Posted on 10-01-2025 |
Share: Facebook | X | Whatsapp | Instagram
ಶಿವಮೊಗ್ಗ ಶರಾವತಿ ಯೋಜನೆಯಿಂದ ಮುಳುಗಡೆಯಾದ ಹೊಸನಗರ ಸಾಗರ ತೀರ್ಥಹಳ್ಳಿ ತಾಲೂಕಿನ ಮುಳುಗಡೆ ಸಂತ್ರಸ್ತರಿಗೆ ಇದುವರೆಗೆ ಹಣ ಬಿಡುಗಡೆಯಾಗದೆ ಅವರು ಸಂದಿಗ್ಧ ಸ್ಥಿತಿಯಲ್ಲಿ ಇದ್ದಾರೆ,ಇವರ ಸಮಸ್ಯೆಗೆ ಪರಿಹಾರ ನೀಡುವ ಬದಲು ಜನ ವಿರೋಧಿ ಸರ್ಕಾರಗಳು ಮತ್ತೆ ಪುನ ಅಳಿದುಳಿದ ಮಲೆನಾಡನ್ನು ಪುನಹ ಮುಳುಗಿಸುವ ಯೋಜನೆಯನ್ನು ಕೈಗೊಳ್ಳುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆ, ವಾರಾಹಿ ಜಲ ವಿದ್ಯುತ್ ಯೋಜನೆ ಗೆ ಅರಣ್ಯ ಬಳಸಿಕೊಳ್ಳಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಶರತ್ತುಬದ್ಧ ಅನುಮತಿ ನೀಡಿದೆ ಪಂಪು ಸ್ಟೋರೇಜ್ ಸ್ಥಳ ಪರಿಶೀಲನೆಗೂ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ 660 ಎಕರೆ ಅರಣ್ಯದಲ್ಲಿ ಸರ್ವೆ ಮಾಡಲು ಒಪ್ಪಿಗೆ ಸಿಕ್ಕಿದೆ ಈ ಯೋಜನೆ ಅನಿಷ್ಠಾನಗೊಂಡರೆ ಸುಮಾರು 82 ಹೆಕ್ಟರ್ ಅರಣ್ಯ ಭೂಮಿಗೆ ಹಾನಿಯಾಗಲಿದೆ. ಒಪ್ಪಿಗೆ ಸಿಕ್ಕಿದರೆ 2029ರಲ್ಲಿ ಕಾಮಗಾರಿ ಆರಂಭಗೊಳಿಸಿ ಎರಡು ಸಾವಿರದ ಮೂವತ್ತರ ವೇಳೆಗೆ ಕಾಮಗಾರಿ ಮುಗಿಸಿ 2033 ರಿಂದ ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.