ಮೈ ಫ್ಯಾಮಿಲಿ ನಾಟಕ ವಿಮರ್ಶೆ - ಡಾ.ಕೆ.ಜಿ.ವೆಂಕಟೇಶ್

Drama Drama

Posted on 14-02-2025 |

Share: Facebook | X | Whatsapp | Instagram


ಮೈ ಫ್ಯಾಮಿಲಿ  ನಾಟಕ ವಿಮರ್ಶೆ - ಡಾ.ಕೆ.ಜಿ.ವೆಂಕಟೇಶ್

ಮೈ ಮನಸ್ಸು ಮಕ್ಕಳು ಸಂಸಾರ ಸಂಸ್ಕಾರ ಕೇಂದ್ರಿತವಾದ ಅತ್ಯುತ್ತಮ ನಾಟಕ ಮೈ ಫ್ಯಾಮಿಲಿ  ದಿನ.13/2/25 ಕುವೆಂಪು ರಂಗಮಂದಿರ 


ಮೈಸೂರಿನ ರಂಗಾಯಣದ ವತಿಯಿಂದ ಗಣೇಶ್ ಮಂದರ್ತಿ ನಿರ್ದೇಶನ ದ ಮೂಲಕತೆ ಗೌತಮಿಯವರ ಮೈ ಫ್ಯಾಮಿಲಿ ನಾಟಕ ಯಾವ ದಿಕ್ಕಿನಿಂದ ನೋಡಿದರೂ ಜೀವನದ ಮೌಲ್ಯ ಕಟ್ಟಿಕೊಡುವ ನಾಟಕವಾಗಿದೆ.

ಶ್ರವಣ ಹೆಗ್ಗೋಡು ರವರ ಗೊಂಬೆಗಳ ಪರಿಕಲ್ಪನೆ ನಾಟಕವನ್ನು ಮತ್ತಷ್ಟು ಉತ್ತಮ ಗೊಳಿಸಿದೆ.

     ಸಿರಿ ಮತ್ತು ಸೀತೆ ಪಾತ್ರ ಮಾಡಿದ ರಕ್ಷಿತ ಟಿ.ಎಲ್.ರವರು ನಾಟಕದ ಆರಂಭದಿಂದ ಅಂತ್ಯದವರೆಗೆ ಎರಡು ಘಂಟೆಗಳ ಕಾಲ ಅತ್ಯುತ್ತಮ ಅಭಿನಯ ನೀಡಿದ್ದಾರೆ 

     ನಾಟಕದ ಒಳಗೆ ಬರುವ ನಾಟಕವಾದ ಅಶ್ವಮೇಧ ಪ್ರಸಂಗದಲ್ಲಿ ಸೀತೆ ರಾಮನಿಗೆ ಕೆಲವು ಪ್ರಶ್ನೆ ಕೇಳುತ್ತಾಳೆ. ಅಗ್ನಿ ಪ್ರವೇಶ ಮಾಡಿ ನನ್ನನ್ನು ಹೊರತಂದ ರಾಮ ಅಗಸನ ಮಾತು ಕೇಳಿ ಕಾಡಿಗೆ ಅಟ್ಟಿದ ನಂತರ ಈಗ ನಾನು ಪುನಃ ಅಯೋಧ್ಯೆಗೆ ಹೋದರೆ ಇನ್ನ್ಯಾರ ಮಾತನ್ನು ಕೇಳಿ ನನ್ನನ್ನು ಪುನಹ ಕಾಡಿಗೆ ಕಳಿಸುವುದಿಲ್ಲ, ಎಂದು ನಂಬಲು ಸಾಧ್ಯವಿಲ್ಲ ಆದ್ದರಿಂದ ಆತನ ಸಹವಾಸವೇ ಬೇಡ ಅವನು ಅಲ್ಲಿ ಇರಲಿ ನಾನು ಕಾಡಿನಲ್ಲಿ ಇರುತ್ತೇನೆ.ಎನ್ನುತ್ತಾಳೆ. ಆಗ ನಾಟಕದ ಅಂತ್ಯ ಹೇಗಾಗಬಹುದು ಎಂಬ ಸಂಶಯ ಬಂದಾಗ ವಾಲ್ಮೀಕಿ ಪಾತ್ರಧಾರಿ ನಾಟಕದ ಮೂಲ ಪಾತ್ರಗಳಾದ ಭಾರ್ಗವ್ ಮತ್ತು ಸೌಮ್ಯರ ಕಡೆ ನೋಡಿ ಗಂಡ ಹೆಂಡಿರಲಿ ಒಂದು ಮಾತು ಬರುತ್ತೆ ಹೋಗುತ್ತೆ ಆದರೆ ಮಕ್ಕಳ ಮುಖ ನೋಡಿ ಸುಮ್ಮನಿದ್ದು ಕುಟುಂಬವನ್ನು ಕಾಪಾಡಿಕೊಂಡು ಹೋಗಬೇಕು ಎನ್ನುತ್ತಾನೆ.ಆದರೂ ಸೀತೆ ಒಪ್ಪುವುದಿಲ್ಲ ಅಷ್ಟರೊಳಗೆ ಮೂಲ ಮಕ್ಕಳ ಪಾತ್ರವಾದ ಶ್ಯಾಮ್ ಮತ್ತು ಸಾನ್ವಿ ಅಪ್ಪ ಅಮ್ಮನನ್ನು ಗುರುತಿಸಿ ವೇದಿಕೆ ಮೇಲೆ ಕರೆತಂದು ಒಂದು ತಾರ್ಕಿಕ ಅಂತ್ಯ ನೀಡುತ್ತಾರೆ. ಇದೇ ಸಮಯದಲ್ಲಿ ಮಾದಪ್ಪ ಮೇಷ್ಟ್ರು ಪಾತ್ರ ಬಂದು ಸಿರಿ ಪಾತ್ರ ಮಾಡಿದ ಪಾತ್ರಕ್ಕೆ ಯಾಕೆ ಓದು ನಿಲ್ಲಿಸಿದೆ ನಿನಗೆ ಹಣಕಾಸಿನ ಸಮಸ್ಯೆ ಇದ್ದರೆ ನನಗೆ ಹೇಳಬೇಕಿತ್ತು ನಮ್ಮ ಹಳ್ಳಿಯಲ್ಲಿ ನಿನ್ನಷ್ಟು ಚೆನ್ನಾಗಿ ಓದುವವರು ಯಾರು ಇಲ್ಲ ಆದ್ದರಿಂದ ಎಷ್ಟೇ ಕಷ್ಟವಾದರೂ ಓದು ನಿಲ್ಲಿಸಬಾರದು ಅದೇ ನಮ್ಮ ಹಳ್ಳಿಗೆ ಹೆಮ್ಮೆಯಾಗುತ್ತದೆ.ಎನ್ನುತ್ತಾರೆ. ಆಗ ಸಿರಿ ಪಾತ್ರ ನಾವು ಪುನಹ ಓದು ಮುಂದುವರಿಸುತ್ತೇನೆ ಎಂದು ಹೇಳಿ ಆ ಪೇಟೆ ಕುಟುಂಬದವರಿಂದ ಕೂಡ ಅಭಿನಂದನೆ ಸ್ವೀಕರಿಸುತ್ತಾಳೆ.

ನಾಟಕದ ಮುಖ್ಯ ಜೀವಾಳ ಇರುವುದು ನಗರ ಮತ್ತು ಹಳ್ಳಿಗಳ ಮಧ್ಯದ ಬದುಕಿನಲ್ಲಿ. ನಿಜವಾದ ಬದುಕು ಸಾಗುವುದು ಹಳ್ಳಿಯಲ್ಲಿ ಹೊರತು ಪೇಟೆಯಲ್ಲಿ ಅಲ್ಲ.

ಹಳ್ಳಿಗಳಲ್ಲಿ ಜಾತೀಯತೆ ಬಡವರನ್ನು ಕಂಡರೆ ಗೇಲಿ ಮಾಡುವುದು ಎಲ್ಲವೂ ಇದೆ ಆದರೆ ಅಲ್ಲಿನ ಪ್ರಾಕೃತಿಕ ಪರಿಸರ ಮನುಷ್ಯರ ಸರಳತೆ ಎಲ್ಲವನ್ನು ಗೊಂಬೆಗಳ ಮುಖಾಂತರ ತೋರಿಸಿ ಮಕ್ಕಳಿಗೆ ಪೇಟೆಯ ಹಿಂಸೆಯ ಕನಸು ಹಳ್ಳಿಯ ಸಾಂತ್ವನದ ಕನಸು ಗಳಿಂದ ನಿರ್ದೇಶಕ ಪೇಟೆಯಲ್ಲಿ ನಾಲ್ಕು ದಿನದ ಬದುಕು ಮಾತ್ರ ಆದರೆ ಹಳ್ಳಿ ಶಾಶ್ವತ ಎಂದು ತಿಳಿಸುತ್ತಾನೆ. ಒಟ್ಟಿನಲ್ಲಿ ಭಾರತದ ಅವಿಭಕ್ತ ಕುಟುಂಬ ಅತ್ಯಂತ ಉತ್ತಮವಾಗಿತ್ತು ಆದರೆ ಈಗ ವಿಭಕ್ತ ಕುಟುಂಬದಲ್ಲಿ ಮಕ್ಕಳಿಗೆ ಅಜ್ಜ ಯಾರು ಅಜ್ಜಿ ಯಾರು ಎಂದು ಕೂಡ ತಿಳಿದಿರುವುದಿಲ್ಲ ಎಂಬುದನ್ನು ಸೂಕ್ತವಾಗಿ ತಿಳಿಸಿ ನಾಟಕವನ್ನು ಮುಗಿಸುತ್ತಾರೆ. ಸುಮಾರು 15 ಜನ ನಾಟಕದಲ್ಲಿ ಪಾತ್ರ ವಹಿಸಿದ್ದು, ಅಷ್ಟೇ ಜನ ರಂಗದ ಹಿಂದೆ ಕೆಲಸ ಮಾಡಿತು ನಾಟಕ ಯಶಸ್ವಿಯಾಗಿ ಮೂಡಿಬರಲು ಕಾರಣವಾಗಿದೆ. ಇಂತಹ ಒಂದು ನಾಟಕವನ್ನು ಶಿವಮೊಗ್ಗಕ್ಕೆ ಕಳಿಸಿ ನಮ್ಮ ಪ್ರೇಕ್ಷಕರಿಗೆ ಗುಣಪಡಿಸಿದ ರಂಗಾಯಣ ಶಿವಮೊಗ್ಗದ ನಿರ್ದೇಶಕರಾದ ಪ್ರಸನ್ನ ಹಾಗೂ ಆಡಳಿತಾಧಿಕಾರಿ ಶೈಲಜಾ ಮೇಡಂ ರವರಿಗೆ ಹೃತ್ಪೂರ್ವಕ ಧನ್ಯವಾದಗಳು

ಸ್ಯಾಮ್ ಪಾತ್ರ ಮಾಡಿದ ನಿತಿನ್ ಸುಳ್ಯ, ಸಾದ್ವಿ ಪಾತ್ರಮಾಡಿದ ಕವಿತೆ ಭಾರ್ಗವ್ ಮತ್ತು ಸೌಮ್ಯ ಪಾತ್ರ ಮಾಡಿದ ರಘುರಾಜ್ ಕುಮಾರ್ ಈರಮ್ಮ ಸಿರಿ ಸೀತೆ ಪಾತ್ರ ಮಾಡಿದ ರಕ್ಷಿತ ಬಹಳ ಕಾಲ ಮನಸ್ಸಿನಲ್ಲಿ ಉಳಿಯುತ್ತಾರೆ.

ಹಲವು ಪಾತ್ರ ಮಾಡಿದ ಕೌಶಿಕ್ ಅಭಿಷೇಕ್ ಅಭಿನಂದನಾರ್ಹರು.ಸಂ ಗೀತ, ಪ್ರಸಾಧನ,ಬೆಳಕು ಪಪೆಟ್ರಿ ವಿಭಾಗ ಅತ್ಯುತ್ತಮ.ಧನ್ಯವಾದಗಳು

Search