ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ ಬದುಕಿನಲ್ಲಿ ಗುರಿ ಹೊಂದಿರಬೇಕು. ಜನಾಬ್ ಮಹಮ್ಮದ್ ಕುಂಞಿ

Social Program Education

Posted on 12-02-2025 |

Share: Facebook | X | Whatsapp | Instagram


ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ ಬದುಕಿನಲ್ಲಿ ಗುರಿ  ಹೊಂದಿರಬೇಕು. ಜನಾಬ್ ಮಹಮ್ಮದ್ ಕುಂಞಿ

ತರೀಕೆರೆ ಪೆ.12. ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ ಬದುಕಿನಲ್ಲಿ ಗುರಿ ಹೊಂದಿರಬೇಕು ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಜಿ.ಮಹಮ್ಮದ್ ಕುಂಞಿ ಹೇಳಿದರು.ಅವರು ತರಿಕೆರೆಯಲ್ಲಿ ನಡೆದ ಸಾರ್ವಜನಿಕ ಕುರಾನ್ ಪ್ರವಾಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಕುರಾನ್ ಪ್ರಕಾರ ಮನುಷ್ಯ ಈ ಜಗತ್ತಿನ ಅತ್ಯಂತ ಪ್ರಮುಖ ಪ್ರಾಣಿ ಅವನಿಗೆ ಬುದ್ಧಿ ಜ್ಞಾನ ಇದೆ.ಆತನಿಗೆ ಶರೀರ ಮತ್ತು ಆತ್ಮ ಎರಡು ಇದೆ.ಕಾಲು ಶರೀರಕ್ಕೆ ಸಂಬಂದಿಸಿದರೆ  ತಲೆ ಆತ್ಮಕ್ಕೆ ಸಂಬಂಧಿಸಿದ್ದು ಮನುಷ್ಯ ಕೇವಲ ಶರೀರ ಬೆಳೆಸಿ ಕೊಂಡರೆ ಸಾಧ್ಯವಿಲ್ಲ ಆತ ಆತ್ಮ ಜಾಗ್ರತೆ ಹೊಂದಬೇಕು.ದೇಹ ಒಂದು ಪಾತ್ರೆಯಾದರೆ ಪಾತ್ರೆಯ ಒಳಭಾಗದ ಸ್ವಚ್ಚತೆ ಹೆಚ್ಚಾಗಬೇಕು.ಆತ್ಮ ಜಾಗೃತಿ ಆದರೆ ಮನುಷ್ಯ ದೇವರನ್ನು ಹೆಚ್ಚು ಪ್ರೀತಿಸುತ್ತಾನೆ ಆಗ ದೇವರು ಆ ಮನುಷ್ಯನನ್ನು ಹೆಚ್ಚು ಪ್ರೀತಿಸುತ್ತಾನೆ.ಹಾಗಾಗಿ ಆತನ ಆರೋಗ್ಯ ಯಾವಾಗಲೂ ಚೆನ್ನಾಗಿರುತ್ತದೆ.ಧರ್ಮ ಮಾರ್ಗ ಬಿಟ್ಟು ಅನ್ಯ ಮಾರ್ಗ ಹಿಡಿದರೆ ಮನುಷ್ಯ ಮಲವಿಸರ್ಜನೆ ಮಾಡಲು ಕಷ್ಟ ಪಡಬೇಕಾಗುತ್ತದೆ.ಎಷ್ಟೋ ಜನರು ಕೇವಲ ಕಟ್ಟಿದ ಮೂತ್ರ ಸರಿಯಾಗಿ ವಿಸರ್ಜನೆ ಆಗಲು ಲಕ್ಷಾಂತರ ಖರ್ಚು ಮಾಡುತ್ತಾರೆ.

ನಮ್ಮ ಬದುಕು ಸ್ವಚ್ಚವಾಗಿರಬೇಕಾದರೆ ಎಂದು ನಮ್ಮ ಜನರ ಮೇಲೆ ಕೋಪಗೊಳ್ಳಬಾರದು.ದ್ವೇಷ ಭಾಷಣ ಮಾಡಿದರೆ ಅದನ್ನು ದೇವರು ಒಪ್ಪುವುದಿಲ್ಲ ಮುಗುಳು ನಗೆ ವಿಶ್ವಾಸದ ಮಾತು ಜನರಿಗೆ ಅಗತ್ಯ ಅದೇಧರ್ಮವಾಗಿದೆ. ಮರಣದೊಂದಿಗೆ ನಮ್ಮ ಬದುಕು ಕೊನೆಗೊಳ್ಳುವುದು ಇಲ್ಲ,

ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಭೂಮಿ ಎಂದರೆ ಸ್ಮಶಾನ ಅಲ್ಲಿ ಅನೇಕ ಅಮೂಲ್ಯ ಕನಸುಗಳು ಹುಗಿಯಲ್ಪಟ್ಟಿವೆ.ಅವರೆಲ್ಲ ಕನಸು ಕಾಣುತ್ತಾ ಅಲ್ಲೇ ಇದ್ದಾರೆ.ಪುನ ನಾವು ಬಂದು ಉತ್ತಮ ಬದುಕು ನಡೆಸುತ್ತೇವೆ ಎಂಬ ಬಯಕೆ ಇಟ್ಟು ಕೊಂಡಿದ್ದಾರೆ ಹಾಗಾಗಿ ಬದುಕಿನ ಪ್ರತಿ ಕ್ಷಣಗಳು ಅಮೂಲ್ಯ ವಾದುದು. ನಾವು ಒಂದು ವರ್ಷ ದೊಡ್ಡವರಾದಂತೆ ನಮ್ಮ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆ ಆದಂತೆ, ಹಾಗಾಗಿ ಆಟಕ್ಕೆ ನಿಯಮವಿದ್ದಂತೆ ಬದುಕಿಗೂ ಇರುವ ಮೌಲ್ಯಗಳೇ ನಿಯಮ ಅದನ್ನು ಅನುಸರಿಸಿ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದರು.

ವೇದಿಕೆಯಲ್ಲಿ ಶಾಸಕ ಡಿ.ಎಸ್.ಸುರೇಶ್ ಪುರಸಭಾ ಅಧ್ಯಕ್ಷರಾದ ವಸಂತಕುಮಾರ್ ಉಪ ವಿಭಾಗಾಧಿಕಾರಿ ಕಾಂತರಾಜ್ ಕೆ.ಜೆ. ಉಪಸ್ಥಿತರಿದ್ದರು. ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.

ವರದಿ ಡಾ.ಕೆ.ಜಿ.ವೆಂಕಟೇಶ್ ಕ್ರಾಂತಿ ಕಿಡಿ ಶಿವಮೊಗ್ಗ.

Search