ನಾ.ಡಿಸೋಜ ಜನಪ್ರಿಯ ಸಾಹಿತಿ ಅಲ್ಲದಿದ್ದರೂ ಜನಪರ ಸಾಹಿತಿ ಡಾ.ನಾಗಭೂಷಣ

Social Program Education

Posted on 11-01-2025 |

Share: Facebook | X | Whatsapp | Instagram


ನಾ.ಡಿಸೋಜ ಜನಪ್ರಿಯ ಸಾಹಿತಿ ಅಲ್ಲದಿದ್ದರೂ ಜನಪರ ಸಾಹಿತಿ  ಡಾ.ನಾಗಭೂಷಣ

ನಾ.ಡಿಸೋಜ ಜನಪ್ರಿಯ ಸಾಹಿತಿ ಅಲ್ಲದಿದ್ದರೂ ಜನಪರ ಸಾಹಿತಿ  ಡಾ.ನಾಗಭೂಷಣ

    ಶಿವಮೊಗ್ಗ ನಾ.ಡಿಸೋಜಾರವರು ಜನಪ್ರಿಯ ಸಾಹಿತಿ ಅಲ್ಲದಿದ್ದರೂ ಜನಪರ ಸಾಹಿತಿ ಎಂದು ಡಾ.ನಾಗಭೂಷಣರವರು ಹೇಳಿದರು. ಅವರು ಪ್ರಜ್ಞಾವೇದಿಕೆಯಲ್ಲಿ ಪುಸ್ತಕ ಅವಲೋಕನ ಸಭೆ ಯಲ್ಲಿ ನಾ.ಡಿಸೋಜ ಬಗ್ಗೆ ಮಾತನಾಡುತ್ತಾ ನೀನಾಸಂ ಕೆ.ವಿ.ಸುಬ್ಬಣ್ಣನ ನಂತರ ಸಾಗರ ಮತ್ತೊಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿತು. ಬಡತನದ ಹಿನ್ನೆಲೆಯಿಂದ ಬಂದ ನಾಡಿ ಮುಳುಗಡೆಯ ಬಗ್ಗೆ ಮೊದಲ ಬಾರಿಗೆ  ಬರೆದು ಒಂದು ಜ್ವಲಂತ ಸಮಸ್ಯೆ ಬಗ್ಗೆ ತಿಳಿಸಿದರು ಪರಿಸರ ಜನಪರ ಹೋರಾಟಗಾರರು ಹೌದು ತಾವು ದೇವಾಲಯಕ್ಕೆ ಚರ್ಚ್ ಗೆ ಹೋಗದಿದ್ದರು ಬೇರೆಯವರ ಕುಟುಂಬದವರ ನಂಬಿಕೆ ಗೆ ಅಡ್ಡಿ ಬರಲಿಲ್ಲ ಎಂದರು. ನಂತರ ಮಧು ಅವರ ಆರ್ಟಿಫಿಷಿಯಲ್  ಇಂಟೆಲಿಜೆನ್ಸ್ ಪುಸ್ತಕದ ಬಗ್ಗೆ ಮಾತನಾಡಿ ಮುಂದೆ ಸಾಹಿತ್ಯ ರಚನೆ ಕೂಡ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾಡುತ್ತದೆ.ಹಾಗಾದರೆ ಮುಂದೆ ಕಾಫೀರೈಟ್ ಸಮಸ್ಯೆ ಬರುತ್ತದೆ..ಅದರ ಪರಿಹಾರ ಹೇಗೆ ? ಮತ್ತು ಡಿಜಿಟಲ್ ಕಳ್ಳತನ ನಡೆಯುತ್ತದೆ.ಅದನ್ನು ತಡೆಯಲು ಮತ್ತೆ ಈ ಇಂಟೆಲಿಜೆನ್ಸ್ ನಮಗೆ ಸಹಾಯ ಮಾಡುತ್ತದೆ ಎಂದರು.ಮತ್ತೊಂದು ಕತೆ ಪುಸ್ತಕದ ಬಗ್ಗೆ ಹೇಳುತ್ತ ಕನಸೇ ಕಾಡಮಲ್ಲಿಗೆ ಪುಸ್ತಕದ ಬಗ್ಗೆ ಮಾತನಾಡಿ ಅದರ ಭಾಷೆ ಹಾಗೂ ವಿಷಯದ ಬಗ್ಗೆ ತಿಳಿಸಿ ಪುಸ್ತಕ ಕೊಂಡು ಓದಬೇಕು ಎಂದರು.ಮತ್ತೊಬ್ಬ ಲೇಖಕ ಶಿವಕುಮಾರ ಮಾವಳ್ಳಿ ಯವರ ದೇವರು ಆರೆಸ್ಟ್ ಆದ ಕೃತಿ ಬಗ್ಗೆ ಮಾತನಾಡಿ ಇದರ ಪಾತ್ರಗಳು ವಿಸ್ಮಯ ಮೂಡಿಸುತ್ತದೆ.ಇವರ ಎಲ್ಲಾ ಕತೆಗಳು ತಮ್ಮ ಶೀರ್ಷಿಕೆ ಯಿಂದ ಆಕರ್ಷಿಸುತ್ತವೆ.ಮತ್ತು ವ್ಯವಸ್ಥೆಯಲ್ಲಿ ಸಿಕ್ಕಿ ಒದ್ದಾಡುವ  ಮನುಷ್ಯನ ಬದುಕಿನ ಬಗ್ಗೆ ಬರೆಯಲಾಗಿದೆ.ಎಂದರು.
    ಕತೆಗಾರ ಶಿವಕುಮಾರ ಮಾವಳ್ಳಿ ಮಾತನಾಡಿ ಇಂದು ಪುಸ್ತಕ ಬರೆಯುವುದು ಮಾರಾಟ ಮಾಡುವುದು ಉದ್ಯಮವಾಗಿದೆ ಎಂದರು.ಕತೆಗಾರ ಮಧು ಮಾತನಾಡಿ ಪುಸ್ತಕದ ಅಂಗಡಿಗೆ ಹೋಗಿ ಪುಸ್ತಕ ತೆಗೆದುಕೊಳ್ಳಿ. ಆಗ ಹೊಸ ದರ್ಶನ ಸಿಗುತ್ತದೆ.ಕೆಲವು ಹೊಸ ಪುಸ್ತಕ ನಿಮಗೆ ದೊರೆಯುತ್ತದೆ ಎಂದರು. ಪ್ರಜ್ಞಾ ಬುಕ್ ಹೌಸ್ ನ ಕೃಷ್ಣಮೂರ್ತಿಯವರು ಎಲ್ಲರನ್ನೂ ವಂದಿಸಿದರು.

Search