Posted on 18-02-2025 |
Share: Facebook | X | Whatsapp | Instagram
ಹೊಸನಗರ ಇಲ್ಲಿನ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣರವರ ಜನ್ಮ ದಿನಾಚರಣೆಯನ್ನು ಫೆಬ್ರವರಿ 22ರಂದು ಅದ್ದೂರಿಯಾಗಿ ಆಚರಿಸಲಾಗುವುದೆಂದು ಬೇಳೂರು ಗೋಪಾಲಕೃಷ್ಣ ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದಕ ಕಲಗೋಡು ರತ್ನಾಕರ್ ಅವರು ಹೇಳಿದರು.
ಅವರು ಹೊಸನಗರ ಪ್ರವಾಸಿ ಧಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರು ಕೊಡುಗೈ ದಾನಿಗಳು ಸಾಕಷ್ಟು ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವ
ಗೋಪಾಲಕೃಷ್ಣರವರು ನಮ್ಮ ಕ್ಷೇತ್ರದ ಅಭಿವೃದ್ಧಿ ಹರಿಕಾರರು ಆಗಿದ್ದಾರೆ. ಇವರ ಹುಟ್ಟುಹಬ್ಬವನ್ನು ಸಂಪೂರ್ಣ ಕ್ಷೇತ್ರದ ಜನತೆಯ ಪರವಾಗಿ ಹೊಸನಗರದ ನೆಹರು ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಈ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಅರ್ಜುನ ಜನ್ಯ ಮತ್ತು ಶ್ರೇಷ್ಠ ನಿರೂಪಕಿ ಕುಮಾರಿ ಅನುಶ್ರೀ ಆಗಮಿಸುವರು ಇದೇ ಸಂದರ್ಭದಲ್ಲಿ ನಮ್ಮ ನಾಡಿನ ಧೀಮಂತ ನಾಯಕ ಡಾ. ಕಾಗೋಡು ತಿಮ್ಮಪ್ಪ ರವರನ್ನು ಹೃತ್ಪೂರ್ವಕವಾಗಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರು ಆಗಮಿಸುವರು. ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್ ಚಿತ್ರನಟ ರವಿಶಂಕರ್ ಯೋಗಿ ವಿರಾಟ್ ಮತ್ತು ಕೆಎಂಎಫ್ ಅಧ್ಯಕ್ಷ ವಿದ್ಯಾದರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಕಳೂರು ಶ್ರೀರಾಮೇಶ್ವರ ಸೊಸೈಟಿ ಅಧ್ಯಕ್ಷ ವಿನಯ್ ಕುಮಾರ್ ಹೊಸನಗರ ಕಾಂಗ್ರೆಸ್ ಅಧ್ಯಕ್ಷ ಗುರುರಾಜ ಶಾಸಕರ ಆಪ್ತ ಕಾರ್ಯದರ್ಶಿ ಕೆ ಎಸ್ ಸಣ್ಣಕ್ಕಿ ಮಂಜುನಾಥ ಗುರು ಸುಧೀರ ರಾಧಿಕಾ ರತ್ನಾಕರ ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು.