Posted on 02-01-2025 |
Share: Facebook | X | Whatsapp | Instagram
ಸಾಗರ ತಾಲೂಕಿನ ಇತಿಹಾಸ ವೇದಿಕೆ ಹಾಗೂ ಸಹೃದಯ ಬಳಗ ಏರ್ಪಡಿಸಿರುವ 6ನೇ ತಾಲೂಕು ಇತಿಹಾಸ ಸಮ್ಮೇಳನಕ್ಕೆ ಹೊಸನಗರ ಕೊಡಚಾದ್ರಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾಕ್ಟರ್ ಕೆ ಪ್ರಭಾಕರ್ ರಾವ್ ಆಯ್ಕೆಯಾಗಿದ್ದಾರೆ.
ಜನವರಿ 5ರಂದು ಭಾನುವಾರ ಸಾಗರದ ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 10ಕ್ಕೆ ಈ ಸಮ್ಮೇಳನ ನಡೆಯಲಿದೆ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಉಪನ್ಯಾಸಕ ಎಂ ಕೊಟ್ರೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಇತಿಹಾಸ ತಜ್ಞರಾದ ಡಾ. ಕೆ ಜಿ ವೆಂಕಟೇಶ್ ಸಾಗರ ತಾಲೂಕಿನ ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಪ್ರಬಂಧವನ್ನು ಮಂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞರಾದ ಕೆಳದಿ ವೆಂಕಟೇಶ್ ಜೋಯಿಸ್ ಕಸಾಪ ತಾಲೂಕು ಅಧ್ಯಕ್ಷ ವಿಟಿ ಸ್ವಾಮಿ ಉಪಸ್ಥಿತರಾರುತ್ತಾರೆ.
ಡಾ. ಪ್ರಭಾಕರ್ ರವರು ಭಾರತೀಯ ಇತಿಹಾಸಕಾರರು, ಇದು ನಮ್ಮ ಸಾಗರ, ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ಗ್ರಂಥಗಳನ್ನು ಬರೆದಿದ್ದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳಿಗೆ ಕೆಲವು ಅಧ್ಯಾಯವನ್ನು ಬರೆದಿದ್ದಾರೆ.