Posted on 14-02-2025 |
Share: Facebook | X | Whatsapp | Instagram
ಶಿವಮೊಗ್ಗ ಫ 14 ಇಲ್ಲಿನ ದೂರವಾಣಿ ಬಡಾವಣೆಯಲ್ಲಿ ಎರಡು ದಿನಗಳ ಕಾಲ ಮುದ್ರಾ ಸಾಹಿತಿ ಪ್ರಾಣಯಾಮ ತರಭೇತಿ ಶಿಬಿರವನ್ನು ಯೋಗ ಗುರು ಡಾ. ಕೆ.ಜಿ. ವೆಂಕಟೇಶ್ ನಡೆಸಿಕೊಟ್ಟರು
ಮೊದಲ ದಿನದ ತರಬೇತಿಯಲ್ಲಿ ಅಷ್ಟಾಂಗ ಯೋಗದ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಹಾರ ಧಾರಣ ಧ್ಯಾನ ಸಮಾಧಿ ಸ್ಥಿತಿಗಳ ಬಗ್ಗೆ ತಿಳಿಸಿಕೊಟ್ಟ ಇವರು ಪ್ರಾಣ ಎಂದರೆ ಉಸಿರು ಯಾಮ ಅಂದರೆ ಸಮಯ ಎಷ್ಟು ಸಮಯ ಉಸಿರನ್ನು ಹಿಡಿದಿಟ್ಟುಕೊಳ್ಳಬೇಕು ಹಾಗೂ ಬಿಡಬೇಕು, ಎಂದು ತಿಳಿಸಿ ಪಂಚಪ್ರಾಣದ ವಿಧಾನ ಗಳಾದ ಉದಾನ ಅಪಾನ ಸಮಾನ ವ್ಯಾನ ಪ್ರಾಣದ ಬಗ್ಗೆ ತಿಳಿಸಿ ಯಾವ ಭಾಗದಲ್ಲಿ ಉಸಿರಾಟವನ್ನು ನಡೆಸುತ್ತದೆ ಪಂಚಪ್ರಾಣ ಎಂದರೇನು ಯೋಗದ ಇತಿಹಾಸ ಪತಂಜಲಿ ಬಗ್ಗೆ ತಿಳಿಸಿಕೊಟ್ಟರು.
ಕಪಾಲಭಾತಿ ಬಸ್ತ್ರಿಕ ವಿಲೋಮ ಅನುಲೋಮ ಚಂದ್ರಾನುಲೋಮ ಸೂರ್ಯಾನುಲೋಮ ಚಂದ್ರ ಭೇದ ಸೂರ್ಯಭೇದ ನಾಡಿಶೋಧನಾ ವಿಭಾಗೀಯ ಪ್ರಾಣಾಯಾಮ ಮಂಡೂಕ ಪ್ರಾಣಾಯಾಮದ ಬಗ್ಗೆ ತಿಳಿಸಿದರು.
ಸಮುದಾಯ ಶಿವಮೊಗ್ಗದ ಅಧ್ಯಕ್ಷರಾದ ಶ್ರೀನಿವಾಸ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.