ಶಿಕಾರಿಪುರ ಪರೋಪಕಾರಂನಿಂದ ಪಾರ್ಕ್ ಸ್ವಚ್ಚತೆ

Social Program Education

Posted on 12-01-2025 |

Share: Facebook | X | Whatsapp | Instagram


ಶಿಕಾರಿಪುರ ಪರೋಪಕಾರಂನಿಂದ ಪಾರ್ಕ್ ಸ್ವಚ್ಚತೆ

ಶಿಕಾರಿಪುರ ಪರೋಪಕಾರಂನಿಂದ ಪಾರ್ಕ್ ಸ್ವಚ್ಚತೆ 

        ಶಿಕಾರಿಪುರ ಜ. 12.  ಇಲ್ಲಿನ ಪರೋಪ ಕಾರಂ ಸಂಸ್ಥೆ ತನ್ನ‌ 301ನೇ ಕಾರ್ಯಕ್ರಮದ ಅಂಗವಾಗಿ ಶಿಕಾರಿಪುರದ ಹೊಸ ಬಡಾವಣೆಯ ‌ ಪಾರ್ಕ್ ಸ್ವಚ್ಛತಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಂಡಿತ್ತು.
ಈ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಅತ್ಯಂತ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು ಪ್ರತಿ ಭಾನುವಾರ 20 ರಿಂದ 50 ಜನ ಯುವಕರು ಮತ್ತು ಮಧ್ಯವಯಸ್ಕರು ಸೇರಿಕೊಂಡು ಊರಿನ ಸ್ವಚ್ಛತೆಯನ್ನು ಕೈಗೊಳ್ಳುತ್ತಾರೆ ಈ ಸಂಸ್ಥೆ ಕೊರೋನ ಸಮಯದಲ್ಲಿ ಅನೇಕ ಜನ ರೋಗಿಗಳಿಗೆ ತುಂಬಾ ಸಹಾಯವನ್ನು ಮಾಡಿದೆ  ಇಲ್ಲಿನ ಪುರಸಭೆಯ ಕೆಲಸಗಾರರಿಗೆ ಚರಂಡಿ ರಸ್ತೆ ಪಾರ್ಕ್ ಕ್ಲೀನ್ ಮಾಡುವ ಜಾಡ ಮಾಲಿಗಳಿಗೆ ಪ್ರತಿ ವರ್ಷ ಉತ್ತಮ ಕೆಲಸಕ್ಕಾಗಿ ಸನ್ಮಾನವನ್ನು ಕೂಡ ಮಾಡುತ್ತದೆ. ಈ ಸಂಸ್ಥೆಯಲ್ಲಿ ಅಧ್ಯಕ್ಷ ಕಾರ್ಯದರ್ಶಿ ಅಥವಾ ಇತರ ಪದಾಧಿಕಾರಿಗಳ ಪಟ್ಟಿ ಇಲ್ಲ ಬದಲು ಒಬ್ಬರು ಜವಾಬ್ದಾರಿ ತೆಗೆದುಕೊಂಡು ವಾಟ್ಸಾಪ್ ಮುಖಾಂತರ ಎಲ್ಲರಿಗೂ ಕೆಲಸದ ವಿವರ ಕಳಿಸುತ್ತಾರೆ ಅವರು ನಿರ್ದಿಷ್ಟ ಜಾಗದಲ್ಲಿ ಸೇರಿಕೊಂಡು ಪಾರ್ಟಿ ಮಾಡುವ ಕೆಲಸವನ್ನು ಮಾಡುತ್ತಾರೆ. 
       ಸರ್ವರಿಗೂ ಸಮಾನವಾದ ಅವಕಾಶವಿದ್ದು ಯಾರು ಬೇಕಾದರೂ ಈ ಕೆಲಸಕ್ಕೆ ಬರಬಹುದು ಅವರನ್ನು ಪರೋಪಕಾರ ಬಳಗ ಎಂದು ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಬಿಟ್ಟರೆ ಪರೋಪಕಾರಂ ಬಳಗ ಇರುವುದು ಶಿಕಾರಿಪುರದಲ್ಲಿ ಮಾತ್ರ ಅದು ಕೂಡ ಉತ್ತಮವಾದ ಕಾರ್ಯವನ್ನು ಕೈಗೊಳ್ಳುತ್ತಿದೆ.

ವರದಿ ಡಿಡಿ ಶಿವಕುಮಾರ್.

Search
Recent News