ಕ. ಸಾ ಪ ದಿಂದ ಮಠದ ದತ್ತಿ ನಿಧಿ ಕಾರ್ಯಕ್ರಮ

Culture Literature

Posted on 18-01-2025 |

Share: Facebook | X | Whatsapp | Instagram


ಕ. ಸಾ ಪ ದಿಂದ ಮಠದ ದತ್ತಿ ನಿಧಿ ಕಾರ್ಯಕ್ರಮ

ಹೊಸನಗರ 

ದಿನಾಂಕ 18.01.25 ರ ಶನಿವಾರ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಜೈನ ಮಠ ಇವರ ದತ್ತಿ ದಾನದ ಕಾರ್ಯಕ್ರಮ 

ಸರ್ಕಾರಿ ಪದವಿ ಪೂರ್ವ ಕಾಲೇಜು ಅಮೃತ ಹೊಸನಗರ ತಾಲೂಕು ಇಲ್ಲಿ ನೆರವೇರಿತು. 

ಡಾ ಶ್ರೀ ಸರ್ಫರಾಜ್ ಚಂದ್ರಗುತ್ತಿಯವರು ತಮ್ಮ ಉಪನ್ಯಾಸದಲ್ಲಿ ಆದಿಕವಿ ಪಂಪನ ಕಾವ್ಯಗಳ ಬಗ್ಗೆ ವಿವರಿಸಿ ಮಾತನಾಡಿದರು. ಮಹಾಭಾರತದ ಕಥೆಯನ್ನೇ ಮಹಾಕವಿ ಪಂಪನು ಬರೆದಿರುವ ದೃಷ್ಟಿಕೋನದ ಬಗ್ಗೆ ವಿವರಿಸಿ ಕಾವ್ಯಗಳು ಶತಶತಮಾನಗಳ ಕಳೆದರೂ ತನ್ನ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ ಎಂಬುದಕ್ಕೆ ಇಂತಹ ಕವಿಗಳೇ ಸಾಕ್ಷಿ ಎಂದು ಹೇಳುತ್ತಾ 

ಬ್ರಾಹ್ಮಣನಾಗಿದ್ದ ಪಂಪನು ಜೈನನಾಗಿ ಸೇನಾ ನಾಯಕನಾಗಿ ಕವಿಯಾಗಿ ಅವನ ಬದುಕು ಬರಹ ಎಂದಿಗೂ ಶಾಶ್ವತ ಎಂದು ವಿವರಿಸಿದರು.

ಕಾಲೇಜಿನ ಪ್ರಾಚಾರ್ಯ ಶ್ರೀ ಮಹಮ್ಮದ್ ನಜಹತ್ ಉಲ್ಲ ಉದ್ಘಾಟಿಸಿ ಶ್ರೀ  ರಾಜು ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿದರು 

ಕಸಾಪ ಹುಂಚ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ ಬಶೀರ್ ಅಹ್ಮದ್ ಹೆಚ್ ಎಂ ತಮ್ಮ ಆಶೆಯ ನುಡಿಯಲ್ಲಿ ತಮ್ಮ ಕನ್ನಡ ಪ್ರೇಮ ಮತ್ತು ತಾವು ಸಾಹಿತ್ಯಕ್ಕೆ ಮತ್ತು ಕಾಲೇಜಿಗೆ ಸಲ್ಲಿಸುತ್ತಿರುವ ಸೇವೆ ಮತ್ತು ತಮಗೆ ಸಿಗುತ್ತಿರುವ ಸಹಕಾರದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. 

ಕಾಸಾಪ ಹೊಸನಗರ ತಾಲೂಕು ಅಧ್ಯಕ್ಷ ಗಣೇಶ ಮೂರ್ತಿ ನಾಗರಕೊಡಿಗೆಯವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಇನ್ನು ಮುಂದೆ ಸಾಹಿತ್ಯ  ಅಭ್ಯಾಸವನ್ನು ಹೆಚ್ಚಿಸಿಕೊಂಡು ಬದುಕನ್ನು ಮನಸನ್ನು ಹಗುರ ಮಾಡಿಕೊಳ್ಳುವುದಲ್ಲದೆ ಮುಂದಿನ ವೇದಿಕೆಗಳಲ್ಲಿ ತಾವು ಮಾತನಾಡಬೇಕಾದವರು ಕವಿತೆ  ಕಥೆ ಬರೆದು ಪ್ರಸ್ತುತ ಪಡಿಸಬೇಕು 

ಇನ್ನು ಮುಂದಿನ ಕಾರ್ಯಕ್ರಮದಲ್ಲಿ ನಿಮ್ಮಗಳ ಆಲೋಚನೆಗಳನ್ನು ಕಾವ್ಯರೂಪದಲ್ಲಿ ಕಥೆ ರೂಪದಲ್ಲಿ ಬರೆಯಬೇಕೆಂದು ನಿಮ್ಮ ಜೊತೆಗೆ ಕಸಾಪ ಇರುವುದಾಗಿಯೂ ಪ್ರತಿಭೆಗಳನ್ನು ಗುರುತಿಸಿ ತಾಲೂಕು ಜಿಲ್ಲಾಮಟ್ಟ ದಲ್ಲಿ ಗುರುತಿಸಿ ನಿಮಗೆ ಅವಕಾಶ ಒದಗಿಸುವ ಜವಾಬ್ದಾರಿ ಪರಿಷತ್ತಿನದು ನೀವುಗಳು ಮುಂದೆ ಬರಬೇಕೆಂದು ಈಗಿರುವ ಎಲ್ಲ  ಸಾಹಿತಿಗಳು ಸಹ ಬಾಲ್ಯದಲ್ಲಿಯೇ ಕವಿತೆಗಳನ್ನು ಬರೆದವರು ಎಂದು ಮಕ್ಕಳನ್ನು ಪ್ರೋತ್ಸಾಹಿಸಿದರು 

ಅನಂತಮೂರ್ತಿ ಹೆಚ್ಎಸ್ ನಿಕಟ ಪೂರ್ವ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾಹಿತಿ ಶ್ರೀಮತಿ ಶಶಿಕಲಾ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪ್ರಭಾವತಿ ಮೇಡಂ, ಮಠದ ಪರವಾಗಿ ಶ್ರೀ ದೇವೇಂದ್ರ ಅವರು ಉಪಸ್ಥಿತರಿದ್ದರು 

ಕಾಲೇಜು ಉಪನ್ಯಾಸಕ ಶ್ರೀ ಹಾಲಪ್ಪ ನಿರೂಪಿಸಿ ಇನ್ನೋರ್ವ ಉಪನ್ಯಾಸಕ ಗಿರೀಶ ಅವರು ವಂದಿಸಿದರು

ಕಸಾಪ ಹೊಸನಗರ ತಾಲೂಕು ಸಮಿತಿ ಕಾರ್ಯದರ್ಶಿಗಳಾದ ಶ್ರೀ ಕೆ ಜಿ ನಾಗೇಶ್, ಶ್ರೀ ಕುಬೇಂದ್ರಪ್ಪ, ಶ್ರೀಮತಿ ಅಶ್ವಿನಿ ಪಂಡಿತ್ ಶ್ರೀ ಪ್ರವೀಣ್ ಕಾರಗಡಿ ಉಪಸ್ಥಿತರಿದ್ದರು.

Search