ಶಿಕಾರಿಪುರದಲ್ಲಿ ಅದ್ದೂರಿಯ ಮಾರಿ ಜಾತ್ರೆ ಪ್ರಾರಂಭ

Shikaripura Local

Posted on 21-01-2025 |

Share: Facebook | X | Whatsapp | Instagram


ಶಿಕಾರಿಪುರದಲ್ಲಿ ಅದ್ದೂರಿಯ ಮಾರಿ ಜಾತ್ರೆ ಪ್ರಾರಂಭ

ಶಿಕಾರಿಪುರ.   ಜನವರಿ 21 ರ ಮಂಗಳವಾರದಿಂದ  ಜನವರಿ 28 ರ ಮಂಗಳವಾರದವರೆಗೆ ಎಂಟು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಮಾರಿ ಜಾತ್ರೆ ಇಂದು ಪ್ರಾರಂಭವಾಯಿತು. ಬೆಳಿಗ್ಗೆ 6:ಗಂಟೆಗೆ ಮೂಲಸ್ಥಾನ ಹಳಿಯೂರು ತೇರು ಬೀದಿ ಗದ್ದುಗೆಯಲ್ಲಿ ಪೂಜಾ ಪ್ರಾರಂಭ, ನಂತರ ಕಾನೂರು ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆ 7ರಿಂದ 8- 15 ರವರೆಗೆ ಅಭಿಷೇಕ ಹಾಗೂ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಮಹಾಭಿಷೇಕ ಕುಂಭಾಭಿಷೇಕ ಪಂಚಾಮೃತ ಅಭಿಷೇಕ ಮತ್ತು ಮಹಿಳೆಯರಿಂದ ಅಮ್ಮನವರಿಗೆ ಉಡಿತುಂಬುವ ಕಾರ್ಯಕ್ರಮ ಸಂಜೆ 4- 54 ರಿಂದ ರಾತ್ರಿ 3-45 ರವರೆಗೆ ನಗರದ ಪ್ರಮುಖ ರಾಜಭೀದಿಗಳಲ್ಲಿ ಡಿಜೆ ಹಾಗೂ ವಾದ್ಯಗೋಷ್ಠಿಗಳೊಂದಿಗೆ ಅಮ್ಮನವರ ನಗರ ಪ್ರದಕ್ಷಿಣೆ ನಡೆಯುತ್ತದೆ. ನಂತರ ಖಾದರ್ ಖಾನ್ ಶೀಕ್ಲಾಗಾರ ಮದ್ದೂರಿ ಇವರಿಂದ ಬಾರಿ ಸಿಡಿಮದ್ದು ಪ್ರದರ್ಶನ ಇದ್ದು 22ನೇ ತಾರೀಕು ಬುಧವಾರ ಬೆಳಿಗ್ಗೆ ಹುಲುಸು ಬೀರುವ ಕಾರ್ಯಕ್ರಮ ಇದೆ. 

      ಜಾತ್ರಾ ಸಮಿತಿಯ ಅಧ್ಯಕ್ಷರಾದ ಗೋಣಿ ಪ್ರಕಾಶ್ ಉಪಾಧ್ಯಕ್ಷರಾದ ಪರಮೇಶ್ವರಪ್ಪ ಗೂಳ್ಯಪ್ಪನವರು ಪ್ರಧಾನ ಕಾರ್ಯದರ್ಶಿ ಹೊಲಗಾವಲು ಸಣ್ಣ ಚಿಕ್ಕಣ್ಣನವರು ಖಜಾಂಚಿ ಪಾರಿವಾಳದ ಶಿವಶಂಕರಪ್ಪ ಮತ್ತು ಎಲ್ಲ ಸದಸ್ಯರು ಈ ಕಾರ್ಯಕ್ರಮವನ್ನು ಬಹಳ ಆಚ್ಚುಕಟ್ಟುತನದಿಂದ ಪ್ರಾರಂಭಿಸಿದರು. 

    ಜಾತ್ರೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದು 21 ರ ಮಂಗಳವಾರದಿಂದ 25ರ ಶನಿವಾರದ ವರೆಗೆ ಪ್ರತಿದಿನ ಸಂಜೆ 7- 10 ರಿಂದ, ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. 21 ರ ಬೆಳಿಗ್ಗೆ 10 ಗಂಟೆಗೆ ದೈವಜ್ಞ ಭಜನಾ ಮಂಡಳಿ ತೊಗರ್ಸಿ ಇವರಿಂದ ಭಜನೆ ಕಾರ್ಯಕ್ರಮ ಸಂಜೆ 4-30 ರಿಂದ ದೀಪಿಕಾ ಶ್ರೀಕಾಂತ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ದಿನಾಂಕ 23 ರ ಗುರುವಾರ ಸಂಜೆ 7-10 ರಿಂದ ಜೀ ಕನ್ನಡ ಸ್ಟಾರ್ ಸಿಂಗರ್ಸ್ ಹಾಗೂ ಎದೆ ತುಂಬಿ ಹಾಡುವೆನು ಸಂಗೀತಗಾರರಿಂದ ಗೀತಾ ಸಂಭ್ರಮ ಕಾರ್ಯಕ್ರಮ 24ನೇ ಶುಕ್ರವಾರ ಸಂಜೆ 7ರಿಂದ ಗಂಗಾವತಿ ಪ್ರಾಣೇಶ್ ಮತ್ತು ಸಂಗಡಿಗರಿಂದ ಮಹಾ ನಗೋತ್ಸವ ಹಾಗೂ ಮಜಾ ಭಾರತ ತಂಡದಿಂದ ಭಾರಿ ಮನರಂಜನ ಕಾರ್ಯಕ್ರಮ ಇದೆ. 25ರ ಶನಿವಾರ ಸಂಜೆ 7ರಿಂದ, ಚಲನಚಿತ್ರ ಹಿನ್ನೆಲೆ ಗಾಯಕ ನವೀನ್ ಸಜ್ಜು ಹಾಗೂ ಸಂಗಡಿಗರಿಂದ ಗೀತೋತ್ಸವ ಕಾರ್ಯಕ್ರಮ ಇದ್ದು ಈ ಎಲ್ಲಾ ಕಾರ್ಯಕ್ರಮಗಳು ಮರಾಠ ಸಮಾಜದ ಆವರಣದಲ್ಲಿ ನಡೆಯುತ್ತದೆ. ದಿನಾಂಕ 23 24 ಮತ್ತು 25ರ ಮಧ್ಯಾಹ್ನ 1 ರಿಂದ 5 ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಜ್ಯಮಟ್ಟದ ಬಾರಿ ಜಂಗಿ ಕುಸ್ತಿ ಕ್ರೀಡೋತ್ಸವ ನಡೆಯಲಿದೆ.

Search