ತೀರ್ಥಹಳ್ಳಿಯ. ಡಾಕ್ಟರ್ ದಿನಮಣಿ ವಿಧಿವಶ

Deth News Taluk

Posted on 14-01-2025 |

Share: Facebook | X | Whatsapp | Instagram


ತೀರ್ಥಹಳ್ಳಿಯ. ಡಾಕ್ಟರ್ ದಿನಮಣಿ ವಿಧಿವಶ

ನವ ತೀರ್ಥಹಳ್ಳಿಯ ನಿರ್ಮಾರ್ತೃಗಳಲ್ಲಿ ಒಬ್ಬರಾಗಿ ಸಾರ್ವಜನಿಕ ಬದುಕಿನಲ್ಲಿ ಪರಿಶುದ್ದತೆಯನ್ನು ಎತ್ತಿ ಹಿಡಿದಿದ್ದ ದಿವಂಗತ ಡಾ.ಬಿ.ಎನ್ ರಂಗಪ್ಪನವರ ಪುತ್ರ ಡಾ.ದಿನಮಣಿಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ದಿನಮಣಿಯವರು ತೀರ್ಥಹಳ್ಳಿಯಲ್ಲಿ ಕಳೆದ ನಲವತ್ತು ವರ್ಷಗಳಿಂದ ವೈದ್ಯ ವೃತ್ತಿಯನ್ನು  ಮಾಡುವುದರ    ಮೂಲಕ ಜನಾನುರಾಗಿ ವೈದ್ಯರೆನಿಸಿಕೊಂಡಿದ್ದರು.ಇವರು ಕೊಡುತ್ತಿದ್ದ ಔಷಧ ಮಾತ್ರೆ,ಇಂಜೆಕ್ಷನ್ ಗಳು ಸೇರಿದಂತೆ ತಮ್ಮ ಸೇವೆಗೆ ಕೇವಲ ಐದು ರೂಪಾಯಿಗಳಷ್ಟನ್ನೇ ತೆಗೆದುಕೊಳ್ಳುತ್ತಿದ್ದ ಇವರು ಬಡ ರೋಗಿಗಳ ಪ್ರೀತಿ ವಿಶ್ವಾಸ ಗಳಿಸಿದ್ದರು. ಅರವತ್ತರ ದಶಕದಲ್ಲೇ ಎಂಬಿಬಿಎಸ್ ಮಾಡಿದ್ದರೂ ವೈದ್ಯಕೀಯ ವೃತ್ತಿಯ ಘನತೆಗೆ ಬಂಗ ತರದೆ   ಐದು ರೂಪಾಯಿಯ ಡಾಕ್ಟರ್ ಎನಿಸಿಕೊಂಡವರು.

ಪತ್ನಿ ಮತ್ತು ಪುತ್ರಿಯನ್ನು ಅಗಲಿರುವ ಶ್ರೀಯುತರ ಅಂತಿಮ ದರ್ಶನಕ್ಕೆ ತಮ್ಮ ಸೊಪ್ಪುಗುಡ್ಡೆಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನೆಂಪೆ ದೇವರಾಜ್ 


Search