ಶೀತಲ್ ಪಾಟಿ ಎಂಬ ಏಕವ್ಯಕ್ತಿ ನಾಟಕ ವಿಮರ್ಶೆ ತಾಯಿ ಮಗುವಿನ ಹೋರಾಟದ ಹಸಿವಿನ ಕತೆ

Drama Drama

Posted on 05-03-2025 |

Share: Facebook | X | Whatsapp | Instagram


ಶೀತಲ್ ಪಾಟಿ ಎಂಬ ಏಕವ್ಯಕ್ತಿ ನಾಟಕ ವಿಮರ್ಶೆ   ತಾಯಿ ಮಗುವಿನ ಹೋರಾಟದ ಹಸಿವಿನ ಕತೆ

ಈ ನಾಟಕ ಮೂಲ ಬಂಗಾಳಿ ಇದನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಅಭಿನಯಿಸಿದವರು ಕಲ್ಕತ್ತಾದ ಸಂಜೀತ ಮುಖರ್ಜಿ  ಇವರು ಸ್ನಾತಕೋತ್ತರ ಎಂಎ ಇಂಗ್ಲಿಷ್ ಮತ್ತು ಎಂಬಿಎ ಪದವೀಧರರು ಬಂಗಾಳಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.ಉಷಾ ಉತ್ತೂಪ್ ರವರ ಜೀವನ ಚರಿತ್ರೆಯನ್ನು ಬಂಗಾಳಿಗೆ ಭಾಷಾಂತರ ಮಾಡಿ ಅನೇಕ ಸನ್ಮಾನ ಪ್ರಶಸ್ತಿ ಗಳಿಸಿದ್ದಾರೆ.

ತಾಯಿಯೊಬ್ಬಳು ತನ್ನ ಮಗುವಿನೊಂದಿಗೆ ಮನೆ ತೊರೆದು ಹೊಟ್ಟೆ ಪಾಡಿಗಾಗಿ ಜೀವನ ನಡೆಸುವ ಕರುಳು ಹಿಂಡುವ ಕತೆ ಯನ್ನು ಅದ್ಭುತವಾಗಿ ಅಭಿನಯಿಸಿದರು.ಊರಿನಲ್ಲಿ ಹೊಟ್ಟೆ ಪಾಡಿಗಾಗಿ ಭಿಕ್ಷಾಟನೆ ಕೈಗೊಂಡು ಕೆಲವು ಸಾರಿ ಪೆಟ್ಟು ತಿಂದು ಕಳ್ಳತನದ ಆರೋಪವನ್ನು ಹೊರಬೇಕಾಯಿತು.

ಆಕೆ ಉತ್ತಮ ಗಾಯಕಿಯು ಆಗಿದ್ದಳು.ಆದರೂ ತಲೆಕೆಟ್ಟು ಒಮ್ಮೆ ಊರಿನ ಆಲದ ಮರಕ್ಕೆ ನೇಣು ಹಾಕಿಕೊಂಡಳು ಆದರೆ ಹಗ್ಗ ಸಡಿಲವಾಗಿ ಬದುಕಬೇಕೆಂಬ ಛಲ ಹುಟ್ಟಿ ಹಾಡುಗಾರಿಕೆ ಯಿಂದಲೇ ಬದುಕಬೇಕು ಮತ್ತು ಸಾಯಬಾರದೆಂಬ ನಿರ್ಧಾರ ತೆಗೆದುಕೊಂಡು ಹಾಡುಗಾರಿಕೆ ಮುಂದುವರಿಸಿದಳು ಮತ್ತು ಗ್ರಾಮದ ಮುಖಂಡನ ಮನಸ್ಸನ್ನು ಗೆದ್ದು ಆತನ ಸಹಾಯದಿಂದ ಚಿಕ್ಕ ಮನೆ ನಿರ್ಮಿಸಿಕೊಂಡು ಮಗುವಿನೊಂದಿಗೆ ಬದುಕು ಸಾಗಿಸಿದಳು

     ನಾಟಕದ ಉದ್ದಕ್ಕೂ ಬಂಗಾಳಿ ಹಾಡು ಬಂಗಾಳಿ ನೃತ್ಯದ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡು ಒಂದು ಗಂಟೆಯ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿ ನಾಟಕ ಸೆಳೆದಿಟ್ಟುಕೊಂಡಿತು.

ನಾಟಕದ ಮುಖ್ಯ ಆಶಯ ಪಾಪಿ ಗಾಯಕಿ ಅಲ್ಲ ಆಕೆಗೆ ಒಂದು ತುತ್ತು ನೀಡದ ಸಂಪೂರ್ಣ ಗ್ರಾಮದ ಜನತೆ ಪಾಪಿಗಳು.ಆದರೂ ಹಾಜೂ ಎಂಬ ಹೆಣ್ಣಿನ ಹಸಿವಿನ ಸುತ್ತ ಹೆಣೆದ ವಾಸ್ತವದ ಕತೆ ಅವಳಿಗೆ ಸಹಾಯ ಮಾಡಿದ ಗ್ರಾಮದ ಮುಖಂಡ ಜಾಷು ಮೋಟನೆಂಬ ನಿಜವಾದ ಮನುಷ್ಯನ ಕತೆ.

ವಿಭೂತಿ ಭೂಷಣ್ ರಚನೆ ಮಾಡಿದ ಈ ಕತೆಯನ್ನು ರಂಗಕ್ಕೆಅಳವಡಿಸಿ ಪ್ರದರ್ಶನ ಮಾಡಿದ ಸಂಗೀತ ಮುಖರ್ಜಿ ಯವರಿಗೂ ಶಿವಮೊಗ್ಗದ ಜನರಿಗೆ ಪ್ರಸ್ತುತ ಪಡಿಸಿದ ಬಹುಮುಖಿ ಶಿವಮೊಗ್ಗದ ಡಾ.ನಾಗಭೂಷಣ್ ಹಾಗೂ ಸಹ್ಯಾದ್ರಿ ರಂಗತರಂಗ ದ ಕಾಂತೇಶ್ ಕದರ ಮಂಡಲಗಿಯವರಿಗೂ ಧನ್ಯವಾದಗಳು.

ವಿಮರ್ಶೆ ಡಾ.ಕೆ.ಜಿ.ವೆಂಕಟೇಶ್

Search
Recent News