ಭಾರತದ ಕ್ರಾಂತಿಕಾರಿ ಸನ್ಯಾಸಿ ವೀರ ವಿವೇಕಾನಂದ

famous personalities history

Posted on 11-01-2025 |

Share: Facebook | X | Whatsapp | Instagram


ಭಾರತದ ಕ್ರಾಂತಿಕಾರಿ ಸನ್ಯಾಸಿ ವೀರ ವಿವೇಕಾನಂದ

       ೨೦ನೇ ಶತಮಾನದ ಭಾರತದ ಮಹಾಪುರುಷರೆಂದರೆ ಸ್ವಾಮಿ ವಿವೇಕಾನಂದರು ಮತ್ತು ಅವರ ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರು. ೧೮೬೩ರ ಜನವರಿ ೧೨ರಂದು ಕಲ್ಕತ್ತಾದ ವಿಶ್ವನಾಥ ದತ್ತ ಭುವನೇಶ್ವರಿ ದಂಪತಿಗಳಿಗೆ ಇವರು ಜನಿಸಿ ನರೇಂದ್ರ ಎಂಬ ಹೆಸರನ್ನು ಹೊಂದಿದರು. ಇವರು ಕಾಯಸ್ಥ ಕ್ಷತ್ರಿಯ ಜಾತಿಗೆ ಸೇರಿದವರಾಗಿದ್ದು ಉಪೇಂದ್ರನಾಥ ದತ್ತ ಮತ್ತು ಸ್ವರ್ಣದೇವಿ ಇವರ ತಮ್ಮ ತಂಗಿಯರಾಗಿದ್ದರು ೧೮೮೨ ರಲ್ಲಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದವರು ತಮ್ಮ ಜೀವನದ ದಿಕ್ಕನ್ನು ಬದಲಾಯಿಸಿಕೊಂಡು ಸಮಾಜವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ತೊಡಗಿದರು ೧೮೮೮ ರಿಂದ ೧೮೯೩ ರವರೆಗೆ ಸಂಪೂರ್ಣ ಭಾರತವನ್ನು ಐದು ವರ್ಷಗಳ ಕಾಲ ಸುತ್ತಿ ಜನಜೀವನವನ್ನು ಹತ್ತಿರದಿಂದ ನೋಡಿದರು ಮತ್ತು  ಮೈಸೂರಿನಗೆ ಬಂದಿದ್ದಾಗ ಸಿಡುಬು ರೋಗ ಬಂತು.ಆಗಿನ ಮಹಾರಾಣಿಯಾಗಿದ್ದ ಕೆಂಪನAಜಮ್ಮಣ್ಣಿಯಿAದ ಸಹಾಯ ಪಡೆದು  ಮೈಸೂರಿನ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮೈಸೂರು ಒಡೆಯರಿಂದ ಹಾಗೂ ಚಿಕ್ಕಮಗಳೂರಿನ ಕೆಲವರಿಂದ ಹಣ ಪಡೆದು ಅಮೆರಿಕಕ್ಕೆ ಹೋದರು. ಅಲ್ಲಿನ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ೧೮೯೩ ಸೆಪ್ಟೆಂಬರ್ ೧೧ರಂದು ಅವರು ಮಾಡಿದ ಚಿಕಾಗೊ ನಗರದ ಭಾಷಣ ಇವರನ್ನು ವಿಶ್ವವಿಖ್ಯಾತಿಯನ್ನಾಗಿ ಮಾಡಿತು.

      ಧ್ಯಾನ ಯೋಗ, ಕರ್ಮ ಯೋಗ, ಭಕ್ತಿ ಯೋಗ, ರಾಜಯೋಗಗಳನ್ನು ಕಲಿತುಕೊಂಡ ಇವರು ವೇದ ವೇದಾಂತದ ಬಗ್ಗೆ ಅನೇಕ ಕಡೆ ಉಪನ್ಯಾಸ ಮಾಡಿ ಜನಪ್ರಿಯರಾದರು. ೧೯೦೭ ಜುಲೈ ೪ ರಂದು ಮರಣ ಹೊಂದಿದರು.ಇವರು ಬದುಕಿದ್ದು ಕೇವಲ ೩೯ ವರ್ಷ ಆರು ತಿಂಗಳು ಮಾತ್ರ ಆದರೆ ವಿದ್ಯಾರ್ಥಿ ಸಾಧಕರಾಗಿ ಅಲೆಮಾರಿ ಸನ್ಯಾಸಿಯಾಗಿ ವೇದಾಂತ ಪ್ರಚಾರಕರಾಗಿ ಇವರು ಮಾಡಿದ ಕಾರ್ಯ ನೂರು ವರ್ಷವಾದರೂ ಯಾರಿಗೂ ಮಾಡಲು ಸಾಧ್ಯವಿಲ್ಲ. ಭಾರತದ ವೇದಾಂತ ಸಮಾನತೆಯನ್ನು ಬೋಧಿಸುತ್ತದೆ ಆದರೆ ಭಾರತದ ದುಡಿಯುವ ಜನರ ಸ್ಥಿತಿಯನ್ನು ನೋಡಿ ಜಾತಿ ಪದ್ಧತಿಯನ್ನು ನೋಡಿ ಮರುಗಿ ಅದರ ವಿರುದ್ಧ ಹೋರಾಟವನ್ನು ಮಾಡಿದರು. ಭಾರತೀಯರಲ್ಲಿ ಸ್ವಾಭಿಮಾನ ಆತ್ಮವಿಶ್ವಾಸವನ್ನು ಮೂಡಿಸಿದರು. ಇವರು ಯುವಕರಲ್ಲಿ ಮೂಡಿಸಿದ ಜಾಗೃತಿಯನ್ನು ನೋಡಿಯೇ ಇವರ ಹುಟ್ಟು ಹಬ್ಬವನ್ನು ಅಂತರಾಷ್ಟ್ರೀಯ ಯುವ ವರ್ಷ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ.

     ವಿವೇಕಾನಂದರು ಜ್ಞಾನಿಗಳಲ್ಲಿ ಶ್ರೇಷ್ಠ ಜ್ಞಾನಯೋಗಿ ಭಕ್ತರಲ್ಲಿ ಪರಮಭಕ್ತ ಕರ್ಮಯೋಗದಲ್ಲಿ ಉನ್ನತ ಕರ್ಮ ಯೋಗಿ. ಉಸಿರಾಡುತ್ತಿದ್ದರು ಸತ್ತಂತಿದ್ದ ಜಡ್ಡುಗಟ್ಟಿ ಜೋಮು ಹಿಡಿದಿದ್ದ ಗೆದ್ದಲು ಕಟ್ಟಿದ್ದ ಭಾರತೀಯ ಸಮಾಜವನ್ನು ವಿವೇಕಾನಂದರು ತಿಳುವಳಿಕೆಯ ವೀರಾ ವೇಷದಿಂದ ಎಬ್ಬಿಸಿದರು . ಜನರನ್ನು ಮೂಢನಂಬಿಕೆಗೆ ಗುರಿ ಮಾಡುವ ಪೂಜಾರಿಗಳು ಮುಲ್ಲಾ ಗಳು ಪಾದ್ರಿಗಳು ಫಾರ್ಸಿಗಳು ಇವರನ್ನು ಒದ್ದೋಡಿಸಿ ದೇವಸ್ಥಾನ ಚರ್ಚ್ ಮಸೀದಿ ಗಳನ್ನು ಧ್ವಂಸ ಮಾಡಿ, ದೇವರಲ್ಲಿ ನಂಬಿಕೆ ಇಲ್ಲದವನು ನಾಸ್ತಿಕನಲ್ಲ ತನ್ನಲ್ಲಿ ತಾನು ನಂಬಿಕೆ ಇಡದವನು ನಾಸ್ತಿಕ ಎಂದು ಕರೆದರು. ಅವರ ಅನುಷ್ಠಾನ ವೇದಾಂತ ಕೃತಿಯಲ್ಲಿ ಬುದ್ಧ ನನ್ನ ಇಷ್ಟ ದೇವತೆ ನನ್ನ ಗುರು ಎಂದು ಹೇಳಿದ್ದಾರೆ. ಮನುಷ್ಯರನ್ನು ಶಕ್ತಿವಂತರನ್ನಾಗಿ ವೀರ್ಯವಂತರನ್ನಾಗಿ ಪುರುಷ ಸಿಂಹರನ್ನಾಗಿ ಮಾಡುವುದೇ ಅವರ ಬದುಕಿನ ಪರಮ ಗುರಿಯಾಗಿತ್ತು ಅವರ ಭಾಷಣಗಳನ್ನು ಬರವಣಿಗೆಯನ್ನು ಸಂವಾದಗಳನ್ನು ಪತ್ರಗಳನ್ನು  ಓದಿದರೆ  ವ್ಯಕ್ತಿಯು ಚೈತನ್ಯದ ಚಿಲುಮೆಯಾಗುತ್ತಾನೆ ಅವರ ಉಪದೇಶವನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ದೌರ್ಬಲ್ಯವನ್ನು ತ್ಯಜಿಸಿ ಎಂದು ಹೇಳಿದ್ದಾರೆ.

ಅನಾಥ ದೇವೋ ಭವ ದರಿದ್ರ ದೇವೋ ಭವ ಎಂದು ಹೇಳಿದ ವಿವೇಕಾನಂದರು ತಮ್ಮ ಸನ್ಯಾಸಿ ಶಿಷ್ಯರನ್ನು ಸಾಮಾಜಿಕ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಿದರು. ವಿವೇಕಾನಂದರು ಯಾವ ಧರ್ಮವನ್ನು ದ್ವೇಷಿಸಲಿಲ್ಲ ಯಾವ ಧರ್ಮವನ್ನು ವಿಶೇಷವಾಗಿ ಹೊಗಳಲ್ಲಿಲ್ಲ ಎಲ್ಲಾ ಧರ್ಮವನ್ನು ಒಪ್ಪಿಕೊಂಡರು. ಮನುಷ್ಯರಲ್ಲಿ ವಿಚಾರ ಶಕ್ತಿ ಬೆಳೆಯುತ್ತಾ ಹೋದರೆ ಮಾತ್ರ ಅದು ನಮ್ಮ ಪ್ರಗತಿ ಎಂದು ಹೇಳಿ ವಿಚಾರ ಮಾಡದೆ ಸುಮ್ಮನೆ ಯಾವುದನ್ನು ಅನುಸರಿಸಬಾರದು ಎಂದರು.

ವೇದಗಳಲ್ಲಿ ನರಕದ ಮಾತೇ ಇಲ್ಲ ಅನಂತರ ಬಂದ ಪುರಾಣಗಳು ನರಕವಿಲ್ಲದಿದ್ದರೆ ಧರ್ಮವೇ ಪೂರ್ಣವಾಗುವುದಿಲ್ಲವೆಂದು ಹಲವು ನರಕವನ್ನು ಸೃಷ್ಟಿಸಿದವು. ವಿಧವೆಯರ ದುಃಖವನ್ನು ಶಮನ ಮಾಡದ ಅನಾಥರ ಬಾಯಿಗೆ ಒಂದು ತುತ್ತು ಅನ್ನವನ್ನು ಕೊಡದ ಧರ್ಮದಲ್ಲಾಗಲಿ ದೇವರಲ್ಲಾಗಲಿ ನನಗೆ ನಂಬಿಕೆ ಇಲ್ಲ ಬಾಲ್ಯ ವಿವಾಹವನ್ನು ಖಂಡಿಸಿದರು .ವಿದ್ಯೆಯನ್ನು ಕಲಿತು ವಯಸ್ಸಾದ ಮೇಲೆ ಮದುವೆಯಾಗುವ ಹೆಂಗಸರ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳಿಂದ ಮಾತ್ರ ದೇಶದ ಕಲ್ಯಾಣವಾಗುತ್ತದೆ. ಒಬ್ಬ ಮಹಾಪುರುಷ ಅವತರಿಸಿದರೆ ಅವನ ಸುತ್ತಲೂ ನಾಯಿಯಂತೆ ಬೊಗಳುವವರು ಹಲವರು ಇರುತ್ತಾರೆ ಮಹಾಪುರುಷರು ಜಗತ್ತಿಗೆ ಬರುವುದು ಒಂದು ದಿವ್ಯ ಸಂದೇಶವನ್ನು ಕೊಡಲೇ ಹೊರತು ಕೀರ್ತಿಯನ್ನು ಗಳಿಸುವುದಕ್ಕಲ್ಲ ಹಿಂದೆ ಬರುವವರಿಗೆ ಗುರಿ ತಲುಪಲು ರಾಜಮಾರ್ಗವನ್ನು ತಮ್ಮ ದೇಹದ ರಕ್ತವನ್ನಾದರೂ ಕೊಡುವವರೇ  ಮಹಾಪುರುಷರು. ಪ್ರಪಂಚದಲ್ಲಿ ಅನೇಕ ಮಹಾಪುರುಷರು ಅಜ್ಞಾತವಾಗಿ ಬಂದು ಹೋಗಿದ್ದಾರೆ ಅಂತ ಮಹಾತ್ಮರ ಬಗ್ಗೆ ಜಗತ್ತು ಏನನ್ನು ಅರಿಯದು. ನಮಗೆ ತಿಳಿದಿರುವ ಬುದ್ಧ ಕ್ರಿಸ್ತ ಮೊದಲಾದವರು ದ್ವಿತೀಯ ವರ್ಗಕ್ಕೆ ಸೇರಿದವರು 

ಇಡೀ ವಿಶ್ವವೇ ಒಂದು ಮೂಢನಂಬಿಕೆಯ ಸರಪಳಿಯಲ್ಲಿ ಸಿಲುಕಿದೆ,ಕಾಲ್ಪನಿಕ ದೇವರೆದರು ಅಳುವುದು ಬೇಡುವುದು  ಮೂಢನಂಬಿಕೆಗಳು ಎನ್ನುವುದು ಅನೇಕರಿಗೆ ಗೊತ್ತಿಲ್ಲ ಧರ್ಮದ ಪ್ರತಿಯೊಂದು ಮೂಢನಂಬಿಕೆಯನ್ನು ನೀವು ಒಪ್ಪಬೇಕು ಎನ್ನುವುದು ಮಾನವ ಕೋಟಿಗೆ ಅಪಮಾನ ಮಾಡಿದಂತೆ ಇಪ್ಪತ್ತು ಜನರು ತಮ್ಮ ಮೂಢನಂಬಿಕೆಗಳನ್ನು ತ್ಯಜಿಸುವುದಾದರೆ ನಾನು ೧೦ ಸಹಸ್ರ ಬಾರಿಯಾದರೂ ನನ್ನ ಜನ್ಮವನ್ನು ಅರ್ಪಿಸಲು ಸಿದ್ದನಾಗಿದ್ದೇನೆ ಎಂದಿದ್ದಾರೆ.

    ಕುವೆಂಪುರವರು ಹೇಳುವಂತೆ ಸ್ವಾಮಿ ವಿವೇಕಾನಂದ ಇಲ್ಲದೆ ಹೋಗಿದ್ದರೆ ಹಿಂದೂ ಸಮಾಜವು ಈಗಿನಷ್ಟು ಚೇತನವನ್ನು ಹೊಂದದೆ ಮತ್ತಷ್ಟು ಕೊಳೆ ತುಂಬಿರುತ್ತಿತ್ತು ಲೋಕದಲ್ಲಿ ಯಾರ ಬಲವು ಒಂದು ಕ್ಷಣವಿದ್ದಂತೆ ಮರುಕ್ಷಣ ಇರಲಾರದು ಬಲವು ಹೆಚ್ಚುತ್ತಿರಬೇಕು ಇಲ್ಲವೇ ತಗ್ಗುತ್ತಿರಬೇಕು ವಿವೇಕಾನಂದರ ಕಾಲಕ್ಕೆ ಹಿಂದೂ ಸಮಾಜಕ್ಕೆ ಮರಣ ಭೀತಿ ತಟ್ಟಿತ್ತು ಆದರೆ ಆ ಭಯಕ್ಕೆ ಕಾರಣವಿಲ್ಲವೆಂದು ಭರವಸೆ ತೋರಿ ಸಮಾಜದ ಆತ್ಮಶುದ್ಧಿಯನ್ನು ಮರಳಿ ಬದುಕಿಸಿ ಹಿಂದೂ ಸಮಾಜದ ಬಲವನ್ನು ಹೆಚ್ಚಿಸಿದರು.

     ಹಿಂದೂ ಸಮಾಜದಲ್ಲಿ ಸಾವಿರಾರು ವರ್ಷಗಳ ಕೊಳೆ ಮತ್ತು ಧೂಳು ತುಂಬಿಕೊಂಡಿದೆ ಆದರೆ ಆ ಸಮಾಜ ಇಂತಹ ಧೂಳನ್ನು ಪುರಾತನ ಸಂಪತ್ತು ಎಂದು ಭ್ರಮಿಸಿ ಅದನ್ನೇ ಅಪ್ಪಿ ಕೊಂಡಿದೆ ಅದು ಕಿಟಕಿ ಬಾಗಿಲುಗಳನ್ನು ತೆರೆದು ಒಳಗಿದ್ದ ಹಳೆ ಗಾಳಿಯನ್ನು ಹೊರ ಚೆಲ್ಲಿ ಹೊಸ ಗಾಳಿ ಬೆಳಕುಗಳು ತನ್ನ ಮನೆ ಒಳಗೆ ಬರಮಾಡಿಕೊಳ್ಳಬೇಕು ಹೀಗೆಂದು ಸಾರಿ ಹಿಂದೂ ಸಮಾಜದ ದೋಷ ದೌರ್ಬಲ್ಯಗಳನ್ನು ತೋರಿಸಿದರು. ಹಿಂದೂ ಸಮಾಜಕ್ಕೆ ಸಂಸ್ಕೃತ ಪಾಂಡಿತ್ಯ ಇಂಗ್ಲೀಷ್ ಪಾಂಡಿತ್ಯ ಮಾತ್ರ ಸಾಕಾಗುವುದಿಲ್ಲ ಆ ಸಮಾಜಕ್ಕೆ ಗಂಡೆದೆಯ ಧೈರ್ಯ ಬೇಕು ಈ ಜಗತ್ತು ಭಗವಂತನದು ಈ ಜೀವವು ಭಗವಂತನದು ಆದ್ದರಿಂದ ಬದುಕಿನ ವಿಷಯದಲ್ಲಿ ನಮಗೆ ಗೌರವ ಇರಬೇಕು ಪೌರುಷದಿಂದ ತೇಜಸ್ಸಿನಿಂದ ನಗುಮುಖದಿಂದ ಬದುಕಬೇಕು ಎಂದು ವಿವೇಕಾನಂದರು ಗುಡುಗಿದ್ದಾರೆ.

     ಅಮೆರಿಕದ ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಅವರು ಕೇವಲ ಹಿಂದೂ ಧರ್ಮದ ಬಗ್ಗೆ ಮಾತ್ರ ಮಾತನಾಡದೆ ಸರ್ವಧರ್ಮ ಸಮನ್ವಯವನ್ನು ಸೂಚಿಸಿ ಭಾಷಣ ಮಾಡಿದರು. ಭಿನ್ನ-ಭಿನ್ನವಾದ ಪ್ರದೇಶಗಳಲ್ಲಿ ಜನಿಸಿದ ಮಾನವ ವಿವಿಧ ಮಾರ್ಗಗಳನ್ನು ಅನುಸರಿಸಿದರು ಕೊನೆಗೆ ಆತ ಒಂದೇ ಕಡೆಗೆ ಬರುತ್ತಾರೆ ಏಕೆಂದರೆ ನದಿಗಳು ಯಾವುದೇ ಕಡೆಗೆ ಹರಿದರು ಕೊನೆಗೆ ಸಮುದ್ರವನ್ನೇ ಸೇರುತ್ತದೆ ಹಾಗಾಗಿ ಹಿಂದೂ ಧರ್ಮವೂ ಯಾರು ಯಾವ ರೂಪದಲ್ಲಿ ನನ್ನನ್ನು ಪೂಜಿಸುತ್ತಾರೋ ನಾನು ಅವರಿಗೆ ಆ ರೂಪದಲ್ಲಿ ದೊರಕುತ್ತೇನೆ ಮನುಷ್ಯರೆಲ್ಲರೂ ಕಟ್ಟ ಕಡೆಗೆ ನನ್ನಲ್ಲಿಯೇ ವಿಲೀನವಾಗುತ್ತಾರೆ ಎಂದು ಹೇಳಿದ ಶ್ಲೋಕವನ್ನು ಹೇಳಿ ಸರ್ವ ಧರ್ಮವು ಹೇಗಿರಬೇಕು ಎಂಬುದನ್ನು ಸೂಚಿಸಿದರು ನಾನು ನನ್ನದು ಎಂಬ ಅಹಂಕಾರ ತೊಲಗಬೇಕು ಸ್ವಾರ್ಥತೆ ಮಾಯವಾದರೆ ಮಾತ್ರ ಅನಂತತೆಯ ಅನುಭವ ಆಗುತ್ತದೆ ಆಗ ಅಜ್ಞಾನ ತೊಲಗಿ ಮಾನವನಿಗೆ ಜ್ಞಾನ ಸಿಗುತ್ತದೆ ದುಃಖ ಕಳೆದು ಆನಂದ ಉಂಟಾಗುತ್ತದೆ. 


ಹಿಂದೂ ಧರ್ಮವು ಯಾರನ್ನು ಕೂಡ ಪಾಪಿಗಳೆಂದು ಕರೆಯುವುದಿಲ್ಲ ವೇದಗಳು ಸಮಸ್ತ ಜನ ಚೇತನಗಳಿಗೆ ಇರುವ ಏಕಮಾತ್ರ ಪರಮಾತ್ಮನನ್ನು ಮಾತ್ರ ಧ್ಯಾನಿಸುತ್ತದೆ ಯಾರಿಗೆ ಗಾಳಿಯನ್ನು ಬೆಂಕಿಯನ್ನು ಮಳೆಯನ್ನು ಸಾವನ್ನು ತರಿಸುವುದಕ್ಕೆ ಮತ್ತು ನಿವಾರಿಸುವುದಕ್ಕೆ ಸಾಧ್ಯವಾಗುತ್ತದೆಯೋ ಅಂತಹ ಕರುಣಾಕರನಾದ ದೇವರನ್ನು ಮಾತ್ರ ಪೂಜಿಸುತ್ತದೆ. ಹೀಗೆ ಹೇಳಿ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೆ ಶ್ರೇಷ್ಠತಮ ವ್ಯಕ್ತಿಯಾದರು. ಎಷ್ಟೇ ಬಿಸಿಲು ಬಂದರು ಸೆಕೆ ಆದರೂ ಜನರು ತಂಡ ತಂಡವಾಗಿ ನಿಂತುಕೊAಡು ಎರಡು ಮೂರು ಗಂಟೆಗಳ ಪರ್ಯಂತ ಪ್ರತಿದಿನ ಇವರ ಭಾಷಣವನ್ನು ಕೇಳುತ್ತಿದ್ದರು 

ಕೊನೆಗೆ ಕ್ರೈಸ್ತ ಧರ್ಮಕ್ಕೆ ನೇರವಾಗಿ ಸವಾಲನ್ನು ಹಾಕಿದರು. ಇಂಡಿಯಾ ದೇಶದಲ್ಲಿ ಭಯಂಕರ ಕ್ಷಾಮ ಬಂದು ಲಕ್ಷಾಂತರ ಜನರು ಹಸಿವೆಯಿಂದ ಸತ್ತರು ನೀವು ಅವರಿಗೆ ಸಹಾಯ ಮಾಡಲಿಲ್ಲ, ಅದರ ಬದಲು ಎಲ್ಲಾ ಕಡೆ ಚರ್ಚುಗಳನ್ನು ಮಾತ್ರ ಕಟ್ಟಿದ್ದೀರಿ, ಹಸಿವಿನಿಂದ ಸಾಯುವ ವ್ಯಕ್ತಿಗೆ ಧರ್ಮೋಪದೇಶ ಬೇಕಾಗಿಲ್ಲ ಅವರಿಗೆ ಬೇಕಾಗಿದ್ದು ಆ ಸಮಯದಲ್ಲಿ ಅನ್ನ ಮಾತ್ರ .ಭಾರತದಲ್ಲಿ ಹಣಕ್ಕಾಗಿ ಯಾರು ಕೂಡ ಧರ್ಮ ಬೋಧನೆಯನ್ನು ಮಾಡುವುದಿಲ್ಲ ಎಂದು ಹೇಳಿದರು ಇಂತಹ ಧೀರೋದಾತ್ತ ಮಾತುಗಳನ್ನು ಕೇಳಿ ಅಮೆರಿಕದ ಅನೇಕರ ಮನ ಪರಿವರ್ತನೆಯಾಗಿ ವಿವೇಕಾನಂದ ರವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಸತ್ಕರಿಸಿದರು ಮತ್ತು ಅಮೆರಿಕ ದೇಶದಲ್ಲಿ ಹಿಂದುಗಳ ಬಗ್ಗೆ ಇದ್ದ ಅನೇಕ ಪೂರ್ವಗ್ರಹಗಳನ್ನು ದೂರ ಮಾಡಿದರು. 

ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರಿಗಿಂತ ಮತ್ತೊಬ್ಬ ಮಹಾತ್ಮ ಭಾರತದಲ್ಲಿ ಇದುವರೆಗೆ ಜನಿಸಲಿಲ್ಲ.

Search