Posted on 07-02-2025 |
Share: Facebook | X | Whatsapp | Instagram
ವಿದ್ಯುನ್ಮಾನ ವಾಹಿನಿ ಕನ್ನಡದ ಹತ್ಯೆ
ಮಾಧ್ಯಮದಲ್ಲಿ ಕನ್ನಡದ ಜೊತೆ ಸತ್ಯದ ಹತ್ಯೆ ನಡೆಯುತ್ತಿದೆ.ಇಂದು ವಿದ್ಯುನ್ಮಾನ ಮಾಧ್ಯಮ ಗಳು ಕಿರಿಯ ವಯಸ್ಸಿನ ಚೆಂದ ಇರುವ ವರದಿಗಾರರನ್ನು ನೇಮಿಸುತ್ತದೆ.ಆದರೆ ಅವರಿಗೆ ತಿಳುವಳಿಕೆ ಕಡಿಮೆ ಇರುತ್ತದೆ.ಮತ್ತು ತಕ್ಷಣ ಬ್ರೇಕಿಂಗ್ ನ್ಯೂಸ್ ಬೇಕಾಗುತ್ತದೆ.ಹಾಗಾಗಿ ಗಂಭೀರಾ ವರದಿ ಇರುವುದಿಲ್ಲ.
ಮಾಧ್ಯಮಗಳು ಮಾರುಕಟ್ಟೆ ಅವಲಂಬಿಸಿರುತ್ತದೆ ಹಾಗಾಗಿ ತಚಚ ಸುದ್ದಿಗಳ ಮದ್ಯೆಜಾಹೀರಾತು ಹಾಕುವುದಕ್ಕಾಗಿ ಸುದ್ದಿ ಬಿತ್ತರಿಸುವ ಕೆಲಸ ಮಾಡಲಾಗುತ್ತಿದೆ.ಮತ್ತು ನಮ್ಮಲ್ಲೇ ಪ್ರಥಮ, ಬ್ರೇಕಿಂಗ್ ನ್ಯೂಸ್ ಹೇಳಲಾಗುತ್ತದೆ.ಮುಖ್ಯಮಂತ್ರಿಗೆ ರಿಲೀಫ್ ಯಡಿಯೂರಪ್ಪನಿಗೆ ಡ್ರಿಲ್, ಆರಗನಿಗೆ ಕೌಂಟರ್ ಕೊಟ್ಟ ಕಿಮ್ಮನೆ ಈ ರೀತಿ ಕಂಗ್ಲೀಷ್ ಪದ ಬಳಸಿ ವ್ಯಕ್ತಿಗಳ ಹೆಸರಿನ ಬದಲು ಊರಿನ ಹೆಸರು ಹೇಳಲಾಗುತ್ತದೆ.ತರಕಾರಿಗಳ ಎಲ್ಲಾ ಹೆಸರು ಇಂಗ್ಲಿಷ್ ನಲ್ಲೇ ಹೇಳಲಾಗುತ್ತದೆ.ಒಟ್ಟು ನಮ್ಮ ವಾಹಿನಿಗಳು ಸುಳ್ಳುಗಳನ್ನು ಕಂಗ್ಲಿಷ್ ಗಳನ್ನು ಹೇಳಿ ಜೀವನ ನಡೆಸುತ್ತದೆ.
ಫೀರ್ ಭಾಷಾ ಸಾಹಿತಿಗಳು ಹೊಸಪೇಟೆ
ಪ್ರಭುತ್ವ -ಸಾಂಸ್ಕೃತಿಕ ಲಜ್ಜೆ
ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡಿದ ಮಾಧ್ಯಮಗಳು ಇಂದು ಲಜ್ಜೆಗೆಟ್ಟು ಹೋಗಿದೆ.ಪತ್ರಿಕಾರಂಗವು ಬಂಡವಾಳ ಹೂಡುವ ಮೂಲಕ ಲಾಭ ಗಳಿಸಲು ಪ್ರಯತ್ನಿಸಿ ಆಳುವ ವರ್ಗದ ಹಿತಾಸಕ್ತಿಗೆ ಮಣಿಯುತ್ತಿದೆ.ನಾಗಾ ಸಾಧುಗಳು ನಗ್ನರಾಗಿ ಇರುವುದು ನೀರಿನಲ್ಲಿ ಮುಳುಗುವುದು ಸಹಜ, ಅದು ಅವರ ಧಾರ್ಮಿಕ ಆಚರಣೆ, ಆದರೆ ರಾಜಕೀಯ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗುವ ನಾಟಕವಾಡುವುದು ಸಾಂಸ್ಕೃತಿಕ ಲಜ್ಜೆ ತನವಾಗಿದೆ.ಇದನ್ನು ಹೋಗಲಾಡಿಸಬೇಕಾದರೆ ಪ್ರಜೆಗಳು ಎಚ್ಚರಗೊಳ್ಳಬೇಕು ಎಂದರು.
ಡಾ.ಬಿ.ಎಲ್.ರಾಜು ಸಹ ಪ್ರಾಧ್ಯಾಪಕರು
ಓದು ಯುವಜನತೆ
ಇಂದು 25 ವರ್ಷದ ಒಳಗಿನ ಯುವಕರುಗಳು ರೀಲ್ ಮತ್ತು ರಿಯಾಲಿಟಿ ಶೋನಲ್ಲಿ ಮುಳುಗಿದ್ದಾರೆ ಸಾಹಿತ್ಯ ಸಂವಾದಗಳಲ್ಲಿ ಕೇವಲ ಮಧ್ಯವಯಸ್ಕರು ವೃದ್ಧರು ಪಾಲ್ಗೊಂಡಿದ್ದಾರೆ.ಇಂದು ಶೂದ್ರ ಸಮುದಾಯದವರು ತಮಗೆ ಅನ್ನ ಭೂಮಿ ಆಸ್ತಿ ನೀಡಿದ ಸಂವಿಧಾನಕ್ಕೆ ಅಪಾಯ ಬಂದರೂ ಕೂಡ ಸುಮ್ಮನಿದ್ದಾರೆ.ಕಾಲೇಜು ವಿದ್ಯಾರ್ಥಿಗಳು ತಮ್ಮನ್ನು ಪಾಸುಮಾಡಿ ಎನ್ನುವ ಬದಲು ಪಶು ಮಾಡಿ ಎನ್ನುತ್ತಿದ್ದಾರೆ.ಅವರಿಗೆ ವಾಸ್ತವ ವಿಷಯ ಗೊತ್ತಿರುವುದಿಲ್ಲ.ಇಂದು ಯಂತ್ರಗಳ ಲೋಕದಲ್ಲಿ ಕನ್ನಡದ ಭಾಷೆ ಸತ್ತು ಹೋಗಿದೆ ಎಂದರು.
ಕಿಮ್ಮನೆ ರತ್ನಾಕರ ಮಾಜಿ ಸಚಿವರು ತೀರ್ಥಹಳ್ಳಿ
ಮಾಧ್ಯಮಗಳು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು.ಅದರ ಬದಲು ಸತ್ಯ ಮತ್ತು ಕನ್ನಡ ಎರಡನ್ನೂ ಹತ್ಯೆ ಮಾಡುತ್ತಿದೆ.
ನಾನು ನನ್ನ ತಾಯಿಯಷ್ಟು ಒಳ್ಳೆಯವನಲ್ಲ ಆಕೆ ಮಕ್ಕಳನ್ನು ಕೆಲಸಗಾರರನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಳು.ಆದರೆ ನಾವು ವಿದ್ಯಾವಂತರಾಗಿದ್ದರು
ನಮ್ಮ ಈಗಿನ ಓದು ಮಾಧ್ಯಮಗಳು ನಮ್ಮನ್ನು ಅಷ್ಟು ಒಳ್ಳೆಯವರನ್ನಾಗಿ ಮಾಡಿಲ್ಲ. ಮುಂದಿನ ನಮ್ಮ ಮಕ್ಕಳಿಗೆ ಒಳ್ಳೆಯ ಬುದ್ದಿ ಬರಲು ಉತ್ತಮವಾದ ಮಾಧ್ಯಮ ಸುದ್ದಿಗಳು ಬರಬೇಕು.ಎಂದರು.