Posted on 25-01-2025 |
Share: Facebook | X | Whatsapp | Instagram
ಶಿವಮೊಗ್ಗ ಜ.25. ರಾಜಕಾರಣಿಗಳಿಗೆ ವಿವೇಕಯುತ ಶಿಕ್ಷಣ ಅಗತ್ಯ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು . ಅವರು ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ತಮ್ಮ ಬಹುತ್ವ ಭಾರತ ಪುಸ್ತಕವನ್ನು ಕುರಿತು ನಡೆದ ಚರ್ಚೆಯಲ್ಲಿ ಮಾತನಾಡುತ್ತಿದ್ದರು.
ಭಾರತದ ಜನಸಾಮಾನ್ಯರಲ್ಲಿ ಯಾವಭೇದವು ಇಲ್ಲ ಆದರೆ ಅವರನ್ನು ಆಗಾಗ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡು ಸಮಾಜದ ಐಕ್ಯತೆ ಹಾಳು ಮಾಡುತ್ತಿದ್ದಾರೆ.ಆದರೆ ಭಾರತ ಬಹುತ್ವದ ದೇಶ ಇಲ್ಲಿ ಯಾವುದೇ ಜನಾಂಗದ ಮಧ್ಯೆ ದ್ವೇಷವಿಲ್ಲ ಆದರೆ ಅವರನ್ನು
ಜನಾಂಗದ ಕಾರಣಕ್ಕೆ ಧರ್ಮದ ಕಾರಣಕ್ಕೆ ಒಡೆಯಲಾಗುತ್ತದೆ.ನಮಗೆ ಬೇಕಾಗಿರುವುದು ಯೂನಿಪಿಕೇಶನ್ ಹೊರತು ಯೂನಿಫಾರಂ ಅಲ್ಲ. ಬಹುತ್ವ ಇಂದಿಗೂ ಕರ್ನಾಟಕದಲ್ಲಿ ಸಂಪೂರ್ಣವಾಗಿ ಇಲ್ಲ.ಇಂದಿಗೂ ದಲಿತರಿಗೆ ಕೆಲವು ಸ್ಥಳಗಳಲ್ಲಿ ನಿಷೇಧ ಮುಂದುವರೆದಿದೆ. ಮುಸ್ಲಿಮರಲ್ಲಿ ಸಾಕಷ್ಟು ಜಾತಿಯತೆ ಇದ್ದು ಅಲ್ಲೂ ಕೂಡ ಉನ್ನತ ಜಾತಿಯವರು ಕೆಳಜಾತಿಯ ಮುಸ್ಲೀಮರನ್ನು ಕೀಳಾಗಿ ಕಾಣುತ್ತಾರೆ.
ಈ ಸಮಸ್ಯೆ ಹೋಗಬೇಕು ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದಾಗ ಸಾಮಾನ್ಯ ಜನರು ತಾವೆಲ್ಲ ಒಂದೇ ಎಂದು ಭಾವಿಸಬೇಕು ಹಾಗೂ ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ನಂತರ ನಡೆದ ಚರ್ಚೆಯಲ್ಲಿ ಡಾಕ್ಟರ್ ವಿನಯ ಡಾ. ಕೆ. ನಾಗಭೂಷಣ್ ಡಾ. ಸಾಸಿವೆಹಳ್ಳಿ ಸತೀಶ್ ಡಾ. ಕೆ.ಜಿ. ವೆಂಕಟೇಶ್ ಡಾ. ಸಂಧ್ಯಾ ಕಾವೇರಿ ಪ್ರೊಫೆಸರ್ ಮಂಜುನಾಥ್ ನಾಗರಾಜರಾವ್ ಡಾ. ಕುಂಶಿ ಉಮೇಶ್ ಡಾ. ಸರ್ಜಾ ಶಂಕರ್ ಹರಳಿಮಠ ಮತ್ತಿತರ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
.