Posted on 17-01-2025 |
Share: Facebook | X | Whatsapp | Instagram
ಶಿವಮೊಗ್ಗ ಜ.17. ವೃದ್ದಾಪ್ಯ ಶೈಶವ ಅವಸ್ಥೆಯನ್ನು ಪುನಃ ತರುತ್ತದೆ ಎಂದು ಚಂದನ ಟಿ.ವಿ.ಯಲ್ಲಿ ಥಟ್ಟಂತ ಹೇಳಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಡಾ.ನಾ.ಸೋಮೇಶ್ವರ ರವರು ಹೇಳಿದರು.ಅವರು ಬಹುಮುಖಿ ಯ 45ನೇ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದು ದೈಹಿಕ ಆರೋಗ್ಯ ಅತ್ಯಂತ ಮುಖ್ಯವಾದ ವಿಷಯ ಆಗಿದೆ.ಚೆನ್ನಾಗಿದ್ದೀರ ಅಂತ ಕೇಳಿದರೆ ಎದುರುಗಡೆ ಯವರು
ನಾನುಚೆನ್ನಾಗಿದ್ದೇನೆ ನೀವು ಚೆನ್ನಾಗಿದ್ದೀರ ಎಂದು ಕೇಳಲೇಬೇಕು.ಶೇಕ್ಸ್ ಪಿಯರ್ ಮನುಷ್ಯ ಜೀವನದ 7ಅಂಶಗಳ ಬಗ್ಗೆ ಹೇಳುತ್ತಾನೆ.
ಶೈಶವ ಬಾಲ್ಯ ಯೌವನ ಗೃಹಸ್ಥ ಆಶ್ರಮದಾಟಿ ವೃದ್ದಾಪ್ಯ ಮುಗಿಸಿ ವಾನಪ್ರಸ್ಥ ಆಶ್ರಮಕ್ಕೆ ಹೋಗಬಹುದು ಕೆಲವರು
ಸನ್ಯಾಸ ಸ್ವೀಕರಿಸಬಹುದು.ವೃದ್ದಾಪ್ಯದಲ್ಲಿ ದೈಹಿಕ ಆರೋಗ್ಯ ಬಹಳ ಮುಖ್ಯವಾದದ್ದು.ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಮ್ಮ ತೂಕ ಕಣ್ಣು ಕಿವಿ ಮೂಗು ನಾಲಿಗೆ ಗಂಟಲು ಆಗಾಗ ಪರೀಕ್ಷೆ ಮಾಡಿಕೊಳ್ಳುವುದು ಮುಖ್ಯ.ಉದಾಹರಣೆಗೆ ನಾವು 5ಅಡಿ ಎತ್ತರವಿದ್ಜರೆ 50 ಕೆ.ಜಿ.ಇರಬೇಕು.ಹಾಗೇ 60ರ ನಂತರ ವಾಸನೆ ಸಾಮರ್ಥ್ಯ ಕಿವಿ ಕೇಳಿಸುವುದು ಬಣ್ಣ ಸರಿಯಾಗಿ ಕಾಣುವುದು ಕಡಿಮೆಯಾಗುತ್ತದೆ.ಹೃದಯ ಪರೀಕ್ಷೆ ಕೂಡ ಮಾಡಿಸಿ ಕೊಳ್ಳಬೇಕು.ಇಂದು ಆರೋಗ್ಯ ಶಿಕ್ಷಣವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.ಎಂದು ಹೇಳಿ ಸುಲಭವಾಗಿ ಮಾಡಬಹುದಾದ ಕೆಲವು ಪರೀಕ್ಷೆಗಳನ್ನು ತೋರಿಸಿಕೊಟ್ಟರು.
ಹಿರಿಯ ನಾಗರಿಕರು ಕನಿಷ್ಠ ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು ಎಂದರು.
ಬಹುಮುಖಿಯ ಡಾ.ಹೆಚ್.ಎಸ್.ನಾಗಭೂಷಣರವರು ಅತಿಥಿಗಳನ್ನು ಪರಿಚಯ ಮಾಡಿಕೊಟ್ಟು ಥಟ್ಟಂತ ಹೇಳಿ ಕಾರ್ಯಕ್ರಮ 22ವರ್ಷಗಳಿಂದ ನಡೆಯುತ್ತಿದೆ.ಸಾವಿರಾರು ಪುಸ್ತಕ ಬಹುಮಾನ ನೀಡಿ ಸೋಮೇಶ್ವರ ರವರು ಪುಸ್ತಕ ಪರಿಚಾರಕರೇ ಆಗಿದ್ದಾರೆ ಎಂದರು.