ಪ್ರಕೃತಿ ಎಂದರೆ ಕಣ್ಣಿಗೆ ಕಂಡರು ಕಾಣದಂತಹ ಮಾಯೆ ಡಾ.ಕಲೀಮ್ ಉಲ್ಲಾ

Social Program Education

Posted on 19-02-2025 |

Share: Facebook | X | Whatsapp | Instagram


ಪ್ರಕೃತಿ ಎಂದರೆ ಕಣ್ಣಿಗೆ ಕಂಡರು ಕಾಣದಂತಹ ಮಾಯೆ  ಡಾ.ಕಲೀಮ್ ಉಲ್ಲಾ

ಪ್ರಕೃತಿ ಎಂದರೆ ಕಣ್ಣಿಗೆ ಕಂಡರು ಕಾಣದಂತಹ ಮಾಯೆ  ಡಾ.ಕಲೀಮ್ ಉಲ್ಲಾ 

    ಶಿವಮೊಗ್ಗ  ಪೆ.19   ಪ್ರಕೃತಿ ಎಂದರೆ ಕಣ್ಣಿಗೆ ಕಂಡರು ಕಾಣದಂತಹ ಮಾಯೆ ಎಂದು ಕನ್ನಡ ಉಪನ್ಯಾಸಕ ಹಾಗೂ ವನ್ಯಜೀವಿ ಛಾಯಾಗ್ರಾಹಕ ಡಾ.ಕಲೀಮ್ ಉಲ್ಲಾ ಹೇಳಿದರು ಅವರು ಬಹುಮುಖಿಯ 48ನೇ ಕಾರ್ಯಕ್ರಮದಲ್ಲಿ ಒಂದು ಫೋಟೋ ಪಯಣ ಎಂಬ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮಾಡಿ ಪ್ರಕೃತಿಯೊಂದಿಗೆ ಪಿಸುಮಾತು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

    ಪ್ರಕೃತಿಗೆ ಪಕ್ಷಿಗಳಿಗೆ ಹತ್ತಿರವಾದ ಸಂಬಂಧ ಇದೆ ಸರ್ಕಾರ ಬೆಂಕಿ ಪೆಟ್ಟಿಗೆ ಕಾರ್ಖಾನೆಗಾಗಿ ಬೂರುಗದ ಮರವನ್ನು ಕಡಿದಾಗ ಅದನ್ನೇ ನಂಬಿದ್ದ ಸಾವಿರಾರು ಇಕಿಲಾ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಂಡವು.ಏಕೆಂದರೆ ಈ ಬೂದುಗದ ಮರದ ಕಾಯಿ ಮಾತ್ರ ತಿಂದು ಅವು ಬದುಕುತ್ತಿದ್ದವು.ಹಾಗೇ ಅದರ ಹಿಕ್ಕೆ ಗಳಿಂದ ಈ ಮರ ಬೆಳೆಯುತ್ತಿತ್ತು.ಪಕ್ಷಿಗಳು ಸತ್ತ ಮೇಲೆ ಮರವು ಸಾಯುತ್ತಿತ್ತು.ಆದ್ದರಿಂದ ಮರ ಮತ್ತು ಪಕ್ಷಿ ಒಂದಕ್ಕೊಂದು ಅವಲಂಬಿತ ಜೀವಿಗಳು.

    ಚೇಳು ತಾನು ಮರಿ ಹಾಕಿದ ಮೇಲೆ ಮಕ್ಕಳ ಪಾಲನೆಗಾಗಿ ತನ್ನ ಬೆನ್ನಿನಿಂದ ದೇಹದ ದ್ರವ ಹೊರಹಾಕಿ ಅವು ಮರಿಗಳು ಕುಡಿಯುವಂತೆ ಮಾಡಿ ಕೊನೆಗೆ ತಾನು ಆಹಾರ ವಿಲ್ಲದೆ ಸಾಯುತ್ತದೆ.ಟಿಟ್ಟಿಭ ಪಕ್ಷಿಗಳು ಕಾಡಿಗೆ ಯಾರೇ ಬಂದರೂ ಕೂಗಿ ಕಾಡಿನ ಎಲ್ಲರನ್ನೂ ಎಚ್ಚರಿಸುತ್ತದೆ. ಗೀಜಗ ಗಂಡು ಪಕ್ಷಿ ಗೂಡು ಕಟ್ಟುತ್ತವೆ.ಹೆಣ್ಣು ಬಂದು ಗೂಡನ್ನು ಪರೀಶೀಲಿಸಿ ತನಗೆ ಇಷ್ಟವಾದರೆ ಮಾತ್ರ ಗಂಡಿನೊಂದಿಗೆ ಕೂಡುತ್ತದೆ.ಹೆಣ್ಣು ಮಕ್ಕಳಿಗೆ ಆಹಾರ ಕೊಡುವಾಗ ಗಂಡು ದೂರ ನಿಂತು ಕಾಯುತ್ತದೆ.

    ಅದೇ ರೀತಿ ಮರಿಗಳ ತ್ಯಾಜ್ಯವನ್ನು ಕೆಳಗೆ ಬೀಳುವಾಗಲೇ ಬಾಯಲ್ಲಿ ಹಿಡಿದು ದೂರದಲ್ಲಿ ನೀರಿಗೆ ಹಾಕುತ್ತದೆ.ಇದರ ಉದ್ದೇಶ ಮರಿಗಳ ವಾಸನೆ ಬೇರೆ ಪಕ್ಷಿಗಳಿಗೆ ಗೊತ್ತಾಗಬಾರದು ಎಂದು ಹೀಗೆ ಮಾಡುತ್ತದೆ.ಮಂಗೋಟೆ ಎಂಬ ದಾಂಡೇಲಿ ಭಾಗದಲ್ಲಿ ವಾಸಮಾಡುವ ಪಕ್ಷಿಗಳು ಅನ್ಯೋನ್ಯ ದಾಂಪತ್ಯಕ್ಕೆ ಹೆಸರಾದ ಪಕ್ಷಿಯಾಗಿದೆ.ಹೆಣ್ಣು ಮರಿಹಾಕುವಾಗ ಎತ್ತರದ ಗಿಡದ ಟೊಂಗೆಯ ಮೇಲೆ ರಂಧ್ರ ಕೊರೆದು ಒಳಗಡೆ ಹೆಣ್ಣನ್ನು ಕೂರಿಸಿ ಸುತ್ತಲೂ ಮಣ್ಣಿನ ಗೋಡೆ ಕಟ್ಟಿ ಕೊಕ್ಕಿನಿಂದ ಆಹಾರ ಕೊಡುತ್ತದೆ.ಕ್ರಮೇಣ ಹೆಣ್ಣು ಹಕ್ಕಿಯ ಮೈಮೇಲಿನ ಪುಕ್ಕಗಳು ಉದುರಿ ಹಾಸಿಗೆ ತರ ಆಗುತ್ತದೆ.ಗಂಡು 100ರಿಂದ 200ಕಿ.ಮೀ ದೂರ ಹೋಗಿ ಆಹಾರ ಹುಡುಕಿಕೊಂಡು ಬಂದು ಮರಿ ಮತ್ತು ತಾಯಿಗೆ ಕೊಡುತ್ತದೆ.ಹೆಚ್ಚು ಮಾಂಸಹಾರ ಕೊಟ್ಟು ತಾಯಿ ಮರಿಗಳನ್ನು ಗಟ್ಟಿಗೊಳಿಸಿ ಮರಿ ದೊಡ್ಡದಾದ ಮೇಲೆ ಗೂಡನ್ನು ಒಡೆಯುತ್ತದೆ.ಒಂದು ವೇಳೆ ಗಂಡು ಆಹಾರ ಹುಡುಕಲು ಹೋದಾಗ ಬೇಟೆಗಾರ ನಿಗೆ ಬಲಿಯಾದರೆ ಇಡೀ ಕುಟುಂಬ ನಾಶವಾಗುತ್ತದೆ.ಒಂದು ವೇಳೆ ಹೆಣ್ಣು ಸತ್ತು ಹೋದರೆ ಗಂಡು ಕೊನೆಯವರೆಗೆ ಹಾಗೇ ಒಂಟಿಯಾಗಿ ಉಳಿಯುತ್ತದೆ.ಸಾರಾ ಎಂಬ ಹಕ್ಕಿಗಳು ಸಂಗಾತಿ ಕಳೆದುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.

    ಕಿಂಗ್ ಫಿಶರ್ ಹಕ್ಕಿಗಳು ಮೀನನ್ನು ಮಾತ್ರ ಮರಿಗಳಿಗೆ ನೀಡುತ್ತದೆ.ಮರಿ ದೊಡ್ಡದಾದಂತೆ ದೊಡ್ಡ ಮೀನನ್ನು ತರುತ್ತದೆ.ಮರಿ ದೊಡ್ಡದಾದ ಮೇಲೆ ಬೇಟೆಯಾಡಲು ಕಲಿಸಿ ಆಹಾರ ಕೊಡುವುದನ್ನು ನಿಲ್ಲಿಸಿ ಅದರ ಸಂಪರ್ಕ ಕಡಿತ ಗೊಳಿಸುತ್ತದೆ.

    ರಾಜಹಂಸ ಪಕ್ಷಿಗಳು ತಮ್ಮ ಮರಿಗಳಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಬಿದ್ದಾಗ ತಮ್ಮ ದೇಹವನ್ನು ಕಲಕಿ ರಕ್ತವನ್ನು ಕಾರಿ ಕೊಕ್ಕಿನ ಮೂಲಕ  ತಮ್ಮ ಮರಿಗಳಿಗೆ ಉಣಿಸುತ್ತದೆ.

ಕೆಲವು ಕೊಕ್ಕರೆಗಳು ದಿನಗಟ್ಟಲೆ ಆಹಾರ ಹುಡುಕಿ ಕೊನೆಗೆ ಆಹಾರ ಸಿಕ್ಕಿದಾಗ ಸಂತೋಷದಿಂದ ಕುಣಿಯುತ್ತದೆ.ಇದನ್ನು ನೋಡಿದ ಹದ್ದು ಹಾರಿಬಂದು ಅದರ ಬಾಯಿಂದ ಆಹಾರ ಕಸಿಯುತ್ತದೆ. ಡ್ರಾಂಗೊ ಎಂಬ ಹಕ್ಕಿಗಳು ತುಂಬಾ ಬಲಶಾಲಿಯಾಗಿದ್ದು ಅನೇಕ ಹಕ್ಕಿಗಳ ಧ್ವನಿ ಅನುಕರಣೆ ಮಾಡುತ್ತದೆ.

ಕೆಲವು ಹಕ್ಕಿಗಳ ಕೊಕ್ಕು ಬಿಚ್ಚಲು ಸಾಧ್ಯವಿಲ್ಲ ಅವು ಮಕರಂದ ಹೀರಿ ಬದುಕುತ್ತದೆ. ಒಟ್ಟಿನಲ್ಲಿ ಪಕ್ಷಿ ಪ್ರಪಂಚ ತುಂಬಾ ಕುತೂಹಲಕಾರಿ, ಹಾರುವಾಗ ನಾಯಕ ಹೇಳಿದ ಮಾರ್ಗದಲ್ಲಿ ಸಾಗುತ್ತದೆ.ಯಾವ ಯಾವ ಕೆರೆಗೆ ಯಾವ್ಯಾವ ಗುಂಪು ಹೋಗಬೇಕು ಎಂದು ಮೊದಲೇ ನಿರ್ಧಾರ ಮಾಡಿಕೊಂಡಿರುತ್ತದೆ.ಹಕ್ಕಿಗಳ ಪ್ರಪಂಚದಲ್ಲಿ ಹೆಣ್ಣೇ ಸ್ಟ್ರಾಂಗ್ ಆಗಿರುತ್ತದೆ.ಎಂದರು.

ಬಹುಮುಖಿಯ ಡಾ.ನಾಗಭೂಷಣ ರವರು ಸ್ವಾಗತ ದೊಂದಿಗೆ ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ವರದಿ ಡಾ.ಕೆ.ಜಿ.ವೆಂಕಟೇಶ್  ಕ್ರಾಂತಿಕಿಡಿ ಶಿವಮೊಗ್ಗ.

Search
Recent News