 |
Share: Facebook | X | Whatsapp | Instagram
ಭದ್ರಾವತಿ ಮಾ.6 ಕುವೆಂಪುವಿಶ್ವವಿದ್ಯಾನಿಲಯದಲ್ಲಿ ಹೊರಗುತ್ತಿಗೆ ನೌಕರರ ವೇತನ ತಡವಾಗುತ್ತಿದ್ದು ಮಾನ್ಯ ಸಿಂಡಿಕೇಟ್ ಸದಸ್ಯರವರಿಗೆ ವೇತನವನ್ನು ತಕ್ಷಣ ನೀಡುವ ಕ್ರಮ ಕೈಗೊಳ್ಳುವಂತೆ ಮನವಿ ಅರ್ಪಿಸಲಾಯಿತು. ಹೊರಗುತ್ತಿಗೆ ನೌಕರರಿಗೆ ಮೂರು ತಿಂಗಳ ವೇತನವನ್ನು ನೀಡದೇ ಇರುವುದರಿಂದ ನೌಕರರ ಜೀವನ ನಿರ್ವಹಿಸಲು ಬಹಳ ತೊಂದರೆಯಾಗಿದೆ. ಆದುದರಿಂದ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಮುಸವಿರ್ ಬಾಷಾ ರವರು ಶಿವಕುಮಾರ್ ರವರು ಲಕ್ಷ್ಮಿಕಾಂತ್ ರವರು ಶ್ರೀಪಾಲರವರು ಅರವಿಂದ್ ರವರು ಸಾಕಮ್ಮನವರು ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಎನ್ ಎಸ್ ಯು ಐ ಗೌರವ ಅಧ್ಯಕ್ಷರು ಭದ್ರಾವತಿ ತಾಲೂಕ್ ಬಗರು ಹುಕುಂ ಸದಸ್ಯರಾದ ಮುರುಗೇಶ್ ರವರು ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಎಲ್ಲಾ ಎಲ್ಲಾ ಹೊರಗುತ್ತಿಗೆ ಏಜೆನ್ಸಿ ನೌಕರರವರು ಹಾಜರಿದ್ದರು