Posted on 07-11-2025 |
Share: Facebook | X | Whatsapp | Instagram
ವಾಣಿಜ್ಯ ವಿದ್ಯಾರ್ಥಿಗಳು ಕಲಾಸಕ್ತರು ಆಗಿರುವುದು ಸಂತೋಷಕರ ನೀಲಮ್ಮ ಬಿ.
ವಾಣಿಜ್ಯ ವಿದ್ಯಾರ್ಥಿಗಳು ಕಲಾಸಕ್ತರು ಆಗಿ ಅಭಿರುಚಿ ಬೆಳೆಸಿಕೊಂಡಿರುವುದು ಸಂತೋಷ ತಂದಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಯ ರಿಜಿಸ್ಟರ್ ಆಗಿರುವ ನೀಲಮ್ಮ ಬಿ ಯವರು ಹೇಳಿದರು.
ಅವರು ಕರ್ನಾಟಕ ನಾಟಕ ಅಕಾಡೆಮಿ, ಸಮುದಾಯ ಕರ್ನಾಟಕ, ಸಮುದಾಯ ಶಿವಮೊಗ್ಗ, ಹಾಗೂ ರಂಗಾಯಣ ಶಿವಮೊಗ್ಗದ ಸಂಯುಕ್ತ ಆಶ್ರಯದಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆದ ರಂಗ ಉಪನ್ಯಾಸದ ಉದ್ಘಾಟನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಮೈಸೂರು ರಂಗಾಯಣದ ಮಾಜಿ ನಿರ್ದೇಶಕರು ಆದ ಶ್ರೀ ಜನಾರ್ಧನ (ಜನ್ನಿ) ಮಾತನಾಡಿ, ಮನುಷ್ಯ ಯಾವಾಗಲೂ ಸಂತೋಷವಾಗಿರಬೇಕು, ಶಿವಮೊಗ್ಗ ಮನುಜ ಮತ ವಿಶ್ವ ಪಥ ಕೊಟ್ಟ ನಾಡು, ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಮಾತು ಹೇಳಿದ ಕುವೆಂಪು ನಾಡು ರಸವೇ ಜನನ ವಿರಸ ಮರಣ ಸಮರಸವೇ ಜೀವನವಾದ ನಾಡು ಇದಾಗಿದೆ.ರಂಗ ಭೂಮಿ ಯನ್ನು ಬೆಳೆಸಿ ಜಗತ್ತಿಗೆ ಕನ್ನಡ ಭಾಷೆಯ ಬಗ್ಗೆ ತಿಳುವಳಿಕೆ ನೀಡಿದ ಬಿ.ವಿ.ಕಾರಂತ ಕನ್ನಡದ ಕಂಪನ್ನು ಎಲ್ಲಾಕಡೆ ಹರಡಿದರು.
ಮೂಲಭೂತವಾಗಿ ಮನುಷ್ಯ ಕಲಾವಿದ, ಕಲೆ ನಮ್ಮನ್ನು ವಿಸ್ತಾರಗೊಳಿಸುತ್ತದೆ.ನಾವು ಅಭಿನಯಿಸುವಾಗ ಎಲ್ಲಾ ಪಾತ್ರದ ಬಗ್ಗೆ ತಿಳಿದು ಕೊಂಡು ನಮ್ಮ ಪಾತ್ರ ನಿರ್ವಹಣೆ ಮಾಡುತ್ತೇವೆ.ರಂಗ ಶಿಕ್ಷಣ ಮಾನವೀಯತೆ ಬೆಳೆಸುತ್ತದೆ.ಎಂದರು. ರಂಗಾಯಣ ನಿರ್ದೇಶಕ ಪ್ರಸನ್ನ ಮಾತನಾಡಿ ರಂಗಕಲೆ ನಮ್ಮ ಉತ್ಸವ ಹೆಚ್ಚಿಸುತ್ತದೆ ಪ್ರತಿಯೊಬ್ಬರೂ ಜಾಗೃತವಾಗಿ ಇರುವುದಕ್ಕೆ ರಂಗ ಶಿಕ್ಷಣ ಅಗತ್ಯ.ಮುಂದಿನ ದಿನಗಳಲ್ಲಿ ಕಾಲೇಜು ಶಿಕ್ಷಣ ಗಳಲ್ಲಿ ರಂಗ ಭೂಮಿ ಹೆಚ್ಚು ಅಳವಡಿಸಿ ಕೊಳ್ಳಿ ಎಂದರು,
ಕಾಲೇಜಿನ ಪ್ರಾಂಶುಪಾಲ ಅವಿನಾಶ್ ಅಧ್ಯಕ್ಷೀಯ ನುಡಿಗಳನ್ನು ಆಡಿ ನಮ್ಮ ಕಾಲೇಜು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದು ನಮ್ಮ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತರಾಗಿದ್ದಾರೆ.ಎಂದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ರವೀಂದ್ರನಾಥ ಸಿರಿವರ ಸಮುದಾಯ ಶಿವಮೊಗ್ಗದ ಅಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ ಉಪಸ್ಥಿತರಿದ್ದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಣೇಶ್ ಕೆಂಚನಾಲ ನಿರೂಪಣೆ ಮಾಡಿದರೆ ಕನ್ನಡ ಉಪನ್ಯಾಸಕ ಲವ ಸ್ವಾಗತಿಸಿದರು.ವಂದನಾರ್ಪಣೆ ಯನ್ನು ಡಾ.ದೊಡ್ಡ ನಾಯಕ್ ವಂದಿಸಿದರು.