ಕೊಡಚಾದ್ರಿ ಬೆಟ್ಟಕ್ಕೆ ಕೇಬಲ್ ಕಾರು 28 ಎಕರೆ ಅರಣ್ಯ ನಾಶ

Environment western ghats

Posted on 10-01-2025 |

Share: Facebook | X | Whatsapp | Instagram


ಕೊಡಚಾದ್ರಿ ಬೆಟ್ಟಕ್ಕೆ ಕೇಬಲ್ ಕಾರು 28 ಎಕರೆ ಅರಣ್ಯ ನಾಶ

ಕೊಡಚಾದ್ರಿ ಬೆಟ್ಟಕ್ಕೆ ಕೇಬಲ್ ಕಾರು 28 ಎಕರೆ ಅರಣ್ಯ ನಾಶ

    ಕರ್ನಾಟಕದ ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಕೊಡಚಾದ್ರಿ ಬೆಟ್ಟದಲ್ಲಿ ಕೇಬಲ್ ಕಾರು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಿದ್ಧತೆ ನಡೆಸಿದೆ 3.7 ಕಿ.ಮೀ.ಉದ್ದದ ಈ ರೋಪ್ ವೇಗೆ ಅಂದಾಜು 375 ಕೋಟಿ ವೆಚ್ಚವಾಗಲಿದೆ. ಈ ಯೋಜನೆಯಿಂದ ಕೊಡಚಾದ್ರಿಯ 28 ಎಕರೆ ಕಾಡು ನಾಶವಾಗಲಿದೆ. ಈ ರೋಪ್ ವೇ ನಿರ್ಮಿಸಿದರೆ ಕೊಡಚಾದ್ರಿಯಿಂದ ಕೊಲ್ಲೂರಿಗೆ ಸುಗಮ ಸಂಪರ್ಕ ಏರ್ಪಟ್ಟು ಪ್ರವಾಸೋದ್ಯಮ ಬೆಳೆಯುತ್ತದೆ. ಆದರೆ ಜೀವ ವೈವಿಧ್ಯದ ಈ ತಾಣದಲ್ಲಿ ಈ ಯೋಜನೆಯಿಂದ ಕ್ರಮೇಣ ಹಲವಾರು ಜಾತಿಯ ಅಪರೂಪದ ಪ್ರಾಣಿ ಪಕ್ಷಿಗಳು ನಾಶವಾಗುತ್ತವೆ. 

    ರೋಪ್ ವೇ ಯಲ್ಲಿ ಎರಡು ನಿಲ್ದಾಣ ಹಾಗೂ 9 ಟವರ್ ಗಳು ಬರುತ್ತವೆ. ಈಗ ಪ್ರವಾಸಿಗರು ಬೆಟ್ಟ ಹತ್ತಲು ಮೂರು ಗಂಟೆ ಬೇಕಾಗುತ್ತದೆ ನಿರ್ಮಾಣದ ಬಳಿಕ ಅವಧಿ 30 ನಿಮಿಷಕ್ಕೆ ಇಳಿಯಲಿದೆ. 

ದೇಶದ ಒಟ್ಟು ಭೂ ಪ್ರದೇಶದಲ್ಲಿ ವನ್ಯಜೀವಿ ಪ್ರದೇಶ ಇರುವುದು ಶೇಕಡ ನಾಲ್ಕು ರಷ್ಟು ಮಾತ್ರ ಇಲ್ಲಿ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಬೇಕೆ ವಿನಹ ಪ್ರವಾಸೋದ್ಯಮಕ್ಕಲ್ಲ ಈಗಾಗಲೇ ಒತ್ತಡದಲ್ಲಿರುವ ಪಶ್ಚಿಮ ಘಟ್ಟಗಳ ಮೇಲೆ ಪುನಃ ಬಲಪ್ರಯೋಗ ಬೇಡ ಬದಲಿಗೆ ಮಾನವ ವನ್ಯಜೀವಿ ಸಂಘರ್ಷವನ್ನು ತಪ್ಪಿಸಿ ಸರ್ಕಾರ ವನ್ಯಜೀವಿಗಳಿಗೆ ಅನುಕೂಲ ಮಾಡಿಕೊಡುವುದು ಒಳ್ಳೆಯದು ಎಂದು ವನ್ಯಜೀವಿ ಸಂರಕ್ಷಣವಾಗಿ ಗಿರಿಧರ ಕುಲಕರ್ಣಿ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ನ ಈಶ ವಿಠಲದಾಸ ಸ್ವಾಮೀಜಿ ಕೆಮಾರು ಒತ್ತಾಯಿಸಿದ್ದಾರೆ

Search