Posted on 02-01-2025 |
Share: Facebook | X | Whatsapp | Instagram
ಶಿವಮೊಗ್ಗ ಜಿಲ್ಲೆಯ 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ತೀರ್ಥಹಳ್ಳಿಯ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಜೆ.ಕೆ .ರಮೇಶ್ ಅವರು ಸರ್ವಾನುಮತ ದಿಂದ ಆಯ್ಕೆಯಾಗಿದ್ದಾರೆ.
ಜೆ.ಕೆ. ರಮೇಶ್ ರವರು ಈ ಹಿಂದೆ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ಅನೇಕ ಸಾಹಿತ್ಯಾತ್ಮಕ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದರು.
ಮಲೆನಾಡಿನ ಜಾನಪದ ಬದುಕಿನ ಅಂಟಿಗೆ ಪಿಂಟಿಗೆ, ಕೋಣಂದೂರು ಲಿಂಗಪ್ಪನವರ ಬಗ್ಗೆ, ಹಾಗೂ ಪ್ರವಾಸ ಸಾಹಿತ್ಯ ಸೇರಿ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಕೂಡ ಪುಸ್ತಕಗಳನ್ನು ಬರೆದಿದ್ದು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಸಾಹಿತ್ಯದ ಎಲ್ಲಾ ಒಳ ಹೊರಗುಗಳನ್ನು ಅಧ್ಯಯನ ಮಾಡಿದ ಇವರ ಆಯ್ಕೆಗೆ ಶಿವಮೊಗ್ಗದ ಬಹುಮುಖಿ ಸಂಸ್ಥೆಯ ಡಾ.ಕೆ. ನಾಗಭೂಷಣ್ ಡಾ.ಕೆ .ಜಿ. ವೆಂಕಟೇಶ್ ಪ್ರಶಸ್ತಿ ಪುರಸ್ಕೃತ ನಾಟಕ ನಿರ್ದೇಶಕರಾದ ಕಾಂತೇಶ್ ಕದರಮಂಡಲಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.