ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಮಹಾ ಕುಂಭಕ್ಕೆ ತೆರಳಿದ ಮಗ

Religious Religious

Posted on 21-02-2025 |

Share: Facebook | X | Whatsapp | Instagram


ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಮಹಾ ಕುಂಭಕ್ಕೆ ತೆರಳಿದ ಮಗ

ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಮಹಾ ಕುಂಭಕ್ಕೆ ತೆರಳಿದ ಮಗ 

    ಜಾರ್ಖಂಡ್ ರಾಜ್ಯದಲ್ಲಿ ರಾಮಗಡ ಜಿಲ್ಲೆಯ ಅಖಿಲೇಶ್ ಕುಮಾರ್ ಎಂಬ ವ್ಯಕ್ತಿಯೊಬ್ಬ ಕಾಯಿಲೆ ಬಂದ ತನ್ನ ತಾಯಿ 65 ವರ್ಷದ ಸಂಜು ದೇವಿಯನ್ನು ಮನೆಯ ಕೋಣೆಯಲ್ಲೀ ಕೂಡಿಹಾಕಿ ಮಹಾಕುಂಭಕ್ಕೆ ತನ್ನ ಹೆಂಡತಿ ಮಕ್ಕಳು ಅತ್ತೆ ಮಾವನ ಜೊತೆ ತೆರಳಿದ್ದಾನೆ 

    ಈತ ಸಿಸಿಎಲ್ ನೌಕರನಾಗಿದ್ದು  ಆತನಿಗೆ ತಂದೆಯ ಸಾವಿನ ಅನುಕಂಪದ ಮೇಲೆ ನೌಕರಿ ಸಿಕ್ಕಿತ್ತು.ಇಲ್ಲಿನ ಸುಭಾಷ್ ನಗರ ಕಾಲೋನಿಯಲ್ಲಿ ಇದ್ದಾನೆ. ಸಂಜು ದೇವಿಯ ಮಗಳು ಚಾಂದಿನಿ ದೇವಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಮನೆಗೆ ಬಂದು ಬೀಗ ಒಡೆದು ಪೊಲೀಸರು ನೆರೆಹೊರೆಯವರ ಸಹಾಯದಿಂದ ಸಂಜು ದೇವಿಯನ್ನು ರಕ್ಷಿಸಿದ್ದಾರೆ. ಆಕೆಗೆ ಆಹಾರ ಕುಡಿಯುವ ನೀರು ಔಷದವನ್ನು ನೀಡಿದ ಪೊಲೀಸರು ಮತ್ತು ಅಕ್ಕಪಕ್ಕದವರು ನಿತ್ರಾಣಗೊಂಡ ಅವರನ್ನು ಸಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Search
Recent News