Posted on 01-03-2025 |
Share: Facebook | X | Whatsapp | Instagram
ಶಿಕಾರಿಪುರ ಮಾರ್ಚ್ 1. ತಾಲೂಕಿನ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು ಇಂದಿನ 2024 25ನೇ ಸಾಲಿನ ತಾಲೂಕು ಮಟ್ಟದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬೆಳಕಿಗೆ ಬಂದಿದೆ
ತಾಲೂಕಿನ ಬಹಳಷ್ಟು ಹಿರಿಯ ಅಧಿಕಾರಿಗಳು ಜಿಲ್ಲಾ ಕೇಂದ್ರವಾದ ಶಿವಮೊಗ್ಗದಲ್ಲಿ ಮನೆ ಮಾಡಿಕೊಂಡಿದ್ದು ಪ್ರತಿನಿತ್ಯ ಶಿಕಾರಿಪುರಕ್ಕೆ ಓಡಾಡುತ್ತಾರೆ. ಹೀಗಾಗಿ ಅವರು ಐದು ನಿಮಿಷ ಹೆಚ್ಚು ಕಡಿಮೆಯಾದರೂ ಕೂಡ ಯಾವುದೇ ನಾಗರೀಕನಿಗೆ ಸಿಗುವುದಿಲ್ಲ ಹೀಗಾಗಿ ಕೆಲಸ ಕಾರ್ಯಗಳು ಆಮೆ ಗತಿಯಲ್ಲಿ ಸಾಗುತ್ತಿದೆ ಆದ್ದರಿಂದ ಸಂಬಂಧಪಟ್ಟ ಶಾಸಕರು ಮತ್ತು ಸಂಸದರು ಈ ಅಧಿಕಾರಿಗಳನ್ನು ಶಿಕಾರಿಪುರದಲ್ಲಿ ಇರುವಂತೆ ಮಾಡಬೇಕೆಂದು ಸಭೆ ಒತ್ತಾಯಿಸಿತು.
ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ 25000 ಎಕರೆ ಅಡಿಕೆ ತೋಟ ಬರುತ್ತದೆ ಈ ವರ್ಷ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ 15 / ತೋಟಗಾರಿಕೆಗೆ ಮಾತ್ರ ನೀರು ಲಭ್ಯವಿದ್ದು ಉಳಿದ ಕಡೆ ಬೆಳೆ ಹಾಳಾಗುತ್ತಿದೆ ಹಾಗಾಗಿ ತೋಟಗಾರಿಕೆ ಇಲಾಖೆಯೂ ಸಂಬಂಧಿಸಿದ ನೀರಾವರಿ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಏತ ನೀರಾವರರಿಯನ್ನು ಬಳಸಿಕೊಂಡು ಶಿಕಾರಿಪುರದ ಕೆರೆಗಳಿಗೆ ನೀರು ತುಂಬಿಸಬೇಕು ಇಲ್ಲದೇ ಹೋದಲ್ಲಿ ಅಡಿಕೆ ತೋಟಗಳು ಸಂಪೂರ್ಣ ಹಾಳಾಗಿ ತಾಲೂಕಿಗೆ ಯಥೇಚ್ಛವಾದ ಆರ್ಥಿಕ ಹಾನಿಯಾಗುವ ಸಂಭವವಿದೆ ತಕ್ಷಣ ಕೆರೆ ತುಂಬಿಸಬೇಕಾದ ಕೆಲಸವನ್ನು ಮಾಡಬೇಕೆಂದರು. ಇಲಾಖೆಗಳೇ ವಿದ್ಯುತ್ ನಿಗಮಕ್ಕೆ ವಿದ್ಯುತ್ ಬಿಲ್ಲನ್ನು ಕಳೆದ ಎರಡು ವರ್ಷದಿಂದ ಕಟ್ಟದೆ ಇರುವುದರಿಂದ ಅವರು ರೈತರ ಜಮೀನುಗಳಿಗೆ ನೀರು ಹಾಯಿಸಲು ವಿದ್ಯುತ್ತನ್ನು ಕೊಡುವುದಿಲ್ಲ ಎಂದು ಹೇಳಿದೆ. ಸರ್ಕಾರದ ಇಲಾಖೆಗಳ ಮಧ್ಯೆ ಈ ರೀತಿಯ ಸಮಸ್ಯೆ ಇರುವುದರಿಂದ ಶಾಸಕರು ಮತ್ತು ಸಂಸದರು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಇಲಾಖೆಗಳಿಂದ ಕರ್ನಾಟಕ ವಿದ್ಯುತ್ ನಿಗಮಕ್ಕೆ ಹಣವನ್ನು ಸಂದಾಯ ಮಾಡಬೇಕು ಇಲ್ಲದೆ ಇದ್ದರೆ ಸರ್ಕಾರದೊಂದಿಗೆ ಮಾತನಾಡಿ ರೈತರಿಗೆ ಉಚಿತವಾಗಿಯೇ ವಿದ್ಯುತ್ತನ್ನು ನೀಡಬೇಕು ಎಂದು ಸಭೆ ಒತ್ತಾಯಿಸಿತು. ನೀರಾವರಿ ಇಲಾಖೆಯಲ್ಲಿ ಕಳಪೆ ಕಾಮಗಾರಿ ಕಂಡುಬಂದಿದ್ದರಿಂದ ನೀರು ಸರಿಯಾಗಿ ಸರಬರಾಜಾಗದೆ ಅಲ್ಲಲ್ಲಿ ಸಾಕಷ್ಟು ನೀರು ಪೋಲಾಗುತ್ತಿದೆ ಈ ಬಗ್ಗೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಈಗಾಗಲೇ ರಾಜ್ಯದಲ್ಲಿ ಹಕ್ಕಿ ಜ್ವರ ಕಂಡುಬರುತ್ತಿದ್ದು ಪಶುಸಂಗೋಪನೆ ಇಲಾಖೆ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಅಡಿಕೆ ತೋಟಗಳಿಗೆ ಹಂದಿ ಹಾವಳಿ ಹೆಚ್ಚಾಗಿದ್ದರಿಂದ ಪುರಸಭೆ ಅದಾಗಿ ಇಲಾಖೆ ಯೊಂದಿಗೆ ಸೇರಿ ಇದರ ಹಾವಳಿಯನ್ನು ನಿಲ್ಲಿಸಬೇಕು.
ಬಿಸಿಎಂ ಇಲಾಖೆಯಂತೂ ಭ್ರಷ್ಟಾಚಾರದ ಕೂಪವಾಗಿದ್ದು
ಗೋಡನ್ನಿಂದ ಅಕ್ಕಿ ಹಾಸ್ಟೆಲ್ ಗೆ ಬರುವ ದಾರಿಯಲ್ಲೇ ಸಾಕಷ್ಟು ಸೋರಿಕೆಯಾಗುತ್ತದೆ ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಅವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ಅಲ್ಲದೆ ರಜಾದಿನಗಳಲ್ಲಿ ಹಬ್ಬ ಹರಿ ದಿನಗಳಲ್ಲಿ ಭಾನುವಾರ, ವಿದ್ಯಾರ್ಥಿಗಳ ಸಂಖ್ಯೆ ಹಾಸ್ಟೆಲ್ ಗಳಲ್ಲಿ ಕಡಿಮೆ ಇರುತ್ತದೆ ಆದರೂ ಶೇಖಡ ನೂರರಷ್ಟು ಹಾಜರಾತಿ ಇದೆ ಎಂದು ಹಾಸ್ಟೆಲ್ ಗಳು ಸರ್ಕಾರದಿಂದ ಹಣವನ್ನು ಪಡೆದುಕೊಳ್ಳುತ್ತದೆ ಮತ್ತು ಈ ಹಣವನ್ನು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ಇದನ್ನು ತಡೆಗಟ್ಟಬೇಕು.
ಆರೋಗ್ಯ ಇಲಾಖೆಯಲ್ಲಿ ವೈದ್ಯರು ಲಭ್ಯವಿಲ್ಲ ಪುರಸಭೆ ನಾಯಿಗಳ ಕಾಟವನ್ನು ನಿಯಂತ್ರಿಸಿ ಇಲ್ಲ ಹಂದಿ ಹಾವಳಿಯನ್ನು ಕೂಡ ನಿಲ್ಲಿಸಿಲ್ಲ ತಕ್ಷಣ ಈ ಬಗ್ಗೆ ಇಲಾಖೆಗಳು ಕ್ರಮವನ್ನು ಕೈಗೊಂಡು ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಭೆ ತಮ್ಮ ಅಭಿಪ್ರಾಯವನ್ನು ನೀಡಿತು.
ತಾಲೂಕಿನ ಶಾಸಕರು ರಾಜ್ಯದ ಬಿಜೆಪಿ ಪಕ್ಷದ ಅಧ್ಯಕ್ಷರು ಆಗಿರುವುದರಿಂದ ಅವರು ತಾಲೂಕಿನಲ್ಲಿ ಹೆಚ್ಚು ಕಾಲ ಇಲ್ಲದೇ ಇರುವುದೇ ಅಧಿಕಾರಿಗಳ ಈ ಮನಸ್ಥಿತಿಗೆ ಕಾರಣವಾಗಿದೆ ಹಾಗಾಗಿ ಶಾಸಕ ಮತ್ತು ಸಂಸದರು ಈ ಬಗ್ಗೆ ಗಮನಹರಿಸಿ ತಾಲೂಕಿನ ಭ್ರಷ್ಟಾಚಾರವನ್ನು ಕಡಿಮೆ ಮಾಡಬೇಕು. ಸಭೆಯಲ್ಲಿ ಶಾಸಕ ಬಿ ವೈ ವಿಜಯೇಂದ್ರ ಸಂಸದ ಬಿ ವೈ ರಾಘವೇಂದ್ರ ಮತ್ತು ಕೆಡಿಪಿ ಸಭೆಯ ಅಧ್ಯಕ್ಷರು ಸದಸ್ಯರು ಪತ್ರಕರ್ತರು ಹಾಜರಿದ್ದರು.
ವರದಿ ಶಿವಕುಮಾರ್ ಕ್ರಾಂತಿಕಿಡಿ ಶಿವಮೊಗ್ಗ