ಶಿವಮೊಗ್ಗ ಜಿಲ್ಲಾ19ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಅವರ ವಿದ್ಯಾರ್ಥಿಗಳಿಂದ ಸ್ವಾಗತ

Culture Literature

Posted on 05-02-2025 |

Share: Facebook | X | Whatsapp | Instagram


ಶಿವಮೊಗ್ಗ ಜಿಲ್ಲಾ19ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಅವರ ವಿದ್ಯಾರ್ಥಿಗಳಿಂದ ಸ್ವಾಗತ

ಶಿವಮೊಗ್ಗ  ಪೆ.4   ಜಿಲ್ಲೆಯ 19ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಕೆ. ರಮೇಶ್ ರವರನ್ನ ಅವರ ವಿದ್ಯಾರ್ಥಿಗಳು ಶಿವಮೊಗ್ಗದಿಂದ ತೀರ್ಥಹಳ್ಳಿಯ ಅವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಕನ್ನಡ ಸಾಹಿತ್ಯ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

     ಬಹುಮುಖಿ ಸಂಸ್ಥೆಯ ಡಾ. ನಾಗಭೂಷಣ್, ಸಹ್ಯಾದ್ರಿ ರಂಗತರಂಗ ಸಂಸ್ಥೆಯ ಕಾಂತೇಶ್ ಕದರಮಂಡಲಗಿ, ಸಮುದಾಯ ಶಿವಮೊಗ್ಗದ ಡಾ. ಕೆ.ಜಿ. ವೆಂಕಟೇಶ್ ಹಾಗೂ ತುಂಗಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿ ಸುಬ್ರಹ್ಮಣ್ಯ ತೀರ್ಥಹಳ್ಳಿಯವರು ಅವರನ್ನು ಭೇಟಿಯಾಗಿ ಶಾಲು ಹೊದಿಸಿ ಸನ್ಮಾನಿಸಿ ಫೆಬ್ರವರಿ 6 ಮತ್ತು 7ರಂದು ನಡೆಯುವ ಸಮ್ಮೇಳನಕ್ಕೆ  ಶುಭ ಕೋರಿದರು

Search