ಕೃಷಿಕ ಸಮಾಜದ ರೈತರಿಂದ ಸಾವಯವ ನಡಿಗೆ

Social Program Farmers

Posted on 10-01-2025 |

Share: Facebook | X | Whatsapp | Instagram


ಕೃಷಿಕ ಸಮಾಜದ ರೈತರಿಂದ ಸಾವಯವ ನಡಿಗೆ



ಕೃಷಿಕ ಸಮಾಜದ ರೈತರಿಂದ ಸಾವಯವ ನಡಿಗೆ 


    ಶಿವಮೊಗ್ಗ ಜ 10 ಶಿವಮೊಗ್ಗ ಜಿಲ್ಲೆಯ ಎಲ್ಲಾ ಕೃಷಿಕ ಸಮಾಜದವರು  ಇಂದು ಪಟ್ಟಣದ ಬೀದಿಯಲ್ಲಿ ಮೆರವಣಿಗೆ ನಡೆಸಿ ಸಿರಿಧಾನ್ಯ ಬೆಳೆಯಿರಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಿ ಎಂಬ ಘೋಷಣೆಯನ್ನು ಕೂಗಿ ಪಟ್ಟಣದ ಜಿಲ್ಲಾಧಿಕಾರಿ ಕಚೇರಿಯಿಂದ ಮೆರವಣಿಗೆ ಹೊರಟು ಗೋಪಿ ಸರ್ಕಲ್ ವರೆಗೆ ಮೆರವಣಿಗೆ ನಡೆಸಿ ಗೋಪಿ ಸರ್ಕಲ್ ನಲ್ಲಿ ಮಾನವ ಸರಪಳಿಯನ್ನು ರಚಿಸಿ ನಂತರ ಹಳೆ ತೀರ್ಥಹಳ್ಳಿ ರಸ್ತೆಯಲ್ಲಿರುವ ಕೃಷಿ ಕಚೇರಿಯಲ್ಲಿ ಮೆರವಣಿಗೆಯನ್ನು ಸಮಾಪ್ತಿಗೊಳಿಸಿದರು. 

    ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಯವರು ಈ ಮೆರವಣಿಗೆಗೆ ಹಸಿರು ಬಾವುಟವನ್ನು ತೋರಿಸುವ ಮೂಲಕ ಚಾಲನೆ ನೀಡಿದರು 

    ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕಿರಣ್ ರವರು ಪತ್ರಿಕೆಯೊಂದಿಗೆ ಮಾತನಾಡಿ ಸದ್ಯದಲ್ಲಿಯೇ ಶಿವಮೊಗ್ಗ ಜಿಲ್ಲಾಮಟ್ಟದ ಸಿರಿಧಾನ್ಯ ಪ್ರದರ್ಶನ ಮತ್ತು ಮಾರಾಟ ಪ್ರಚಾರಕ್ಕಾಗಿ ಒಂದು ದಿನದ ಸಿರಿಧಾನ್ಯ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗುವುದು  ಹಾಗೂ ಇದೇ ಜನವರಿ 23ರಿಂದ 26ರ ವರೆಗೆ ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ವತಿಯಿಂದ ಕೃಷಿ ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿದೆ ಎಂದರು. 

    ಶಿಕಾರಿಪುರದಿಂದ ಕೃಷಿಕ ಸಮಾಜದ ಮಾಜಿ ಅಧ್ಯಕ್ಷರಾದ ನಗರ ಮಹದೇವಪ್ಪನವರು ಹಾಗೂ ಕೃಷಿಕ ಸಮಾಜದ ಸದಸ್ಯರಾದ ಡಿ.ಡಿ ಶಿವಕುಮಾರ್ ಮತ್ತು ಜಿಲ್ಲೆಯ ಎಲ್ಲಾ ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷರು ಸದಸ್ಯರು ಮತ್ತು ಪದಾಧಿಕಾರಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 800ಕ್ಕೂ ಹೆಚ್ಚು ಜನ ಇದ್ದ ‌ ಮೆರವಣಿಗೆಯಲ್ಲಿ ಹಸಿರು ವಸ್ತ್ರವನ್ನು ಧರಿಸಿದ್ದ ಕೃಷಿಕ ಸಮಾಜದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಫ್ಲೆಕ್ಸ್ ಗಳನ್ನು ಹಿಡಿದು ಶಿಸ್ತಿನಿಂದ ಮೆರವಣಿಗೆ ಹೊರಟಿದ್ದರು. ಮೆರವಣಿಗೆಯಲ್ಲಿ ಹಿಡಿದ ಫ್ಲೆಕ್ಸ್ ಮೇಲಿನ \"ಬರಗಾಲದಲ್ಲಿ ಬಂಗಾರ ಸಿರಿಧಾನ್ಯ\"  \"ಸಿರಿಧಾನ್ಯ ಸಿಂಗಾರ ಆರೋಗ್ಯ ಬಂಗಾರ\" \"ಸಾವಯವ ನಡಿಗೆ ಸಿರಿಧಾನ್ಯದ ಕಡೆಗೆ \" ಬರಹಗಳು ಆಕರ್ಷಕವಾಗಿದ್ದವು.

ವರದಿ ಶಿವಕುಮಾರ್ ಶಿಕಾರಿಪುರ.

Search