ಯೋಗ ಶಿಬಿರಾರ್ಥಿ ಗಳಿಗೆ ಕುಂಭಮೇಳದಲ್ಲಿ 14,50,000 ಮೋಸ

ಕ್ರೈಂ Local

Posted on 18-02-2025 |

Share: Facebook | X | Whatsapp | Instagram


ಯೋಗ ಶಿಬಿರಾರ್ಥಿ ಗಳಿಗೆ ಕುಂಭಮೇಳದಲ್ಲಿ 14,50,000 ಮೋಸ

ಶಿವಮೊಗ್ಗ ಇಲ್ಲಿನ ಯೋಗ ವಿಸ್ಮಯ ಕೇಂದ್ರದ ಯೋಗ ಪಟುಗಳಿಗೆ ಕುಂಭಮೇಳದಲ್ಲಿ ವಸತಿ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು 14 ಲಕ್ಷದ 50,000 ಪಡೆದು ಮೋಸ ಮಾಡಿದ ಬಗ್ಗೆ ವಿನೋಬನಗರದ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಬಂದಿದೆ. 

ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್ನಿಂದ 650 ಜನ ಫೆಬ್ರವರಿ 14ರಂದು ಕುಂಭಮೇಳಕ್ಕೆ ಹೊರಟಿದ್ದು ಈ ಟ್ರಸ್ಟ್ ನ ವ್ಯವಸ್ಥಾಪಕಿ ವಿಜಯಲಕ್ಷ್ಮಿ ಅವರು ಬೆಂಗಳೂರಿನ ತ್ರಿ ಜಿ ಯೋಗ ಚಿಕಿತ್ಸಾಲಯದ ಡಾ.ಗಣೇಶ್ ಗುರೂಜಿಯನ್ನು ಸಂಪರ್ಕಿಸಿ ವಸತಿ ವ್ಯವಸ್ಥೆಗಾಗಿ14,50,000 ಸಲ್ಲಿಸಿದ್ದರು

ಆದರೆ ಕುಂಭಮೇಳದಲ್ಲಿ ಸೆಕ್ಟರ್ 24ರಲ್ಲಿ ತಗಡಿನ ಸೀಟ್ ಹಾಕಿ ಬೆಡ್ ಗಳಿಗೆ ಸೀರೆಯನ್ನು ಕಟ್ಟಿ ವ್ಯವಸ್ಥೆ ಮಾಡಲಾಗಿತ್ತು ಇದು ಬೇಡ ಎಂದು ಹೇಳಿದ್ದರಿಂದ ಹಣ ವಾಪಾಸ್ ನೀಡದೇ ಈಗ ಖರ್ಚಾಗಿದೆ ಎಂದಿದ್ದಾರೆ, ಇದನ್ನು ಒಪ್ಪದಿದ್ದಾಗ ಗುರೂಜಿಯ ಆಪ್ತ ಸಹಾಯಕ ಯೋಗೇಶ್ ಎಂಬಾತನು ಇವರ ಮೊಬೈಲನ್ನು ಕಿತ್ತುಕೊಂಡು ಜೀವ ಬೆದರಿಕೆ ಹಾಕಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದನು.ಈ ಬಗ್ಗೆ ಹಣ ಕಳೆದುಕೊಂಡ ಕುಂಭಮೇಳದ ಯಾತ್ರಿಕರು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 ಒಟ್ಟಿನಲ್ಲಿ ಕುಂಭಮೇಳದಲ್ಲಿ ಭಕ್ತಾದಿಗಳಿಗೆ ವ್ಯವಸ್ಥಾಪಕ ಗುರೂಜಿ ಅಡ್ವಾನ್ಸ್ 5ಲಕ್ಷ ಪಡೆದಿದ್ದು ಉಳಿದ ಹಣವನ್ನು ಅಕೌಂಟಿಗೆ ಹಾಕಲು ಹೇಳಿ ಮೋಸ ಮಾಡಿರುವುದು ಕಂಡುಬರುತ್ತದೆ. ಆದರೆ ಹಣದ ಸಂಪೂರ್ಣ ವಿವರ ನಿಖರವಾಗಿ ತಿಳಿದು ಬಂದಿಲ್ಲ. 

ಜನರು ಹುಚ್ಚು ಹಿಡಿದಂತೆ ಕುಂಭಮೇಳಕ್ಕೆ ಹೋಗಿ ನೂರಾರು ಜನ ಕಾಲ್ ತುಳಿತಕ್ಕೆ ಸಿಕ್ಕಿ ಸಾವನಪ್ಪಿದ್ದಾರೆ.

ಕೇವಲ ಆಘೋರಿಗಳು ನಾಗಾಜನರು ನಿಷ್ಠೆಯಿಂದ ಮಾಡುತ್ತಿದ್ದ ಕುಂಭಸ್ಥಾನ ಈ ಸರ್ಕಾರದ ಪ್ರಚಾರದಿಂದಾಗಿ ಪಾವಿತ್ರ್ಯತೆ ಕಳೆದುಕೊಂಡು ನಗೆ ಪಾಟಲಿಗೆ ಈಡಾಗುತ್ತಿದೆ.

Search