Posted on 01-03-2025 |
Share: Facebook | X | Whatsapp | Instagram
ಶಿವಮೊಗ್ಗ ಇಲ್ಲಿನ ಶನೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ ಬಾಯರಿ ಮೂವರು ಇಂದು ಬೆಳಿಗ್ಗೆ 5-30ಕ್ಕೆ ದೇವಸ್ಥಾನಕ್ಕೆ ತಂಪಾಗಿರುವ ತಮ್ಮ ಸ್ವಗೃಹದಲ್ಲಿ ಹೃದಯ ಸ್ಥಂಬನಕ್ಕೆ ತುತ್ತಾಗಿ ಇಹ ಲೋಕ ತ್ಯಜಿಸಿದ್ದಾರೆ.
ಮೃತರು ಮೂಲತಃ ಉಡುಪಿ ಜಿಲ್ಲೆಯ ಕೋಟ ದವರವಾಗಿದ್ದು ಪ್ರಾಥಮಿಕ ಶಿಕ್ಷಣವನ್ನು ತಮ್ಮೂರಿನಲ್ಲಿ ಮುಗಿಸಿ ನಂತರ ತಮ್ಮ ಮಾವನ ಮನೆ ಕಾರಣಗಿರಿಯಲ್ಲಿ ವಾಸವಾಗಿದ್ದು ಹೊಸನಗರದಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣ ಮುಗಿಸಿ ಶಿವಮೊಗ್ಗದ ಡಿವಿಎಸ್ ಸಂಜೆ ಕಾಲೇಜಿನಲ್ಲಿ ತಮ್ಮ ಡಿಗ್ರಿ ವಿದ್ಯಾಭ್ಯಾಸವನ್ನು ಪಡೆದು ಹಾಗೆ ಶಿವಮೊಗ್ಗದಲ್ಲಿಯೇ ಪುರೋಹಿತ ಶಿಕ್ಷಣವನ್ನು ಪಡೆದು ಅ.ಪ.ರಾಮ ಭಟ್ಟರ ಬಳಿ ಸ್ವಲ್ಪ ಕಾಲ ಪುರೋಹಿತ ಉದ್ಯೋಗವನ್ನು ಮಾಡಿ ನಂತರ ವಿನೋಬನಗರದಲ್ಲಿ ನೂತನವಾಗಿ ಕಟ್ಟಿದ ಶನಿಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ನೇಮಕ ವಾದರು ಜೊತೆಗೆ ಶಿವಮೊಗ್ಗದ ಬೇರೆ ಬೇರೆ ಕಡೆಗೆ ಪುರೋಹಿತರ ಕಾರ್ಯದ ಅಗತ್ಯವಿದ್ದಾಗ ತಮ್ಮ ಕಡೆಯವರನ್ನು ಕಳುಹಿಸಿ ಯಶಸ್ವಿಯಾಗಿ ಪೂಜೆ ಪುನಸ್ಕಾರವನ್ನು ಮಾಡುತ್ತಿದ್ದರು. ಪ್ರತಿ ವರ್ಷ ನವರಾತ್ರಿ ಮತ್ತು ದಸರಾ ಸಮಯದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಕೈಗೊಂಡು ಯಕ್ಷಗಾನ ತಾಳಮದ್ದಲೆ ಶಾಸ್ತ್ರೀಯ ಸಂಗೀತಕ್ಕೆ ಅವಕಾಶ ನೀಡಿ 10 ದಿನಗಳ ಕಾಲ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಪೂಜೆಯನ್ನು ನಡೆಸುತ್ತಿದ್ದರು. ಮೃತರು ಹೊಸನಗರ ಮತ್ತು ಶಿವಮೊಗ್ಗದಲ್ಲಿ ಡಾ. ಕೆ.ಜಿ. ವೆಂಕಟೇಶ್ ರವರ ನೇರ ವಿದ್ಯಾರ್ಥಿಯಾಗಿದ್ದು ಉತ್ತಮ ಸ್ವಭಾವವನ್ನು ಬೆಳೆಸಿಕೊಂಡಿದ್ದರು.ಶ್ರೀಯುತರು ತಮ್ಮ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅವರ ಆತ್ಮಕ್ಕೆ ಅವರು ಬೋಧಿಸಿದ ಶನೀಶ್ವರ ಸದ್ಗತಿಯನ್ನು ನೀಡಲಿ ಎಂದು ಬೇಡಿಕೊಳ್ಳುತ್ತೇವೆ.