ಶಿವಾಜಿ ಮಹಾರಾಜರು ಸನಾತನ ಧರ್ಮ ಉಳುವಿಗಾಗಿ ಹುಟ್ಟಿದ ಅವತಾರ ಪುರುಷ ಹಾರಿಕ ಮಂಜುನಾಥ್

famous personalities history

Posted on 19-02-2025 |

Share: Facebook | X | Whatsapp | Instagram


ಶಿವಾಜಿ ಮಹಾರಾಜರು ಸನಾತನ ಧರ್ಮ ಉಳುವಿಗಾಗಿ ಹುಟ್ಟಿದ  ಅವತಾರ ಪುರುಷ ಹಾರಿಕ ಮಂಜುನಾಥ್






ಶಿವಾಜಿ ಮಹಾರಾಜರು ಸನಾತನ ಧರ್ಮ ಉಳುವಿಗಾಗಿ ಹುಟ್ಟಿದ  ಅವತಾರ ಪುರುಷ ಹಾರಿಕ ಮಂಜುನಾಥ್ 


      ಶಿವಮೊಗ್ಗ ಪೆ.19 ದೇವರನ್ನು ಸನಾತನ ಸಂಪ್ರದಾಯ ವನ್ನು ಇಂದಿಗೂ ಉಳಿಯುವಂತೆ ಮಾಡಿದವರು ಶಿವಾಜಿ ಮಹಾರಾಜರು ಎಂದು  ಯುವವಾಗ್ಮಿ ಹಾರಿಕ ಮಂಜುನಾಥ್ ಹೇಳಿದರು.ಅವರು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡುತ್ತಿದ್ದರು 

ಹಿಂದೂ ಸಾಮ್ರಾಜ್ಯದ ನಿರ್ಮಾಣಕ್ಕಾಗಿ ಹಾಗೂ ಹಿಂದೂ ಧರ್ಮದ ಆಚರಣೆ ಸಂಪ್ರದಾಯದ ಉಳುವಿಗಾಗಿ ಶಿವಾಜಿಯವರು ತಮ್ಮ ರಕ್ತವನ್ನು ಹರಿಸಿದ್ದರು .ಅವರ ತಾಯಿ ಜೀಜಾಬಾಯಿ, ದೇವಿ ತುಳಜಾ ಭವಾನಿ ಮುಂದೆ ಭಾರತದ ಕೀರ್ತಿಯ ಧ್ವಜ ಹಾರಿಸುವ ಮಗು ಹುಟ್ಟಲಿ ಎಂದು ಪ್ರಾರ್ಥಿಸಿದ್ಜರು . ಅದರಂತೆ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಹಾಗೆ ಧರ್ಮಕ್ಕೆ ತೊಂದರೆಯಾದಾಗ ಶಿವಾಜಿ ಅವತರಿಸಿ ದೇಶವನ್ನು ಉದ್ಧರಿಸಿದ ಎಂದರು

      ಹಿಂದೂ ಧರ್ಮದಲ್ಲಿ ಹುಟ್ಟಿದ ಮಾತ್ರಕ್ಕೆ ಹಿಂದೂ ವಲ್ಲ ಆ ಧರ್ಮದ ರಕ್ಷಣೆ ಮಾಡಬೇಕು.ಶಿವಾಜಿಯ ತಾಯಿ ಜೀಜಾಬಾಯಿ ಶಿವಾಜಿಯ ಸೊಸೆ ತಾರಾಬಾಯಿ ಸೈನ್ಯದಲ್ಲಿದ್ದ ಕಾತ್ಯಾಯಿನಿ ವೀರ ವನಿತೆಯರಾಗಿದ್ಜರು.

ಶಿವಾಜಿ ವಂಶದ ಮೂಲ ಪುರುಷ ಬೆಳ್ಳಿಯಪ್ಪ ಕರ್ನಾಟಕ ದವರು ಅವರ ಮೂಲ ಗದಗ.ಯಾವತ್ತು ಹಿಂದೂಗಳು ಸಂಘಟಿತ ರಾಗಿದ್ದರೆ ಮಾತ್ರ  ಹಿಂದೂತ್ವ ಉಳಿಯುತ್ತದೆ.

ವಿ.ಡಿ.ಸಾವರ್ಕರ್ ಹೇಳುತ್ತಾರೆ ನಮಗೆ ಹಿಂದೂ ಧರ್ಮದಲ್ಲಿ ಹುಟ್ಟಿದ ಹಿಂದೂ ವಿರೋಧಿಗಳ ಬಗ್ಗೆ ಮಾತ್ರ ಹೆದರಿಕೆ ವಿನಃ 

ಮುಸ್ಲಿಂರ ಬಗ್ಗೆ ಕ್ರೈಸ್ತರ ಬಗ್ಗೆ ಹೆದರಿಕೆ ಇಲ್ಲ ಎಂದಿದ್ದಾರೆ.

ಅದೇ ರೀತಿ ಯಾರಾದರೂ ನಮ್ಮ ದೇವರ ಬಗ್ಗೆ ಸಾಕ್ಷಿ ಕೇಳಿದರೆ ನಮ್ಮ ಮನೆಯ ಚಿಕ್ಕ ಮಕ್ಕಳು ಅವರಿಗೆ ಉತ್ತರ ಕೊಡಬೇಕು ಎಂದರು.

ಗ್ಯಾರಂಟಿ ಅನುಷ್ಠಾನ ಯೋಜನೆಯ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಚಂದ್ರ ಭೂಪಾಲ್ ಮಾತನಾಡಿ ಶಿವಾಜಿಯ ಕಾಲದಲ್ಲಿ ಮಹಿಳೆಯರಿಗೆ ವಿಶೇಷ ಗೌರವ ನೀಡಲಾಗುತ್ತಿತ್ತು.ರಾಷ್ಟ್ರಕ್ಕೆ ಗೌರವವನ್ನು ತರುವಂತ ಕೆಲಸ ಮಾಡಬೇಕೆಂದು ನಮ್ಮ ನಾಡಿಗೆ ಸಾರಿದವರೇ ಶಿವಾಜಿ ಎಂದರು.

ಸಂಸದ ರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿವಾಜಿಯನ್ನು ಬಸವಣ್ಣನವರನ್ನು ನಿರ್ದಿಷ್ಟ ಜಾತಿಗೆ ಸೀಮಿತ ಗೊಳಿಸಬಾರದು ಅವರು ಹಿಂದೂ ಧರ್ಮಕ್ಕೆ ತಿಲಕಪ್ರಾಯರು ಎಂದರು.

ವೇದಿಕೆಯಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಅಧ್ಯಕ್ಷರಾದ ಚಂದ್ರರಾವ್ ಗಾರ್ಗೆ ಉಪಾಧ್ಯಕ್ಷರಾದ ರಮೇಶ್ ಬಾಬು ಕ್ಷತ್ರಿಯ ಮರಾಠ ಪರಿಷತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ದಿನೇಶ್ ಚೌಹಾಣ್ 

ಛತ್ರಪತಿ ಶಿವಾಜಿ ಮರಾಠ ಟ್ರಸ್ಟ್ ಅಧ್ಯಕ್ಷರಾದ ಸಿದ್ದೋಜಿ ರಾವ್ ಹೆಚ್ಚುವರಿ ಜಿಲ್ಲಾಧಿಕಾರಿ  ಅನಿಲ್ ಕುಮಾರ್ ಭೂಮರೆಡ್ಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ಉಪಸ್ಥಿತರಿದ್ದರು.

Search