ನಿಮ್ಮ ಭವಿಷ್ಯಕ್ಕಾಗಿ ನೀವು ಕಲಿಯಬೇಕು- ಡಾ. ಸಂಧ್ಯಾ ಕಾವೇರಿ

Social Program Education

Posted on 29-01-2025 |

Share: Facebook | X | Whatsapp | Instagram


ನಿಮ್ಮ ಭವಿಷ್ಯಕ್ಕಾಗಿ ನೀವು ಕಲಿಯಬೇಕು- ಡಾ. ಸಂಧ್ಯಾ ಕಾವೇರಿ

ಶಿವಮೊಗ್ಗ - ಶಿಕ್ಷಣ ಎಂಬುದು ಜೀವನದಲ್ಲಿ ಸಿಗುವ ಮಹತ್ತರ ಅವಕಾಶ ಅದನ್ನು ಕಳೆದುಕೊಳ್ಳಬಾರದು. ಹಾಗೂ ನಾವು ಓದಿದ ಶಿಕ್ಷಣ ಸಂಸ್ಥೆ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಮರೆಯಬಾರದು ಎಂದು ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯರಾದ ಡಾ ಸಂಧ್ಯಾಕಾವೇರಿ ಹೇಳಿದ್ದಾರೆ.

ಅವರು ಇಂದು ನಗರದ ಬಸವೇಶ್ವರ ಅಕಾಡೆಮಿ ಆಫ್ ಎಜುಕೇಶನ್ ಶಿವಮೊಗ್ಗ ಇದರ ಬಸವೇಶ್ವರ ಪದವಿಪೂರ್ವ ಕಾಲೇಜಿನ 2024 -25 ನೇ ಸಾಲಿನ ಸಾಂಸ್ಕೃತಿಕ ವೇದಿಕೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪೋಷಕರ ಕೆಟ್ಟ ಚಟಗಳಿಂದ ಮನೆಯಲ್ಲಿನ ಬಡತನದಿಂದ ಆರ್ಥಿಕ ಸಮಸ್ಯೆಗಳಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮನೆ ಕೆಲಸಕ್ಕೆ ಸೇರಿ ದೌರ್ಜನ್ಯಕ್ಕೆ ಒಳಗಾದವರಿದ್ದಾರೆ. ಅನೇಕ ಮಕ್ಕಳಿಗೆ ಸಮಾಲೋಚನೆಯ ಅವಶ್ಯಕತೆ ಇರುತ್ತದೆ. ನಿಮಗಾಗಿ ನಿಮ್ಮ ಭವಿಷ್ಯಕ್ಕಾಗಿ ನೀವು ಕಲಿಯಲೇಬೇಕು. ಮನೆಯವರ ಒತ್ತಾಯಕ್ಕಾಗಿ ಅಥವಾ ಅಂಕ ಪಡೆಯಬೇಕೆಂಬ ಕಾರಣಕ್ಕೆ ಶಿಕ್ಷಣ ಮಾಡದೆ ತನ್ನ ಮುಂದಿನ ಭವಿಷ್ಯಕ್ಕಾಗಿ ದೇಶದ ಉತ್ತಮ ಪ್ರಜೆಯಾಗಲು ಶಿಕ್ಷಣ ಅತಿ ಅವಶ್ಯಕ ಎಂದರು. 

ಅನೇಕ ವಿದ್ಯಾರ್ಥಿಗಳಲ್ಲಿ ಕೆಲವೊಂದು ಕೊರತೆ ಇರುತ್ತದೆ. ಮಾನಸಿಕ ಸಮಸ್ಯೆಯ ಅರಿವು ಮೂಡಿಸುವುದಕ್ಕೋಸ್ಕರನೇ ಡಾ ಅಶೋಕ್ ಪೈ ಅವರು ವಿವಿಧ ರೀತಿಯ ಅಭಿಯಾನ ದ ಮೂಲಕ ಹರಿವು ಮೂಡಿಸುವ ಕಾರ್ಯ ಮಾಡಿದ್ದರು . ಹಣ ಮಾಡಲೆಂದೆ ಶಿಕ್ಷಣ ಸಂಸ್ಥೆಗಳು ಬಹಳ ಇದೆ. ಆದರೆ ಬಸವೇಶ್ವರ ಅಕಾಡೆಮಿ ಆಫ್ ಎಜುಕೇಶನ್ ಶಿವಮೊಗ್ಗ ಈ ಸಂಸ್ಥೆ ಕಳೆದ 60 ವರ್ಷಗಳಿಂದ ಹಿರಿಯರ ತ್ಯಾಗದಿಂದಾಗಿ ಎಲ್ಲಾ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಚ್ ಎಸ್ ಶಂಕರ್. ಗೌರವಾಧ್ಯಕ್ಷರಾದ ಕೆ ಸಿ ನಾಗರಾಜ್. ಕಾರ್ಯದರ್ಶಿ ಎಸ್ ಪಿ ಜಗನ್ನಾಥ್. ಪ್ರಾಂಶುಪಾಲರಾದ ಕೆ.ಎಚ್. ರಾಜು. ಉಪನ್ಯಾಸಕರಾದ ಅಂಬಿಕಾ. ಪ್ರತಿಭಾ. ಲತಾ ಜಿ. ಮೀನಾಕ್ಷಿ. ಕೆ. ಜಿ. ಮತ್ತಿತರರಿದ್ದರು

Search
Recent News