ಹೆಚ್.ಟಿ. ಬಳಿಗಾರ್‌ರವರು ಹೃದಯಘಾತದಿಂದ ನಿಧನ

Deth News Taluk

Posted on 03-01-2025 |

Share: Facebook | X | Whatsapp | Instagram


ಹೆಚ್.ಟಿ. ಬಳಿಗಾರ್‌ರವರು ಹೃದಯಘಾತದಿಂದ ನಿಧನ

ಶಿಕಾರಿಪುರ: ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರಾಗಿದ್ದ ಬಳಿಗಾರ್‌ರವರು ಗುರುವಾರ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ. ಕೆ.ಎ.ಎಸ್. ಅಧಿಕಾರಿಯಾಗಿದ್ದ ಇವರು ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾದರು. ಬಂಗಾರಪ್ಪನವರ ಶಿಷ್ಯರಾಗಿದ್ದ ಇವರು ಎಲ್ಲಾ ಪಕ್ಷದ ನಾಯಕರ ಜೊತೆಯಲ್ಲಿಯೂ ವಿಶ್ವಾಸದಲ್ಲಿದ್ದರು  ಜೆ.ಡಿ.ಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪನವರ ವಿರುದ್ದ  ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಬಿ.ಜೆ.ಪಿ. ಸೇರ್ಪಡೆಗೊಂಡರು.

ಶಿಕಾರಿಪುರ ಏತ ನೀರಾವರಿ ಮತ್ತು ತಾಲ್ಲೂಕಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ತಾಲ್ಲೂಕಿನ ಪ್ರಭಾವಿ ನಾಯಕರಾಗಿದ್ದರು.   ವಾಲ್ಮೀಕಿ ಸಮುದಾಯದ ನಾಯಕರಾಗಿ ಸಮುದಾಯವನ್ನು ತಾಲ್ಲೂಕಿನಲ್ಲಿ ಸಂಘಟಿಸಿದ್ದರು ಮೃತರು ಪತ್ನಿ, ಇಬ್ಬರು ಪುತ್ರಿಯರು ಅಪಾರ ಬೆಂಬಲಿಗರನ್ನು ಬಿಟ್ಟು ಅಗಲಿದ್ದಾರೆ. 

ಮೃತರಿಗೆ ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್ ಯಡಿಯೂರಪ್ಪ, ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರ ಹಾಗೂ ಶಾಸಕರಾದ ಬಿವೈ ವಿಜಯೇಂದ್ರ ಹಾಗೂ ತಾಲ್ಲೂಕಿನ ಬಳಿಗಾರ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Search
Recent News