Posted on 12-02-2025 |
Share: Facebook | X | Whatsapp | Instagram
ತರಿಕೆರೆ ಪೆ.12 ಯಶಸ್ವಿ ಜೀವನಕ್ಕೆ ಬೇಕಾದದ್ದು ಸಂವಿಧಾನ ಅದು ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ ಕೊಡುತ್ತದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು ಅವರು ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಯಶಸ್ವಿ ಜೀವನ ಕುರಿತು ಮಾತನಾಡುತ್ತಿದ್ದರು.
ಚಿಕ್ಕ ಹುಡುಗ ಹರಿದ ಭಾರತದ ನಕ್ಷೆ ಪುನಃ ತಕ್ಷಣ ಜೋಡಿಸುತ್ತಾನೆ. ಹೇಗೆಂದರೆ ಚಿತ್ರದ ಹಿಂದೆ ಇದ್ದ ಮನುಷ್ಯನ ಚಿತ್ರ.ಮನುಷ್ಯ ಸರಿಯಾದರೆ ದೇಶ ಸರಿಯಾಗುತ್ತದೆ.
ಪ್ರಪಂಚದಲ್ಲಿ ಅತ್ಯಂತ ಕ್ರೂರ ಪ್ರಾಣಿ ಎಂದರೆ ಮನುಷ್ಯ.
ಮನುಷ್ಯ ಹುಟ್ಟುತ್ತಾ ಅಲ್ಪ ಮಾನವನಾಗಿರುತ್ತಾನೆ.ಆತ ಬೆಳೆಯುತ್ತಾ ವಿಶ್ವಮಾನವ ನಾಗಬೇಕು. ಇಂದು ನಮ್ಮ ಮನೆ ದೊಡ್ಡದಾಗಿದೆ ಆದರೆ ಮನಸ್ಸು ಚಿಕ್ಕದಾಗಿದೆ.ಹಾಗಾಗಿ ಮನುಷ್ಯ ಹೇಗಿರಬೇಕು ಎಂದು ಬಸವಣ್ಣನವರು ಹೇಳಿದ್ದಾರೆ.ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ತನ್ನ ಬಣ್ಣಿಸಬೇಡ ಇದಿರಾ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ದೇವರನ್ನು ಒಲಿಸುವ ಪರಿ ಎಂದಿದ್ದಾರೆ.ನಾವು ಬದುಕಿ ಇತರರನ್ನು ಬದುಕಲು ಬಿಡಬೇಕು. ಮರ ಸುತ್ತಿದರೆ ಜಲದಲ್ಲಿ ಸ್ನಾನ ಮಾಡಿದರೆ ಶುದ್ಧರಾಗುವುದಿಲ್ಲ.ಮುಂದೆ ಆ ಮರ ಒಣಗುತ್ತದೆ ಜಲ ಬತ್ತುತ್ತದೆ.
ಮನುಷ್ಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದರು .
ಎಸ್.ಹೆಚ್.ಆದಿಲ್ ಪಾಶಾ ಸ್ವಾಗತಿಸಿ ಎಲ್ಲರನ್ನೂ ವಂದಿಸಿದರು.
ಡಾ.ಕೆ.ಜಿ.ವೆಂಕಟೇಶ್ ಕ್ರಾಂತಿ ಕಿಡಿ ಶಿವಮೊಗ್ಗ