ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗಮ್ಮರವರ ಸಾಹಸ ರೌಡಿಶೀಟರ್ ಬಂಧನ

ಕ್ರೈಂ Local

Posted on 24-02-2025 |

Share: Facebook | X | Whatsapp | Instagram


ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗಮ್ಮರವರ  ಸಾಹಸ   ರೌಡಿಶೀಟರ್ ಬಂಧನ

    ಭದ್ರಾವತಿ ಪೆ.24 ಇಲ್ಲಿನ ಪೇಪರ್ ಟೌನ್ ವ್ಯಾಪ್ತಿಯಲ್ಲಿ ಶಾಹಿದ್ ಎಂಬ 25 ವರ್ಷ ಪ್ರಾಯದ ರೌಡಿಶೀಟರ್ ನನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗಮ್ಮ ಗುಂಡು ಹಾರಿಸಿ ಸಾಹಸದಿಂದ ಬಂಧಿಸಿದ್ದಾರೆ. ಶಿವಮೊಗ್ಗ ದ ರೌಡಿ ಶೀಟರ್ ಶಾಹಿದ್ 12 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನ್ನಾಗಿದ್ದು ಈ ಹಿಂದೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣ ಕೂಡ ಆತನ ಮೇಲೆ ಇದೆ. ಹೀಗಾಗಿ ಶಿವಮೊಗ್ಗವನ್ನೇ ಬಿಟ್ಟು ಭದ್ರಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಈತ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಿಕೊಂಡು ಓಡಾಡುತ್ತಿದ್ದ. 

    ಈ ಬಗ್ಗೆ ಆತನ ಸುಳಿವನ್ನು ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು ಭದ್ರಾವತಿಯ ಇನ್ಸ್ಪೆಕ್ಟರ್ ಗೆ ಸೂಚನೆ ನೀಡಿದ್ದು ಇನ್ಸ್ಪೆಕ್ಟರ್ ನಾಗಮ್ಮ ತಮ್ಮ ಪೊಲೀಸ್ ಸಿಬ್ಬಂದಿಯೊಂದಿಗೆ ಈತ ಇರುವ ಜಾಗವನ್ನು ಕಂಡುಹಿಡಿದು ದಾಳಿ ಮಾಡಿದ್ದರು. ಆದರೆ ತನ್ನ ಹಳೆ ಬುದ್ಧಿಯನ್ನು ಉಪಯೋಗಿಸಿದ ಶಾಹಿದ್, ನಾಗರಾಜ್ ಎಂಬ ಪೊಲೀಸ್ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಇದರಿಂದ ಆಗುತ್ತಿರುವ ಅಪಾಯವನ್ನು ತಪ್ಪಿಸುವ  ಸಲುವಾಗಿ ನಾಗಮ್ಮ ರವರು ಶಾಯಿದ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಹಿಡಿದು ಪ್ರಕರಣವನ್ನು ದಾಖಲಿಸಿದ್ದಾರೆ. ಗುಂಡು ತಾಗಿದ ಕಾಲಿಗೆ ತಕ್ಷಣ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಗುಂಡನ್ನು ಹೊರ ತೆಗೆದು ಔಷಧಿ ಹಾಕಿ ಬ್ಯಾಂಡೇಜ್ ಮಾಡಲಾಗಿದೆ ಗುಂಡೇಟಿನ ಅಪಾಯದಿಂದ ಶಾಹಿದ್ ಪಾರಾಗಿದ್ದಾನೆ. 

ಭದ್ರಾವತಿಯ ನಾಗರಿಕರು ಇನ್ಸ್ಪೆಕ್ಟರ್ ನಾಗಮ್ಮ ನನ್ನು ಪ್ರಶಂಶಿಸಿದ್ದಾರೆ.

ನಾಗಭೂಷಣ್ ವರದಿಗಾರರು ಭದ್ರಾವತಿ

Search