ಕಸ್ತೂರಬಾ ರಸ್ತೆಯ ಚಾಟ್ಸ್ ಕಾರ್ನರ್ ಮಾಲೀಕನ ಮೇಲೆ ಹಲ್ಲೆ

ಕ್ರೈಂ Local

Posted on 15-01-2025 |

Share: Facebook | X | Whatsapp | Instagram


ಕಸ್ತೂರಬಾ ರಸ್ತೆಯ ಚಾಟ್ಸ್ ಕಾರ್ನರ್  ಮಾಲೀಕನ ಮೇಲೆ ಹಲ್ಲೆ

ಕಸ್ತೂರಬಾ ರಸ್ತೆಯ ಚಾಟ್ಸ್ ಕಾರ್ನರ್  ಮಾಲೀಕನ ಮೇಲೆ ಹಲ್ಲೆ

    ಶಿವಮೊಗ್ಗ ಇಲ್ಲಿನ ಗಾಂಧಿ ಬಜಾರ್ ನ ಕಸ್ತೂರ ಬಾ ರಸ್ತೆಯ ಚಾಟ್ ಕಾರ್ನರ್ ಮಾಲೀಕರಾದ ಹೀರ ಎಂಬುವರ ಮೇಲೆ ಗಾಂಜಾ ಮತ್ತಿನ ದುಷ್ಕರ್ಮಿಗಳು  ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. 

    ಇತ್ತೀಚೆಗೆ ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಮಾಡುವ ಗ್ಯಾಂಗ್ ಗಳು ಸಕ್ರಿಯವಾಗಿದ್ದು ಯುವಕರು, ಕಾಲೇಜು ವಿದ್ಯಾರ್ಥಿಗಳು ಇವರ ಟಾರ್ಗೆಟ್ ಆಗಿದ್ದಾರೆ. ಈ ಗಾಂಜಾ ಸೇವಿಸಿದ ಯುವಕರು ಸುಖ ಸುಮ್ಮನೆ ಗಲಾಟೆ ಮಾಡಿ ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿದ್ದಾರೆ.

    ನಿನ್ನೆ ಸಂಜೆ  ನಾಲ್ಕು ಜನರು ವಿಳಾಸ ಕೇಳುವ ನೆಪದಲ್ಲಿ ಅಂಗಡಿ ಮಾಲೀಕ ಹೀರಾ ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ವ್ಯಾಪಾರಿಗೂ ಮತ್ತು ದುಷ್ಕರ್ಮಿಗಳಿಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲದಿದ್ದರೂ ಗಾಂಜಾ ಮತ್ತಿನಲ್ಲಿದ್ದರೆಂದು ಸಾರ್ವಜನಿಕರು ತಿಳಿಸಿದ್ದಾರೆ.  ಹಲ್ಲೇ ಮಾಡಿ ಪರಾರಿ ಯಾಗುವಾಗ ಸಾರ್ವಜನಿಕರು ಒಬ್ಬನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಮೂರು ಜನರು ಪರಾರಿಯಾಗಿದ್ದಾರೆ.  ಭಾಗಶಃ ಅಂಗಡಿಗಳು ಮುಚ್ಚಿದ್ದು . ಈ ಹಲ್ಲೇ ನಡೆದ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹೆಚ್ಚಿನ ತನಿಖೆಗಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Search