ವಸುದೇವ ಭೂಪಾಳಂ ದತ್ತಿ ನಿಧಿ ಕಾರ್ಯಕ್ರಮ

ಹೊಸನಗರ ಲೋಕಲ್

Posted on 30-01-2025 |

Share: Facebook | X | Whatsapp | Instagram


ವಸುದೇವ ಭೂಪಾಳಂ ದತ್ತಿ ನಿಧಿ ಕಾರ್ಯಕ್ರಮ

ಹೊಸನಗರ : ಕಸಾಪ ಹೊಸನಗರ ತಾಲೂಕು ಮತ್ತು ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ಹೊಸನಗರ  ಸಂಯುಕ್ತ ಆಶ್ರಯದಲ್ಲಿ ನಡೆದ ವಸುದೇವ ಭೂಪಾಳಂ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾಕ್ಟರ್ ಲಿಂಗರಾಜ್ ಅವರು ತಮ್ಮ ಸಾಹಿತ್ಯಾಸಕ್ತಿಗೂ ವೃತ್ತಿಗೂ ಇರುವ ಕಂದರವನ್ನು ನೆನಪಿಸಿಕೊಂಡು ತಮ್ಮ ಬಾಲ್ಯದ  ಮತ್ತು ಕಾಲೇಜುಗಳಲ್ಲಿಯ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿ ತಮ್ಮ ಆ ಕಾಲದ ಕವಿತೆಗಳನ್ನು ಓದಿ ಜನ ಮೆಚ್ಚುಗೆ ಪಡೆದರು 

ಬಿ ಜಿ ನಾಗರಾಜ್ ಅವರು ತಮ್ಮ ಭಾಷಣದಲ್ಲಿ ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಹೋರಾಟ ನಡೆಯುತ್ತಿದ್ದ ಕಾಲ ತಮ್ಮ ಬಾಲ್ಯದ ದಿನವಾದರೆ ಇಂದು ಅದು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಹಳ್ಳಿಯ ಮನೆಯ ಬಾಗಿಲು ತಟ್ಟಿದೆ ತಾರತಮ್ಯವಿಲ್ಲದೆ ಬದುಕಿದ್ದ ನಾವು ಎಲ್ಲಾ ಜನಾಂಗದವರು ಅಂದು ಒಟ್ಟಿಗೆ ಆಡಿ ಕೂಡಿ ಬೆಳೆದವರು 

ಆದರೆ ಇಂದು ಜಾತಿ ಮತ ಕೊಂದು ಶಾಲೆಗಳು ಪ್ರಾರಂಭವಾಗಿ ಸಮಾಜ ಒಡೆದು ಹೋಗಿದೆ ಹಾಗೂ ಇಂಗ್ಲಿಷ್ ವ್ಯಾಮೋಹ ದಿಂದ ಭಾಷೆ ನಶಿಸಿಹೋಗಿದೆ ಎಂದು ವಿಷಾದಿಸಿದರು

ಮುಖ್ಯ ಉಪನ್ಯಾಸಕ ಡಾಕ್ಟರ್ ಮಾರ್ಷಲ್ ಶರಾಂ ವಸುದೇವ ಭೂಪಾಳಂ  ಅವರ ಬದುಕು ಬರಹ ಅವರು ನೀಡಿದ ದತ್ತಿ  ಯನ್ನು ಪಡೆಯಲು ಪರಿಶ್ರಮ ಹಾಕಿದ ಸಾಹಿತ್ಯ ಪರಿಷತ್ತಿನ ಆಗಿನ ಪದಾಧಿಕಾರಿಗಳ ವಿಷಯವನ್ನು ಮೇಲು ಹಾಕಿ ಅವರ ಆಳವಾದ ಅಧ್ಯಯನ ಪುಸ್ತಕಗಳ ವಿವರ ಮತ್ತು ವಸುದೇವ ಭೂಪಾಳಂ ಅವರ ಚಿಂತನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು 

ಶ್ರೀ ಸುಧಾಕರ್ ಮಾತನಾಡಿ ಸಂಘಟನೆಗಳು ಈ ಕಾಲದಲ್ಲಿ ಒಂದು ಸವಾಲಾಗಿದೆ ಟಿವಿ ಮೊಬೈಲ್ ಮಾಧ್ಯಮಗಳಲ್ಲಿ ಬದುಕು ಕಳೆದು ಹೋಗಿದೆ ಎಂದು ವಿವರಿಸಿದ್ದರು 

ವಾಲಿಬಾಲ್ ಪ್ಲೇಯರ್ಸ್ ಗಳು ತಮ್ಮ ಇಷ್ಟದ ಕವಿತೆಗಳನ್ನು ಓದಿ ಖುಷಿಪಟ್ಟರು 

ನಿಕಟ ಪೂರ್ವ ಕಸಾಪ ಅಧ್ಯಕ್ಷ ರಾದ ಇಲಿಯಾಸ್ ತಮ್ಮ ಮನದಾಳದ ಮಾತುಗಳನ್ನಾಡಿ ಎರಡು ಕವಿತೆಗಳನ್ನು ಸಹ ಓದಿದರು

ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಗಣೇಶ್ ಮೂರ್ತಿ ವೃತ್ತಿಯಲ್ಲಿ ಕಳೆದು ಹೋಗುತ್ತಿರುವ ಬದುಕಿನಲ್ಲಿ ಸಾಹಿತ್ಯದ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ಹಾಸ್ಯಮಯವಾಗಿ ವಿವರಿಸಿದರು 

ಕಾರ್ಯಕ್ರಮದಲ್ಲಿ ಸಾಧನೆಗೈದ ಮಕ್ಕಳಿಗೆ ಸನ್ಮಾನಿಸಲಾಯಿತು 

ಜಿಮ್ಮಿ ಜಾರ್ಜ್ ವಾಲಿಬಾಲ್ ಸದಸ್ಯರು ಸ್ವಾಗತಿಸಿ ಶ್ರೀ ನವೀನ್ ವಂದಿಸಿ ಅಶ್ವಿನಿ ಪಂಡಿತ್ ನಿರೂಪಿಸಿದರು

Search