Posted on 02-03-2025 |
Share: Facebook | X | Whatsapp | Instagram
ಶಿವಮೊಗ್ಗ, ಜನ ವಾಣಿಯೇ ಜಾನಪದ ಬೇರು ಜಾನಪದ ಎಂಬುದು ಕೃಷಿಕನ ಕಾಯಕ ತತ್ವದಲ್ಲಿ ಅಡಗಿದೆ ಕೃಷಿ ಚಟುವಟಿಕೆಯ ಪ್ರತಿಯೊಂದು ಅಂಗದಲ್ಲಿ ಜಾನಪದದ ಹೂವು ಅರಳಿದೆ ಎಂದು ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಆದ ಡಾ.ವೆಂಕಟೇಶ್ ಎಂ ಮಾತನಾಡಿದರು
ಚಂದನ್ ಕೆರೆ ಗ್ರಾಮದಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಜಾನಪದ ಹಬ್ಬ ಹಾಗೂ ಸಂಕ್ರಾಂತಿ ಸಂಭ್ರಮ ಎನ್ನುವ ಹಿನ್ನೆಲೆಯಲ್ಲಿ ಮಾತನಾಡಿದರು ಸುಂದರವಾದ ವೆದಿಕೆಯಲ್ಲಿ ಜಾನಪದ ಸೊಗಡಿನ ಹಾಡನ್ನು ಹೇಳುವುದರ ನೆರೆದಿರುವ ಸ್ವಯಂಸೇವಕರು ಹಾಗೂ ಗ್ರಾಮಸ್ಥರನ್ನು ಜಾನಪದ ಸೊಗಡಿನಲ್ಲಿ ಮೈಮರಿಯುವಂತೆ ಹಾಡಿದರು ಕನ್ನಡ ಉಪನ್ಯಾಸಕಿ ಹಾಗೂ ಹಾಸ್ಯ ಕಲಾವಿದ ಕವಿತಾ ಸುಧೀಂದ್ರ ಅವರು ತಮ್ಮ ಮನುಚಾದ ಕನ್ನಡದ ಭಾಷೆಯನ್ನು ಹಾಸ್ಯ ಭರಿತವಾದ ಸುಂದರವಾದ ನುಡಿಗಳ ಮಾಡುವುದರ ಮೂಲಕ ಗ್ರಾಮಸ್ಥರನ್ನು ಹಾಸ್ಯ ಚಟಾಕಿಯಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕರು ಹಾಗೂ ಮಾಜಿ ಎನ್ಎಸ್ಎಸ್ ಸಂಯೋಜನಾಧಿಕಾರಿಯದ ಡಾ. ಗಿರಿಧರ್ ಮಾತನಾಡಿ ಏನ್ ಎಸ್ ಎಸ್ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸಮಯಪ್ರಜ್ಞೆ ಶಿಸ್ತು ಹಾಗೂ ಕಾಯಕ ನಿಷ್ಠೆ ಮತ್ತು ಒಬ್ಬ ಸ್ವಯಂಸೇವಕ ಹೇಗೆ ನಿರಂತರವಾಗಿ ಸಮಯದ ಜೊತೆ ತನ್ನನ್ನು ಕಾಯಕದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂಬ ಪ್ರವೃತ್ತಿಯನ್ನು ಎನ್ಎಸ್ಎಸ್ ಕಲಿಸುತ್ತದೆ ನಾನು ಹಿಂದೆ ಎನ್ ಎಸ್ ಎಸ್ ಕಾರ್ಯಕ್ರಮ ಸಂಯೋಜನ ಅಧಿಕಾರಿ ಆಗಿನಿಂದ ಈಗಿನವರೆಗೆ ನಮ್ಮ ಕುವೆಂಪು ವಿಶ್ವವಿದ್ಯಾನಿಲಯ ಎನ್ಎಸ್ಎಸ್ ನಲ್ಲಿ ಉತ್ತಮವಾದ ಹೆಸರು ಮಾಡಿದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಅದಕ್ಕೆ ಕಾರಣ ನಮ್ಮ ಎನ್ಎಸ್ಎಸ್ ಸ್ವಯಂಸೇವಕರು ಸ್ವಯಂಸೇವಕ ಈ ದೇಶದ ಪ್ರಥಮ ಪ್ರಜೆ ರಾಷ್ಟ್ರ ಪ್ರತಿಯೊಂದು ಭೇಟಿ ಮಾಡಿ ಅವರಂದ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗುವುದು ಎನ್ಎಸ್ಎಸ್ಸಿನಿಂದ ಮಾತ್ರ ಎಂದು ಸ್ವಯಂ ಸೇವಕರನ್ನು ಕುರಿತು ಮಾತನಾಡಿದರು. ಈ ವೇದಿಕೆಯಲ್ಲಿ ಸಹ್ಯಾದ್ರಿ ಕಾಲೇಜಿನ ದೈಹಿಕ ನಿರ್ದೇಶಕರಾದ ಹರ್ಷ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಜಾನಪದ ಹಾಡುಗಳ ವೈಶಿಷ್ಟವನ್ನು ವೇದಿಕೆಯಲ್ಲಿ ತಂದರು ಈ ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಶಿವರುದ್ರಪ್ಪ ಗ್ರಾಮಸ್ಥರಾದ ನರಸಿಂಹಪ್ಪ ಶ್ರೀಮತಿ ಸಾವಿತ್ರಮ್ಮ ನಾಗರಾಜ್ ಸಿ ಕೆ ಹಾಗೂ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಬಸವರಾಜ್ ಸಿಪಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಮಾತನಾಡಿ ಚಂದನಕೇರಿಯ ಚಂದನವನದ ನಮ್ಮ ಊರಿನ ಯುವಕರಿಂದ ಇಂತಹ ಕಾರ್ಯಕ್ರಮ ಆಯೋಜನೆ ಆಗಲು ಕಾರಣವಾಗಿದೆ ನನಗೆ ತುಂಬಾ ಸಂತೋಷವಾಗುತ್ತದೆ ನಿಮ್ಮ ಏಳು ದಿನಗಳಿಗೆ ಕಾರ್ಯಕ್ರಮ ಯಶಸ್ವಿಯಾಗಲಿ ನಾವು ನಿಮ್ಮ ಜೊತೆ ಸದಾ ಇರುತ್ತೇವೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಚಂದನಕೇರಿಯ ಹಿರಿಯ ಸ್ವಯಂಸೇವಕರು ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಗಳಾದ ಡಾ. ರಾಜು ನಾಯಕ್ ಹಾಗೂ ರುದ್ರಮುನಿ ಹೆಚ್ ಉಪನ್ಯಾಸಕರಾದ ಚಂದ್ರಪ್ಪ ವಿಶ್ವರಾಧ್ಯ ಸುರೇಶ್ ಸಾಗರ್ ಗಾಯತ್ರಿ ಸೌಮ್ಯ ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು