ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸೂರ್ಯಾರಾಧನೆ ಮತ್ತು ಯೋಗ ಶಿಕ್ಷಣ ಇತ್ತು. ನವೀನ್ ಸುಬ್ರಹ್ಮಣ್ಯ

Social Program Education

Posted on 05-02-2025 |

Share: Facebook | X | Whatsapp | Instagram


ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸೂರ್ಯಾರಾಧನೆ ಮತ್ತು ಯೋಗ ಶಿಕ್ಷಣ ಇತ್ತು.   ನವೀನ್ ಸುಬ್ರಹ್ಮಣ್ಯ

ಶಿವಮೊಗ್ಗ ಪೆ.6  ಪತಂಜಲಿ ಅಷ್ಟಾಂಗ ಯೋಗದಲ್ಲಿ ಸೂರ್ಯ ನಮಸ್ಕಾರ ಸೇರಿಸಿ ಯೋಗ ಶಿಕ್ಷಣ ಹೇಳಿಕೊಟ್ಟರು.

ಇಂದು ಶಿಕ್ಷಣ ಕೇವಲ ಪಂಚೇಂದ್ರಿಯಗಳ ಸುಖಕ್ಕೆ ಮಾತ್ರ ಇದೆ.ಆದರೆ ಪ್ರಾಚೀನ ಭಾರತದ ಶಿಕ್ಷಣ ಮನಸ್ಸಿಗೆ ಸಂಬಂದಿಸಿದ್ದು ಪತಂಜಲಿ ಮತ್ತು ಸಾವಿರಾರು ಮುನಿಗಳು ಸಂಪೂರ್ಣ ಜಗತ್ತಿಗೆ ಅನುಕೂಲವಾಗುವಂತ ಶಿಕ್ಷಣ ನೀಡಿದರು.ಕಚ್ಚುವ ಅಭ್ಯಾಸ ಇರುವ ಚೇಳು ತನ್ನ ಗುಣ ಬಿಡದಿದ್ದಾಗ ಮನುಷ್ಯ ಇತರರಿಗೆ ಉಪಯೋಗವಾಗುವ ತನ್ನ ಗುಣವನ್ನು ಬಿಡಬಾರದು ಎನ್ನುವುದು ನಮ್ಮ ಹಿರಿಯ ಋಷಿಮುನಿಗಳು ಅನುಸರಿಸಿಕೊಂಡು ಬಂದಿರುವ ಮಾರ್ಗವಾಗಿದೆ.

ಜೂನ್ 21 ಸಂಪೂರ್ಣ ಜಗತ್ತು ವಿಶ್ವ ಯೋಗ ದಿನಾಚರಣೆ ಆಚರಿಸುತ್ತಿದೆ.ಹೀಗಾಗಿ ವಿಶ್ವ ಇಂದು ಭಾರತದ ಕಡೆ ಗಮನ ಕೊಡುತ್ತಿದೆ.ಭಾರತದ ನಾಗರೀಕತೆ ಮತ್ತು ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ ಮಾತನಾಡಿ ಸೂರ್ಯನ ಕಿರಣ ಬೀಳದಿದ್ದ ಕಡೆ ಅನೇಕ ಕಾಯಿಲೆ ಬರುತ್ತದೆ.ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.ನಮ್ಮ ಮನಸ್ಸು ಎಲ್ಲಾ ಸಮಸ್ಯೆ ಗಳಿಗೆ ಮೂಲ ಕಾರಣ ಹಾಗಾಗಿ ಮನಸ್ಸು ಸರಿಯಾಗಿರಲು ಯೋಗ ಶಿಕ್ಷಣ ಅವಶ್ಯಕ ಎಂದರು.ನಾವು ತಿನ್ನುವ ಆಹಾರಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.ಹಾಗಾಗಿ ನೈಸರ್ಗಿಕ ಆಹಾರ ಮತ್ತು ನೀರು ಹೆಚ್ಚು ಕುಡಿಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ.ಸಂಜಯ್ ಮಾತನಾಡಿ ಇಂದು 800ಕ್ಕೂ ಹೆಚ್ಚು ಜನ ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.23,000 ಕ್ಕು ಹೆಚ್ಚು ಸೂರ್ಯನಮಸ್ಕಾರ 

ಮಾಡಲಾಯಿತು.ತಿಂಗಳಿನಿಂದಲು ಸೂರ್ಯ ನಮಸ್ಕಾರ ತರಬೇತಿ ಪಡೆದು ಎಲ್ಲರೂ 108 ಕ್ಕೂ ಹೆಚ್ಚು ಸೂರ್ಯನಮಸ್ಕಾರ ಮಾಡಿದ್ದು ಯೋಗ ಅಭ್ಯಾಸ ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು 

ಪ್ರಾರ್ಥನೆಯನ್ನು ಶ್ರೀನಿವಾಸ ಆಚಾರ್ಯ ಸ್ವಾಗತವನ್ನು ಡಾ.ಕೆ.ಜಿ.ವೆಂಕಟೇಶ್ ಮಾಡಿದರು  ವಂದನಾರ್ಪಣೆಯನ್ನು ಕಾಂಚನಾ  ಎಲ್.ಮಾಡಿದರು.ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಡಾ.ತ್ರಿವೇಣಿ ಕಲಗಾರೆ ಮಾಡಿದರು.

Search